More

    ಪ್ರತಿ ಮನೆಗೆ ತಲುಪಿಸುವ ಕಾರ್ಯವಾಗಲಿ

    ಮಾನ್ವಿ: ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ತಾಲೂಕಿನ ಪ್ರತಿ ಮನೆಗೆ ತಲುಪಿಸುವಂತೆ ಹಿಂದು ಸೇವಾ ಪ್ರತಿಷ್ಠಾನದ ರಾಜ್ಯ ಸಂಚಾಲಕ ಸುಧಾಕರ ಕರೆ ನೀಡಿದರು.

    ಪಟ್ಟಣದ ಗಾಂಧಿ ಸ್ಮಾರಕ ಶಿಕ್ಷಣ ಸಂಸ್ಥೆ ಆವರಣದಲ್ಲಿ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ವಿತರಿಸಿ ಭಾನುವಾರ ಮಾತನಾಡಿದರು. ರಾಮ ಮಂದಿರ ಉದ್ಘಾಟನೆ ದಿನವಾದ ಜ.22ರಂದು ಪ್ರತಿ ಮನೆಯಲ್ಲಿ ಭಜನೆ, ಕೀರ್ತನೆ, ಪೂಜೆ, ಆರತಿ ಮಾಡಿ ಸೂರ್ಯಸ್ತದ ನಂತರ ಆರತಿ ಬೆಳಗೋಣ ಎಂದರು.
    ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನೆಲ ಅಂತಸ್ತಿನಲ್ಲಿರುವ ಗರ್ಭಗುಡಿಯಲ್ಲಿ ಶ್ರೀರಾಮಲಲ್ಲಾನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಜ.22 ರಂದು ನೆರವೇರಲಿದ್ದು, ಇಂತಹ ಅಭೂತಪೂರ್ವ ಸಂಭ್ರಮದಲ್ಲಿ ದೇಶವೇ ಭಾಗಿಯಾಗುತ್ತಿದೆ. ಈ ಸಮಯದಲ್ಲಿ ಹತ್ತಿರದ ದೇವಸ್ಥಾನಗಳಲ್ಲಿ ರಾಮ ಭಕ್ತರೆಲ್ಲ ಸಾಮೂಹಿಕ ಪೂಜೆ ನೆರವೇರಿಸಬೇಕು ಎಂದು ಸುಧಾಕರ ತಿಳಿಸಿದರು.

    ಕಲ್ಮಠ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ, ವಿಶ್ವ ಹಿಂದು ಪರಿಷತ್ ತಾಲೂಕು ಸಂಚಾಲಕ ವಿಜಯೇಂದ್ರ ಇಬ್ರಾಂಪುರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶನಾಯಕ, ಪ್ರಮುಖರಾದ ಶರಣಪ್ಪಗೌಡ ನಕ್ಕುಂದಿ, ವೀರೇಶನಾಯಕ ಬೆಟ್ಟದೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts