More

    ಕುಮಾರವ್ಯಾಸನ ಕೃತಿಗಳು ಇಂದಿಗೂ ಪ್ರಸ್ತುತ

    ಶೃಂಗೇರಿ: ಮಹಾಭಾರತದ ಪಾತ್ರಗಳನ್ನು ತನ್ನದೇ ಪದ ಪ್ರೌಢಿಮೆ ಮೂಲಕ ಜಗತ್ತಿಗೆ ಬೃಹತ್ ಗ್ರಂಥವನ್ನು ನೀಡಿದ ದಾರ್ಶನಿಕ ಕವಿ ಕುಮಾರವ್ಯಾಸ ಎಂದು ಕಮ್ಮರಡಿ ಸರ್ಕಾರಿ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಆರ್.ಶಂಕರನಾರಾಯಣ ಹೇಳಿದರು.

    ಕನ್ನಡ ಭವನದಲ್ಲಿ ಭಾನುವಾರ ತಾಲೂಕು ಕಸಾಪ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ದತ್ತಿ ಉಪನ್ಯಾಸ ಮತ್ತು ಹೊಸ್ಕರೆ ವೆಂಕಟೇಶ್ ಅವರ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಭಾರತದಲ್ಲಿ ಕರ್ಣನ ಪಾತ್ರ ಕುರಿತು ಉಪನ್ಯಾಸ ನೀಡಿದರು.

    ಗದುಗಿನ ಭಾರತದಲ್ಲಿ ದುರಂತ ನಾಯಕ ಕರ್ಣನ ಬಗ್ಗೆ ಮನಕಲಕುವ ಪದ್ಯಗಳನ್ನು ರಚಿಸಿರುವುದು ಆತನ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿ. ಕರ್ಣಭೇದನ ಸನ್ನಿವೇಶಗಳನ್ನು ಯಥಾವತ್ತಾಗಿ ಚಿತ್ರಿಸಿದ್ದಾನೆ. ಆತ ಬರೆದ ಕೃತಿ ಇಂದಿಗೂ ಪ್ರಸ್ತುತ. ಕುಮಾರವ್ಯಾಸ ಹಾಡಿದರೆ ಕಲಿಯುಗ ದ್ವಾಪರವಾಗಲಿದೆ. ಭಾರತ ಕಣ್ಣಲ್ಲಿ ಕುಣಿಯುವುದು, ಕಲಿ ಕೆಚ್ಚಾಗುವನು, ಕವಿ ಹುಚ್ಚಾಗುವನು ಎಂದು ರಾಷ್ಟ್ರಕವಿ ಕುಮಾರವ್ಯಾಸನ ಕಾವ್ಯದ ಕುರಿತು ಹೇಳಿದ ಮಾತು ಅಕ್ಷರಶಃ ಸತ್ಯ. ಇಂತಹ ಮೇರುಕೃತಿಗಳು ಮಾತ್ರ ಸಾಹಿತ್ಯ ಲೋಕದಲ್ಲಿ ಶಾಶ್ವತ ಸ್ಥಾನ ಗಳಿಸಲು ಸಾಧ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts