More

    VIDEO: ಅರೆನಗ್ನ ಸ್ಥಿತಿಯಲ್ಲಿ ಫಿಫಾ ವಿಶ್ವಕಪ್ ಪಂದ್ಯ ನೋಡಲು ಬಂದಾಕೆಗೆ ಇದೀಗ ಬಂಧನ ಭೀತಿ!

    ಕತಾರ್​: ಅರಬ್​ ನಾಡಿನಲ್ಲಿ ನಡೆಯುತ್ತಿರುವ ಫಿಫಾ ವರ್ಲ್ಡ್​​​ ಕಪ್​ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. 2022ರ ವಿಶ್ವಕಪ್​ನಲ್ಲಿ 32 ದೇಶಗಳು ಭಾಗವಹಿಸುತ್ತಿದ್ದು, ಕತಾರ್ ನ ದೋಹಾಗೆ ವಿಶ್ವದೆಲ್ಲೆಡೆಯಿಂದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಉಡುಪಿನ ವಿಚಾರವಾಗಿ ಕೆಲವೊಂದು ನಿಯಮಗಳನ್ನು ಮಂಡಳಿ ರೂಪಿಸಿತ್ತು.

    ನಿಯಮದಂತೆ ಮಹಿಳಾ ಅಭಿಮಾನಿಗಳು ಮೈ ತೋರಿಸುವಂತಹ ಬಟ್ಟೆಗಳನ್ನು ಧರಿಸಬಾರದೆಂದು ಸೂಚಿಸಲಾಗಿತ್ತು. ಅಭಿಮಾನಿಗಳು ತಮ್ಮ ಆಯ್ಕೆಯ ಬಟ್ಟೆಗಳನ್ನು ಧರಿಸಬಹುದು. ಆದರೆ ಕತಾರ್ ದೇಶದ ಕಾನೂನುಗಳನ್ನು ಗೌರವಿಸಿ, ತಮ್ಮ ದೇಹದ ಭಾಗಗಳನ್ನು ಮುಚ್ಚಬೇಕೆಂದು ಸೂಚನೆ ರವಾನಿಸಿತ್ತು.

    ಆದರೆ ಕ್ರೊಯೇಷಿಯಾ ದೇಶದ ಇವಾನಾ ನಾಲ್ ಎಂಬಾಕೆ ಅರೆನಗ್ನ ಉಡುಪಿನಲ್ಲಿ ಫುಟ್​ಬಾಲ್ ಲೀಗ್​ ನೋಡಲು ಬಂದಿದ್ದಾಳೆ. ಅಲ್ಲದೇ, ಅರೆನಗ್ನ ಸ್ಥಿತಿಯಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಇನ್ಸ್​​ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾಳೆ. ಈಕೆಯ ಫೋಟೋಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ನಿಯಮ ಮೀರಿದ್ದಕ್ಕಾಗಿ ಕತಾರ್‌ನಲ್ಲಿ ಜೈಲು ಶಿಕ್ಷೆಯನ್ನು ಎದುರಿಸುವ ಪೇಚಿಗೆ ಸಿಲುಕಿಕೊಂಡಿದ್ದಾಳೆ.

     

    View this post on Instagram

     

    A post shared by Ivana Knöll (@knolldoll)

    ಕ್ರೊಯೇಷಿಯಾದ ಧ್ವಜವನ್ನು ಹೋಲುವ ಬಟ್ಟೆಯನ್ನು ಈಕೆ ಧರಿಸಿ ಮೈದಾನದ ಗ್ಯಾಲರಿಗೆ ಬಂದಿದ್ದಳು. ಈ ವೇಳೆ ಯೋಗ್ಯವಾದ ಬಟ್ಟೆಯನ್ನು ಧರಿಸಿ ಬರುವಂತೆ ಎಚ್ಚರಿಸಿದ ಅಧಿಕಾರಿಗಳು, ಇವಾನಾ ನಾಲ್​ನನ್ನು ಪ್ರೇಕ್ಷಕರ ಗ್ಯಾಲರಿಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ.

     

    View this post on Instagram

     

    A post shared by Ivana Knöll (@knolldoll)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts