More

    ಮಾನವನ ಉಳಿವಿಗಾಗಿ ವಿಜ್ಞಾನ ನೀಡಿರುವ ಕೊಡುಗೆ ಅಪಾರ

    ಬೆಳಗಾವಿ: ವಿಜ್ಞಾನಕ್ಕಾಗಿ ಮಾನವ ಮತ್ತು ಮಾನವನಿಗಾಗಿ ವಿಜ್ಞಾನ ಎಂಬ ಸಿದ್ಧಾಂತವು ಉತ್ತಮ ಕೊಡುಗೆ ನೀಡಿದೆ ಎಂದು ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಜ್ಞಾನಿ ಡಾ. ವಿಷ್ಣುಪಂತ ಮೈಶಾಳೆ ಹೇಳಿದ್ದಾರೆ.

    ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಈಚೆಗೆ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಮಂಗಳಯಾನ ಮತ್ತು ಚಂದ್ರಯಾನ ಸಂಶೋಧನೆಗಳು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅತ್ಯುತ್ತಮ ಕೊಡುಗೆಗಳಾಗಿವೆ ಎಂದರು.

    ಭಾರತೀಯ ಬಾಹ್ಯಾಕಾಶ ಸಂಸ್ಥೆಯು ದಿವಂಗತ ವಿಕ್ರಮ ಸಾರಾಬಾಯಿ ಅವರಿಂದ ಈಗಿನ ಮುಖ್ಯಸ್ಥ ಡಾ. ಕೆ.ಶಿವನ್‌ವರೆಗಿನ ಭಾರತೀಯ ಬಾಹ್ಯಾಕಾಶ ಸಂಶೋಧನೆಯ ವಿವಿಧ ಮೈಲಿಗಲ್ಲುಗಳು, ಯಶಸ್ಸುಗಳು ಮತ್ತು ವಿಫಲತೆಯ ಕಾರಣಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು.

    ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೂಜಾರಿ ಮಾತನಾಡಿ, ದಿನ ನಿತ್ಯದ ಜೀವನದಲ್ಲಿ ವಿಜ್ಞಾನವು ಯಾವ ರೀತಿಯಾಗಿ ಹಾಸುಹೊಕ್ಕಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಕೌಶಲ ಅಭಿವೃದ್ಧಿಪಡಿಸಿಕೊಂಡು, ಸಂಶೋಧನೆಯ ಕಡೆಗೆ ಗಮನ ಹರಿಸಿ ವಿಜ್ಞಾನಕ್ಕೆ ಏನಾದರೊಂದು ಕೊಡುಗೆ ನೀಡಲು ಪ್ರಯತ್ನಿಸಬೇಕು ಎಂದರು. ಕಾಲೇಜಿನ ಆಡಳಿತಾಧಿಕಾರಿ ರಾಜು ಜೋಶಿ, ಪ್ರೊ. ಅಮರ ಬ್ಯಾಕೋಡಿ, ಪ್ರೊ. ಅನುರಾಧಾ ಹೂಗಾರ, ಪ್ರೊ. ಆಶಾ ರಜಪೂತ, ಡಾ. ಬಸವರೆಡ್ಡಿ, ಪ್ರೊ. ಸಾಗರ ಬಿರ್ಜೆ, ಡಾ. ವಿಜಯ ಕುಲಕರ್ಣಿ, ಪ್ರೊ. ರಾಜು ನಾಗಾಂವಕರ, ಡಾ. ಪಿ.ಬಿ. ಮುತಾಲಿಕ ದೇಸಾಯಿ, ಪ್ರೊ. ಸಾರಿಕಾ ಪಾವಶೆ, ಪ್ರೊ. ಅಶ್ಪಾಕ್ ಪಠಾಣ, ಡಾ. ವಿನಾಯಕ ಆದಿಮುಳೆ, ಪ್ರೊ. ಸುರೇಖಾ ಚೌಧರಿ ಸೇರಿ ಎಲ್ಲ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts