More

    ಸಂಭಾಜಿ ಸ್ಮಾರಕ ನಿರ್ಮಾಣಕ್ಕೆ 10 ಕೋಟಿ ರೂ.; ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಎಂ.ಜಿ.ಮುಳೆ ಮಾಹಿತಿ

    ಕನಕಗಿರಿ: ಹಿಂದು ಸಾಮ್ರಾಟ್ ಛತ್ರಪತಿ ಶಿವಾಜಿಯ ಸಹೋದರ ಸಂಭಾಜಿ ಸ್ಮಾರಕ ನಿರ್ಮಿಸುವ ಸಲುವಾಗಿ ಕ್ರಿಯಾಯೋಜನೆ ರೂಪಿಸಲು 10 ಕೋಟಿ ರೂ. ಮಂಜೂರಾಗಿದೆ ಎಂದು ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಎಂ.ಜಿ.ಮುಳೆ ಹೇಳಿದರು.

    ಛತ್ರಪತಿ ಶಿವಾಜಿ ಸಹೋದರ ಸಂಭಾಜಿ ಸಮಾಧಿ ಎನ್ನಲಾಗುವ ಪಟ್ಟಣದಲ್ಲಿನ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. ಯುದ್ಧದಲ್ಲಿ ಹತನಾದ ಸಂಭಾಜಿಯನ್ನು ಕನಕಗಿರಿಯ ಹಳ್ಳದ ಪಕ್ಕದಲ್ಲಿ ಸಂಸ್ಕಾರ ಮಾಡಲಾಗಿದೆಯೆಂದು ಸಂಶೋಧನೆಯಿಂದ ತಿಳಿದು ಬಂದಿದೆ. ಈ ಐತಿಹಾಸಿಕ ಸ್ಥಳವನ್ನು ಸಂರಕ್ಷಿಸಿ ಸಂಭಾಜಿ ಸ್ಮತಿಗೆ (ಸಮಾಧಿ) ಅಭಿವೃದ್ಧಿಪಡಿಸಿ ಜಗತ್ತಿಗೆ ತಿಳಿಸುವ ನಿಟ್ಟಿನಲ್ಲಿ ಡಿಪಿಆರ್ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದರು.

    ಸಂಭಾಜಿ ಸ್ಮಾರಕ ನಿರ್ಮಾಣದ ಡಿಪಿಆರ್ ಸರ್ಕಾರಕ್ಕೆ ಸಲ್ಲಿಕೆಯಾದ ಬಳಿಕವೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ಪ್ರಸ್ತಾವನೆಯ ವರದಿ ಅನ್ವಯ ಅನುದಾನ ಬಿಡುಗಡೆಗೊಳಿಸಲು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಸಂಭಾಜಿ ಸ್ಮತಿ ಸಂಶೋಧನೆಗೆ ಮಾಜಿ ಶಾಸಕರೊಬ್ಬರು ಅಡ್ಡಿಪಡಿಸುತ್ತಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅದು ನನಗೆ ಗೊತ್ತಿಲ್ಲ. ಹಾಗೇನಾದರೂ ವಿರೋಧವಿದ್ದರೆ ಅವರೊಂದಿಗೆ ಮಾತನಾಡುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸಂಭಾಜಿ ಸ್ಮಾರಕವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು. ನಿಗಮದ ನೌಕರ ಗುಂಡಪ್ಪ, ಪ್ರಮುಖರಾದ ಸಣ್ಣ ಕನಕಪ್ಪ, ಮಹಾಂತೇಶ ಸಜ್ಜನ, ವಾಗೀಶ ಹಿರೇಮಠ, ವಿನೋದ ಮರಾಠಿ, ಗೋಪಾಲರೆಡ್ಡಿ, ಜೀವಣ್ಣ, ಬಸವರಾಜ ನಾಯಕ, ಗೋಪಿನಾಥ ಗೊಂದಳೆ, ರವಿ ಕಂಪ್ಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts