More

  VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ ರೂ. ಗೆದ್ದು ಇತಿಹಾಸ ಬರೆದ ವಿಕಲಾಂಗೆ!

  ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.

  ಮದುರೈ ನಿವಾಸಿಯಾಗಿರುವ ಕೌಶಲ್ಯ ಕಾರ್ತಿಕ್​(31) ವಾಕ್​ ಮತ್ತು ಶ್ರವಣ ದೌರ್ಬಲ್ಯವನ್ನು ಹೊಂದಿದ್ದಾರೆ. ಕಂಪನ ಮತ್ತು ತುಟಿಯ ಚಲನೆಯನ್ನು ಗಮನಿಸಿ ಕೌಶಲ್ಯ ಅವರು ಸಂವಹನ ನಡೆಸುತ್ತಾರೆ. ಇದೀಗ ಕೋಡಿಶ್ವರಿ ಶೋನಲ್ಲಿ ಕೋಟ್ಯಾಧೀಶ್ವರಿಯಾಗಿ ಹೊರಹೊಮ್ಮಿದ್ದಾರೆ.

  ಈ ಬಗ್ಗೆ ಮಾತನಾಡಿರುವ ಕೌಶಲ್ಯ ನಾನು ಯಾವಾಗಲು ನಮ್ಮ ಕುಟುಂಬದ ಮೇಲೆ ಅವಲಂಬಿತಳಾಗಿದ್ದೆ. ಆದರೆ, ಚಿಕ್ಕಂದಿನಿಂದಲೂ ಕಲಿಕೆಯಲ್ಲಿ ಧೃಢಸಂಕಲ್ಪ ಮತ್ತು ನಾನು ಮಾಡಬೇಕಾದ ಕೆಲಸಗಳಲ್ಲಿ ಮುಂದೆ ಸಾಗುತ್ತಿದ್ದೆ ಎಂದು ಹೇಳಿದ್ದಾರೆ.

  ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ತುಂಬಾ ಗೌರವ ಸಿಕ್ಕಂತಾಗಿದೆ. ನಾನೂ ಕೂಡ ಎಲ್ಲರ ಸಮನಾಗಿ ಕೋಟ್ಯಾಧೀಶ್ವರಿ ಎಂದು ಜಗತ್ತಿಗೆ ಹೆಮ್ಮೆಯಿಂದ ಹೇಳುತ್ತೇನೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

  ಕಾರ್ಯಕ್ರಮ ನಡೆಸಿಕೊಡುವ ರಾಧಿಕಾ ಶರತ್​ ಕುಮಾರ್​ ಮಾತನಾಡಿ, ಕೌಶಲ್ಯ ಭೇಟಿಗೆ ಅವಕಾಶ ಸಿಕ್ಕಿದಕ್ಕೆ ನಾನು ಅದೃಷ್ಟವಂತಳಾಗಿದ್ದೇನೆ. ಕೌಶಲ್ಯ ಇಂದು ಇತಿಹಾಸ ಸೃಷ್ಟಿಸಿದ್ದಾರೆ. ಅವಳ ಗೆಲುವನ್ನು ಅನುಭವಿಸಲು ನನಗೂ ಅವಕಾಶ ಸಿಕ್ಕಿದ್ದು ಖುಷಿಯ ವಿಚಾರ. ಆಕೆಯ ಮುಂದಿನ ಜೀವನ ಉತ್ತಮವಾಗಿರಲಿ ಎಂದು ಹಾರೈಸುತ್ತೇನೆಂದು ತಿಳಿಸಿದ್ದಾರೆ.

  ಅಂದಹಾಗೆ ಕಾರ್ಯಕ್ರಮ ಕಲರ್ಸ್ ತಮಿಳು ಚಾನೆಲ್​ನಲ್ಲು ಮೂಡಿಬರುತ್ತಿದೆ. (ಏಜೆನ್ಸೀಸ್​)

  IDEO|

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts