More

    ವೇದಾವತಿ ನದಿ ಪುನರುಜ್ಜೀವನಕ್ಕಾಗಿ ಜನ ಜಾಗೃತಿ

    ಹೊಸದುರ್ಗ: ವೇದಾವತಿ ನದಿ ಪುನರುಜ್ಜೀವನಗೊಳಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ನದಿ ನೀರು ತಡೆಯುವವರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ತಿಳಿಸಿದರು.

    ಪಟ್ಟಣದ ರೈತ ಭವನದಲ್ಲಿ ಮಂಗಳವಾರ ಕೃಷಿಕರ ಸಮಸ್ಯೆಗಳ ಚಿಂತನೆಗಾಗಿ ರಾಜ್ಯ ರೈತ ಸಂಘದಿಂದ ಆಯೋಜಿಸಿದ್ದ ರೈತರ ಸಭೆ ಉದ್ಘಾಟಿಸಿ ಮಾತನಾಡಿದರು.

    ವೇದಾವತಿ ನದಿಯ ಉಗಮಸ್ಥಾನ ಚಿಕ್ಕಮಗಳೂರು ಜಿಲ್ಲೆಯಲ್ಲಿ ನದಿ ಪಾತ್ರಕ್ಕೆ ಬೃಹತ್ ಕಟ್ಟೆಗಳನ್ನು ಕಟ್ಟಿ ನೀರನ್ನು ಹಿಡಿದಿಟ್ಟು ದುರ್ಬಳಕೆ ಮಾಡಿಕೊಂಡ ಪರಿಣಾಮ ವೇದಾವತಿ ನದಿ ನಶಿಸುವ ಹಂತ ತಲುಪಿದೆ. ಅಯ್ಯನಕೆರೆ ತುಂಬಿದ ನೀರು ನದಿ ಪಾತ್ರಕ್ಕೆ ಹರಿಯಲು ಕ್ರಮಕೈಗೊಳ್ಳಬೇಕು. ನಿಸರ್ಗ ನಿರ್ಮಿತ ನೀರು ಹರಿವಿಗೆ ಅಡ್ಡಲಾಗಿ ಕಟ್ಟೆ ಕಟ್ಟಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿಕ್ಕಮಗಳೂರಿಗೆ ತೆರಳಿ ಪ್ರತಿಭಟನೆ ನಡೆಸಲು ಚಿಂತಿಸಲಾಗಿದೆ ಎಂದರು.

    ನದಿ ಪಾತ್ರದ ಜನರನ್ನು ಜಾಗೃತಗೊಳಿಸಿ ಅಚ್ಚುಕಟ್ಟು ಪ್ರದೇಶಗಳ ಹಸಿರೀಕರಣಕ್ಕೆ ಆದ್ಯತೆ, ನದಿ ಸಂರಕ್ಷಣೆ ಕುರಿತು ಅರಿವು ಮೂಡಿಸಲಾಗುವುದು. ತಾಲೂಕಿನಲ್ಲಿ ಕೊಬ್ಬರಿ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯಡಿ ಖರೀದಿಸಬೇಕು. ರಾಗಿ ಖರೀದಿ ಕೇಂದ್ರದಲ್ಲಿ ಉಂಟಾಗಿರುವ ಸಮಸ್ಯೆ ನಿವಾರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

    ರೈತರ ಪಂಪ್‌ಸೆಟ್‌ಗಳಿಗೆ ದಿನದಲ್ಲಿ 3 ಗಂಟೆ ಮಾತ್ರ ವಿದ್ಯುತ್ ನೀಡುತ್ತಿದ್ದು ಕನಿಷ್ಠ 7 ಗಂಟೆ ಪೂರೈಕೆ ಮಾಡಬೇಕು. ವೇದಾವತಿ ನದಿ ಉಳಿವಿನ ಹೋರಾಟಕ್ಕೆ ಜಿಲ್ಲೆಯ ರೈತರು, ಜನಪ್ರತಿನಿಧಿಗಳು ಪಕ್ಷಭೇದ ಮರೆತು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

    ಸಭೆಯಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಕೊರಟಿಕೆರೆ ಮಹೇಶಣ್ಣ, ಬಯಲಪ್ಪ, ನಾಗಲಿಂಗಯ್ಯ, ಕರಿಸಿದ್ದಯ್ಯ, ಜಯಣ್ಣ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts