More

    28ರಂದು ಸಂಗಮೇಶ್ವರ ಜಯಂತಿ

    ಹೊಸದುರ್ಗ: ತಾಲೂಕಿನ ಅಡವಿಸಂಗೇನಹಳ್ಳಿಯಲ್ಲಿ ಫೆ.28ರಂದು ಶ್ರೀ ಸಂಗಮೇಶ್ವರ ಜಯಂತಿ ಹಾಗೂ ಕುಂಚಿಟಿಗ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಕುಂಚಿಟಿಗ ಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.

    ಕುಂಚಿಟಿಗ ಸಂಸ್ಥಾನ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಕಳೆದ 30 ವರ್ಷಗಳಿಂದ ಸಂಗಮೇಶ್ವರ ಜಯಂತಿ ಆಚರಿಸಲಾಗುತ್ತಿದೆ ಎಂದರು.

    1997ರಲ್ಲಿ ಕುಂಚಿಟಿಗ ಸಂಸ್ಥಾನ ಸ್ಥಾಪಿಸುವ ಮೂಲಕ ಪ್ರೀತಿ, ಶ್ರದ್ಧೆಯಿಂದ ಸಮುದಾಯ ಜಾಗೃತಗೊಳಿಸುವ ಕೆಲಸ ಮಾಡಿದ್ದೇವೆ. ಸಂಗಮೇಶ್ವರ ಜಯಂತಿ ಆಚರಣೆಯಿಂದ ಕುಂಚಿಟಿಗ ಸಮುದಾಯ ಒಂದೇ ವೇದಿಕೆಯಲ್ಲಿ ಸಂಘಟನೆಯಾಗುತ್ತಿದೆ. ಗುರುಪೀಠವು ಜನರೊಂದಿಗೆ ನಿರಂತರ ಬೆರೆತು, ರೈತರು, ಕಾರ್ಮಿಕರ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ ಎಂದರು.

    ಕುಂಚಿಟಿಗ ಸಮಾಜದ ಅಧ್ಯಕ್ಷ ಸಿದ್ದಪ್ಪ ಮಾತನಾಡಿ, ಮೂರು ದಶಕಗಳಿಂದ ಸಂಗಮೇಶ್ವರ ಜಯಂತಿ ಮೂಲಕ ರಾಜ್ಯದ ಒಳ, ಹೊರಗೂ ಸಂಘಟಿಸಿದ್ದರಿಂದ ಕುಂಚಿಟಿಗ ಸಮುದಾಯ ರಾಜ್ಯದಲ್ಲಿ ತನ್ನ ಅಸ್ತಿತ್ವ ಪ್ರದರ್ಶಿಸಲು ಸಾಧ್ಯವಾಗಿದೆ ಎಂದರು.

    ಕುಂಚಿಟಿಗ ಸಂಘದ ಕೇಂದ್ರ ಅಧ್ಯಕ್ಷ ಕಲ್ಲೇಶಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮಂಜುನಾಥ್, ಜಿಪಂ ಮಾಜಿ ಸದಸ್ಯ ದ್ಯಾಮಪ್ಪ, ಪುರಸಭೆ ಸದಸ್ಯ ಶ್ರೀನಿವಾಸ್, ಉದ್ಯಮಿ ಜ್ಞಾನೇಶ್, ದೇವರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts