More

    ಪದಾರ್ಪಣೆ ಪಂದ್ಯದಲ್ಲೇ ಶ್ರೇಯಸ್ ಶತಕದ ಸಂಭ್ರಮ; ಭಾರತಕ್ಕೆ ಕಿವೀಸ್ ದಿಟ್ಟ ಉತ್ತರ

    ಕಾನ್ಪುರ: ಪ್ರವಾಸಿ ನ್ಯೂಜಿಲೆಂಡ್ ಬ್ಯಾಟರ್‌ಗಳಿಗೆ ಕಡಿವಾಣ ಹಾಕುವ ನಿರೀಕ್ಷೆಯಲ್ಲಿದ್ದ ಭಾರತ ತಂಡದ ಬೌಲರ್‌ಗಳ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ಗ್ರೀನ್ ಪಾಕ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡಕ್ಕೆ ಕಿವೀಸ್ ಆರಂಭಿಕರಾದ ವಿಲ್ ಯಂಗ್ (75*ರನ್, 180ಎಸೆತ, 12 ಬೌಂಡರಿ) ಹಾಗೂ ಟಾಮ್ ಲಾಥಮ್ (50*ರನ್, 165 ಎಸೆತ, 4 ಬೌಂಡರಿ) ತಿರುಗೇಟು ನೀಡಿದ್ದಾರೆ. ದಿನದಾಟದ ಕೊನೇ ಎರಡೂ ಅವಧಿ ಕ್ರೀಸ್‌ನಲ್ಲಿ ನಿಂತ ಈ ಜೋಡಿ ಟೆಸ್ಟ್ ವಿಶ್ವ ಚಾಂಪಿಯನ್ ಪಟ್ಟಕ್ಕೆ ತಕ್ಕ ನಿರ್ವಹಣೆ ತೋರುವ ಸಂದೇಶ ರವಾನಿಸಿದೆ.

    ಶುಕ್ರವಾರ ಬೆಳಗ್ಗೆ 4 ವಿಕೆಟ್‌ಗೆ 258 ರನ್‌ಗಳಿಂದ ಎರಡನೇ ದಿನದಾಟ ಆರಂಭಿಸಿದ ಆತಿಥೇಯ ತಂಡ, ಶ್ರೇಯಸ್ ಅಯ್ಯರ್ (105 ರನ್, 171 ಎಸೆತ, 13 ಬೌಂಡರಿ, 2 ಸಿಕ್ಸರ್) ಪದಾರ್ಪಣೆ ಪಂದ್ಯದಲ್ಲೇ ಸಿಡಿಸಿದ ಶತಕದ ನಡುವೆಯೂ ವೇಗಿ ಟಿಮ್ ಸೌಥಿ (69ಕ್ಕೆ 5) ಮಾರಕ ದಾಳಿಗೆ ನಲುಗಿ 345 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಕಿವೀಸ್ ತಂಡ ಮಂದ ಬೆಳಕಿನಿಂದಾಗಿ ದಿನದಾಟ ಬೇಗನೆ ಸ್ಥಗಿತಗೊಂಡಾಗ 57 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 129 ರನ್ ಪೇರಿಸಿದ್ದು, ಇನ್ನೂ 216 ರನ್ ಹಿನ್ನಡೆಯಲ್ಲಿದೆ.

    ಭಾರತ: 111.1 ಓವರ್‌ಗಳಲ್ಲಿ 345 (ಶ್ರೇಯಸ್ ಅಯ್ಯರ್ 105, ರವೀಂದ್ರ ಜಡೇಜಾ 50, ಆರ್.ಅಶ್ವಿನ್ 38, ಟಿಮ್ ಸೌಥಿ 69ಕ್ಕೆ 5, ಕೈಲ್ ಜೇಮಿಸನ್ 91ಕ್ಕೆ 3, ಅಜಾಜ್ ಪಟೇಲ್ 90ಕ್ಕೆ 2), ನ್ಯೂಜಿಲೆಂಡ್: 57 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 129 (ವಿಲ್ ಯಂಗ್ 75*, ಟಾಮ್ ಲಾಥಮ್ 75*).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts