More

    ಮಠಗಳು ಧರ್ಮ ಉಳಿವಿನ ಕೇಂದ್ರಗಳು

    ಐಮಂಗಲ: ಧರ್ಮವನ್ನು ಉಳಿಸಿ ಬೆಳೆಸುವ ಕೆಲಸದಲ್ಲಿ ತೊಡಗಿರುವ ಮಠಗಳಿಗೆ ಭಕ್ತರು, ಸರ್ಕಾರದ ನೆರವಿನ ಅಗತ್ಯವಿದೆ ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

    ಹೋಬಳಿಯ ತವಂದಿ ಗ್ರಾಮದಲ್ಲಿ ಶ್ರೀಗುರು ನಿವಾಸದ ಶಂಕುಸ್ಥಾಪನೆ, ಜಂಗಮ ವಟುಗಳಿಗೆ ದೀಕ್ಷೆ, ಲಿಂಗಧಾರಣೆ ಮತ್ತು ಉಡಿ ತುಂಬುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸಿದ್ಧಗಂಗಾ, ಸುತ್ತೂರು, ಸಿರಿಗೆರೆ, ಮುರುಘಾಮಠ, ಹುಬ್ಬಳಿಯ ಮೂರುಸಾವಿರ ಮಠ, ಆದಿ ಚುಂಚನಗಿರಿಯಂತಹ ಹತ್ತಾರು ಮಠಗಳು ನಿತ್ಯ ಅನ್ನ- ಶಿಕ್ಷಣ ದಾಸೋಹ ನೀಡಿ ಲಕ್ಷಾಂತರ ಬಡ ಮಕ್ಕಳ ಬದುಕಿಗೆ ದಾರಿ ದೀಪವಾಗಿವೆ . ಇವು ಸಮಾಜಕ್ಕೆ ನೀಡಿದ ಸೇವೆಗಳು ಅವಿಸ್ಮರಣೀಯ ಎಂದರು.

    ಅಮರಗೋಳದ ಜಗದೀಶ ದೇವರು ಮಾತನಾಡಿ, ನಾವು ಬದುಕಿನಲ್ಲಿ ಎತ್ತರಕ್ಕೆ ಬೆಳೆಯಲು ಸಂಸ್ಕಾರ ಅಗತ್ಯ ಎಂದು ತಿಳಿಸಿದರು.

    ಅಧ್ಯಕ್ಷತೆ ವಹಿಸಿದ್ದ ತವನಿಧಿ ಶ್ರೀಶೈಲ ಶಾಖಾ ಮಠದ ರೇಣುಕ ದೇವರು ಮಾತನಾಡಿ, ಭಕ್ತರ ಸಹಕಾರ ದೊರೆತರೆ ಎಲ್ಲ ಮಠಗಳು ಶಿಕ್ಷಣ, ಸಾಮಾಜಿಕ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಭಕ್ತಗಣ ಉದಾರ ಸೇವೆಗೆ ಮುಂದಾಗಬೇಕು. ಸರ್ಕಾರಗಳು ಸಹ ಅಗತ್ಯ ನೆರವು ನೀಡಬೇಕು ಎಂದರು.

    ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಜಿಪಂ ಸದಸ್ಯರಾದ ಟಿ.ಆರ್.ರಾಜೇಶ್ವರಿ, ಜಿ. ಶರಣಪ್ಪ, ಡಾ.ಎಂ.ರವೀಂದ್ರ, ಡಾ.ರವಿಕುಮಾರ್, ಎಚ್.ಟಿ. ಚಂದ್ರಶೇಖರ್, ಬಿ.ಎನ್. ಲಿಂಗಣ್ಣಯ್ಯ, ಜಗದೀಶ್ , ಎಚ್.ಎಂ. ಬಸವರಾಜ್, ಸಣ್ಣಭೀಮಣ್ಣ, ವೀರಭದ್ರಯ್ಯ, ಸಣ್ಣಭೀಮಪ್ಪ, ರೂಪಾ, ವಿಶ್ವೇಶ್ವರಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts