More

    ಶ್ವೇತಭವನದಲ್ಲಿ ಏರುತ್ತಲೇ ಇದೆ ಕರೊನಾ ಸೋಂಕಿತರ ಸಂಖ್ಯೆ…ಇವಾಂಕಾ ಟ್ರಂಪ್​ ಅಪಾಯದಲ್ಲಿ?

    ವಾಷಿಂಗ್ಟನ್​: ಅಮೆರಿಕದಲ್ಲಿ ಕರೊನಾ ವೈರಸ್​ ತಾಂಡವವಾಡುತ್ತಿದೆ. ಶುಕ್ರವಾರ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಮಾಧ್ಯಮ ಕಾರ್ಯದರ್ಶಿ ಕೇಟೀ ಮಿಲ್ಲರ್​ಗೆ ಸೋಂಕು ದೃಢಪಟ್ಟಿತ್ತು.

    ಇಂದು ಡೊನಾಲ್ಡ್​ ಟ್ರಂಪ್​ ಪುತ್ರಿ ಇವಾಂಕಾ ಟ್ರಂಪ್​ ಅವರ ಪರ್ಸನಲ್​ ಅಸಿಸ್ಟಂಟ್​​ ಕರೊನಾಕ್ಕೆ ತುತ್ತಾಗಿದ್ದಾರೆ. ಈ ಮೂಲಕ ವೈಟ್​ ಹೌಸ್​ಗೆ ಸಂಬಂಧಪಟ್ಟ ಮೂವರು ಸಿಬ್ಬಂದಿಗೆ ಕರೊನಾ ತಗುಲಿದಂತಾಗಿದೆ.

    ಇದನ್ನೂ ಓದಿ: VIDEO: ನೀವೂ ಒಮ್ಮೆ ಮನೆಯಲ್ಲಿ ಮಾಡಿನೋಡಿ ಈ ‘ಭಯಾನಕ ಚಹಾ’ವನ್ನು…!

    ಇವಾಂಕಾ ಅವರ ಪರ್ಸನಲ್​ ಅಸಿಸ್ಟಂಟ್​ ಕೆಲವು ವಾರಗಳಿಂದ ಕರ್ತವ್ಯಕ್ಕೆ ಬರುತ್ತಿರಲಿಲ್ಲ. ವರ್ಕ್​ ಫ್ರಾಂ ಹೋಂನಲ್ಲಿದ್ದರು. ತಮ್ಮ ಮೊಬೈಲ್ ಮೂಲಕವೇ ಕೆಲಸ ಮಾಡುತ್ತಿದ್ದರು.

    ಅವರಲ್ಲಿ ಕರನಾ ಲಕ್ಷಣಗಳೂ ಕಂಡುಬಂದಿರಲಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ತಪಾಸಣೆಗೆ ಒಳಗಾಗಿದ್ದರು. ಇಂದು ಕರೊನಾ ಸೋಂಕು ಇರುವುದು ದೃಢಪಟ್ಟಿದೆ.

    ಇವಾಂಕಾ ಮತ್ತು ಅವರ ಪತಿ ಜೇರ್ಡ್ ಕುಶ್ನರ್​ ಅವರೂ ಕೂಡ ಕೊವಿಡ್​-19 ಟೆಸ್ಟ್​ಗೆ ಒಳಗಾಗಿದ್ದರು. ಶುಕ್ರವಾರ ಇಬ್ಬರ ವೈದ್ಯಕೀಯ ವರದಿಯೂ ನೆಗೆಟಿವ್​ ಎಂದು ಬಂದಿದೆ. ಈಗ ಇವಾಂಕಾ ಟ್ರಂಪ್​ ಅವರ ಆಪ್ತ ಸಹಾಯಕರಲ್ಲಿಯೇ ಕರೊನಾ ಕಂಡುಬಂದರೂ, ಅವರು ಹಲವು ದಿನಗಳಿಂದ ಶ್ವೇತ ಭವನಕ್ಕೆ ಬಾರದ ಕಾರಣ ಅಷ್ಟೇನೂ ಅಪಾಯ ಇಲ್ಲ.

    ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಕರೊನಾ ಅಟ್ಟಹಾಸ: ಇಂದು 30 ವಯಸ್ಸಿಗಿಂತ ಕೆಳಗಿನವರಲ್ಲೇ ಹೆಚ್ಚು ಪ್ರಕರಣ ಪತ್ತೆ

    ಮೈಕ್​ ಪೆನ್ಸ್​ ಅವರ ಮಾಧ್ಯಮ ಕಾರ್ಯದರ್ಶಿ ಕೈಟೀ ಮಿಲ್ಲರ್​ಗೆ ಕರೊನಾ ಇರುವುದಾಗಿ ಟ್ರಂಪ್ ಅವರೇ ತಿಳಿಸಿದ್ದರು. ಹಾಗೇ ಮಿಲ್ಲರ್​ ಅವರ ಪ್ರಾಥಮಿಕ ಸಂಪರ್ಕದಲ್ಲಿ ಮೈಕ್​​ ಪೆನ್ಸ್​ ಕೂಡ ಇದ್ದರು ಎಂದು ಹೇಳಿದ್ದರು.
    ಇದಕ್ಕೂ ಮೊದಲು ಗುರುವಾರ ಟ್ರಂಪ್​ ಅವರ ಖಾಸಗಿ ಕೆಲಸಗಾರನೋರ್ವನಲ್ಲಿ ಕರೊನಾ ದೃಢಪಟ್ಟಿತ್ತು.

    ಇಷ್ಟಾದರೂ ತಮಗೆ ಕರೊನಾ ಭಯ ಇಲ್ಲ ಎಂದು ಡೊನಾಲ್ಡ್​ ಟ್ರಂಪ್​ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಟ್ರಂಪ್ ಕೂಡ ಕರೊನಾ ಟೆಸ್ಟ್​ಗೆ ಒಳಗಾಗಿ ವರದಿ ನೆಗೆಟಿವ್​ ಬಂದಿತ್ತು. ಇತ್ತೀಚೆಗೆ ಪ್ರತಿದಿನ ಕರೊನಾ ಟೆಸ್ಟ್ ಮಾಡಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಹೆಚ್ಚುತ್ತಲೇ ಇದೆ ಕರೊನಾ ವೈರಸ್​ ಅಬ್ಬರ; 24 ಗಂಟೆಯಲ್ಲಿ ಸಾವನ್ನಪ್ಪಿದ್ದು 95 ಮಂದಿ, ಮಹಾರಾಷ್ಟ್ರದ್ದೇ ಮೇಲುಗೈ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts