More

    ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶ

    ಕೊಳ್ಳೇಗಾಲ : ತಾಲೂಕಿನ ಸತ್ತೇಗಾಲ ಗ್ರಾಮದಿಂದ ಚಿಕ್ಕಲ್ಲೂರು ಬೈಪಾಸ್ ರಸ್ತೆಯ ಬಳಿ ಶನಿವಾರ ವ್ಯಕ್ತಿಯೊಬ್ಬ ಅಕ್ರಮವಾಗಿ ಸಾಗಿಸುತ್ತಿದ್ದ 6, 316 ರೂ.ಮೌಲ್ಯದ ಮದ್ಯವನ್ನು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸತ್ತೇಗಾಲ ಗ್ರಾಮದ ರಾಜಣ್ಣ(50) ಆರೋಪಿಯಾಗಿದ್ದಾನೆ. ಸತ್ತೇಗಾಲ ಗ್ರಾಮದ ಚಿಕ್ಕಲ್ಲೂರು ಬೈಪಾಸ್ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಗಣೇಶ್ ತಂಡ ಚಿಕ್ಕಲ್ಲೂರು ಬೈಪಾಸ್ ರಸ್ತೆಯಲ್ಲಿ ಕಾದು ಕುಳಿತಿತ್ತು. ಈ ವೇಳೆ ರಾಜಣ್ಣ ಚಿಕ್ಕಲ್ಲೂರು ಕಡೆಗೆ ಹೆಗಲ ಮೇಲೆ ಮದ್ಯ ತುಂಬಿದ ರಟ್ಟಿನ ಬಾಕ್ಸ್ ಹಾಗೂ ಚೀಲ ಹೊತ್ತು ತರುತ್ತಿದ್ದ. ನಂತರ ಪೊಲೀಸರನ್ನು ಕಂಡ ಆತ ಸ್ಥಳದಲ್ಲಿಯೇ ಮದ್ಯ ತುಂಬಿದ ಬಾಕ್ಸ್ ಬಿಟ್ಟು ಪರಾರಿಯಾಗಿದ್ದಾನೆ. ಬಾಕ್ಸ್ ಹಾಗೂ ಚೀಲದಲ್ಲಿದ್ದ 90 ಎಂಎಲ್‌ನ 69 ಪೌಚ್‌ಗಳು, 180 ಎಂಎಲ್ನ 16 ಪೌಚ್‌ಗಳು ಹಾಗೂ 650 ಎಂಎಲ್ನ 12 ಬಿಯರ್ ಬಾಟಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಪರಾರಿಯಾಗಿರುವ ಆರೋಪಿ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts