LIVE| ಭಾರತದ ಪ್ರಪ್ರಥಮ ಸೂರ್ಯ ಯೋಜನೆ ಆದಿತ್ಯ-ಎಲ್ 1 ಉಡಾವಣೆ ನೇರಪ್ರಸಾರ

51

ನವದೆಹಲಿ: ದೇಶದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಭಾರತದ ಪ್ರಪ್ರಥಮ ಸೂರ್ಯ ಯೋಜನೆ ಆದಿತ್ಯ-ಎಲ್ 1 ಇಂದು ಬೆಳಗ್ಗೆ 11.50ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಕೇಂದ್ರದಿಂದ ಉಡಾವಣೆಯಾಗಲಿದ್ದು, ಕ್ಷಣಗಣನೆ ಆರಂಭವಾಗಿದೆ. ಪಿಎಸ್​ಎಲ್​ವಿ ರಾಕೆಟ್ ಮೂಲಕ ಉಡಾವಣೆ ಆಗಲಿದ್ದು, ಆದಿತ್ಯ-ಎಲ್​ 1 ಉಡಾವಣೆಯ ರೋಮಾಂಚನಕಾರಿ ಕ್ಷಣವನ್ನು ವಿಜಯವಾಣಿ ಯೂಟ್ಯೂಬ್​ ಲೈವ್​ ಮೂಲಕ ವೀಕ್ಷಣೆ ಮಾಡಬಹುದಾಗಿದೆ.

ಸೂರ್ಯನ ಅಧ್ಯಯನಕ್ಕಾಗಿ ವೀಕ್ಷಣಾಲಯ ಹೊಂದಿರುವ ಭಾರತದ ಪ್ರಥಮ ಬಾಹ್ಯಾಕಾಶ ಯೋಜನೆ ಇದಾಗಿದೆ. ನೇಸರನ ಪ್ರಭಾವಲಯವಾದ ಕೊರೊನಾವನ್ನು ವೀಕ್ಷಿಸುವಂತೆ ಆದಿತ್ಯ ನೌಕೆಯನ್ನು ವಿನ್ಯಾಸಗೊಳಿಸಲಾಗಿದೆ. ಸೌರ ಮಾರುತವನ್ನು ವೀಕ್ಷಿಸುವ ಇನ್-ಸಿಟು ವ್ಯವಸ್ಥೆಯೂ ಇದರಲ್ಲಿದೆ. ಭೂಮಿಯಿಂದ 15 ಲಕ್ಷ ಕಿಲೋ ಮೀಟರ್ ದೂರದ ವರೆಗೆ ನೌಕೆ ಕ್ರಮಿಸಲಿದೆ.

ಪ್ರತಿನಿತ್ಯ 1,440 ಚಿತ್ರ ರವಾನೆ

ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯು ಉದ್ದೇಶಿತ ಕಕ್ಷೆಯನ್ನು ತಲುಪಿದ ನಂತರ ನೌಕೆಯಲ್ಲಿನ ಪ್ರಾಥಮಿಕ ಪೇಲೋಡ್ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (ವಿಇಎಲ್​ಸಿ) ಉಪಕರಣವು ಪ್ರತಿದಿನಕ್ಕೆ 1,440 ಚಿತ್ರಗಳನ್ನು ಕಳುಹಿಸಲಿದೆ.

ಚಂದ್ರಯಾನ-3 ಕೇಂದ್ರ ಸರ್ಕಾರದ ಸಾಧನೆಯಲ್ಲ

ISRO Retd. Scientist On Minerals Found On Moon | ಚಂದ್ರಯಾನ-3 ಚಂದ್ರನಲ್ಲಿ ಪತ್ತೆ ಮಾಡಿದ ಖನಿಜಗಳು ಯಾವುವು?