More

  ಹೊಸ ವರ್ಷಾಚರಣೆ ದಿನದಂದು ವಾಹನ ಸವಾರರ ಕಿಕ್ ಇಳಿಸಿದ ಪೊಲೀಸರು

  ರಾಮನಗರ: ಹೊಸ ವರ್ಷಾಚರಣೆ ಸ್ವಾಗತದ ನೆಪದಲ್ಲಿ ಮದ್ಯದ ಅಮಲಿನಲ್ಲಿದ್ದ ವಾಹನ ಸವಾರರಿಗೆ ಜಿಲ್ಲಾ ಪೊಲೀಸರು ಕಿಕ್ ಇಳಿಸಿದ್ದಾರೆ. ಜಿಲ್ಲೆಯ ವಿವಿಧೆಡೆ ಮಂಗಳವಾರ ರಾತ್ರಿ ಕಾರ್ಯಾಚರಣೆಗೆ ನಡೆಸಿದ ಪೊಲೀಸರು, ಕುಡಿದು ವಾಹನ ಚಲಾಯಿಸುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ.

  ಮೊದಲೇ ಮನವಿ: ಜಿಲ್ಲೆಯಲ್ಲಿ ನೂತನ ವರ್ಷಾಚರಣೆ ನೆಪದಲ್ಲಿ ಕುಡಿದು ವಾಹನ ಚಲಾಯಿಸಬೇಡಿ ಎನ್ನುವ ಮುನ್ನೆಚ್ಚರಿಕೆ ಹೊರತಾಗಿಯೂ ಕುಡಿದು ವಾಹನ ಚಲಾಯಿಸುತ್ತಿದ್ದವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

  ಬಿಡದಿಯಿಂದ ಚನ್ನಪಟ್ಟಣದವರೆಗೂ ವಿಲ್ಹಿಂಗ್ ಸವಾರರ ಸಂಖ್ಯೆ ಮಂಗಳವಾರ ಮಧ್ಯರಾತ್ರಿ ಹೆಚ್ಚಾಗಿತ್ತು. ಹೀಗಾಗಿ, ವೈರ್‌ಲೆಸ್ ಸಂದೇಶಗಳು ಪೊಲೀಸರಿಗೆ ನಿದ್ರೆ ಇಲ್ಲದಂತೆ ಮಾಡಿದ್ದಂತೂ ಸತ್ಯ. ಗುರುವಾರ ತುಮಕೂರಿಗೆ ಪ್ರಧಾನಿ ನರೇಂದ್ರಮೋದಿ ಭೇಟಿ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸರು ಬುಧವಾರ ಬೆಳಗ್ಗೆಯೇ ಅಲ್ಲಿಗೆ ತೆರಳಬೇಕಿತ್ತು. ಹೀಗಾಗಿ, ಮಂಗಳವಾರ ಮಧ್ಯರಾತ್ರಿ 1.30ರವರೆಗೂ ಕಾರ‌್ಯಚರಣೆ ನಡೆಸಿದ್ದಾರೆ. ಇಲ್ಲವಾದರೆ, ಇಡೀ ರಾತ್ರಿ ಕಾರ‌್ಯಚರಣೆ ನಡೆಸಿದಿದ್ದರೆ 100ಕ್ಕೂ ಹೆಚ್ಚು ವಾಹನಗಳು ಠಾಣೆಗಳ ಮುಂದೆ ನಿಲ್ಲಬೇಕಿತ್ತು ಎಂದು ಪೊಲೀಸರೊಬ್ಬರು ತಿಳಿಸಿದರು.

  ಚಾಲಕ-ಮಾಲೀಕರ ಬಾಯಿಗೆ ಆಲ್ಕೋಹಾಲ್ ಮೀಟರ್ ಇಟ್ಟು ಮದ್ಯಸೇವಿಸಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ತೆರಳಿ ದಂಡ ಪಾವತಿಸಲು ಪೊಲೀಸರು ನೋಟಿಸ್ ನೀಡಿದ್ದಾರೆ. ನ್ಯಾಯಾಲಯಕ್ಕೆ ತೆರಳಿ ದಂಡ ಪಾವತಿಸಿ, ರಶೀದಿ ತಂದು ತೋರಿಸಿದಲ್ಲಿ ಅಂತಹವರ ಬೈಕ್, ಕಾರು ಬಿಡುಗಡೆ ಮಾಡಲಾಗುವುದು ಎಂದು ಎಸ್ಪಿ ಅನೂಪ್ ಎ.ಶೆಟ್ಟಿ ತಿಳಿಸಿದರು.
  ಸ್ಥಳದಲ್ಲೆ ಆಗಿದ್ದದರೆ ನೂರೋ- ಇನ್ನೂರೋ ದಂಡ ಪಾವತಿಸಿ ಹೋಗಬಹುದಿತ್ತು. ನ್ಯಾಯಾಲಯ ಅಂದರೆ ವಾಹನಗಳನ್ನು ಠಾಣೆ ಬಳಿಐಎ ನಿಲ್ಲಿಸಬೇಕು. ನ್ಯಾಯಾಲಯದಲ್ಲಿ 500ರಿಂದ 4 ಸಾವಿರ ರೂ.ವರೆಗೆ ದಂಡ ವಿಧಿಸಲು ಅವಕಾಶವಿದ್ದು, ಎಷ್ಟು ದಂಡ ಹಾಕುತ್ತಾರೋ ಎಂಬ ಆತಂಕ ಬೈಕ್ ಮತ್ತು ಕಾರು ಸವಾರರಲ್ಲಿ ಕಂಡುಬಂತು.

  ಪೊಲೀಸರನ್ನೇ ಪ್ರಶ್ನೆ ಮಾಡಿದರು: ರಾತ್ರಿ ಕೊರೆವ ಚಳಿ ತಡೆಯಲಾರದ ಪೊಲೀಸ್ ಅಧಿಕಾರಿಗಳು ಸಮವಸದ ಮೇಲೊಂದು ಜರ್ಕಿನ್ ಹಾಕಿದ್ದನ್ನು ಗಮನಿಸಿದ ಕೆಲ ಸವಾರರು, ನೀವೇ ಪೊಲೀಸ್ ಅಧಿಕಾರಿ ಎನ್ನಲು ಖಾತ್ರಿ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನಮ್ಮ ೆಟೊ ತೆಗೆದುಕೊಂಡು ಹೋಗಿ, ನಂತರ ಪರೀಕ್ಷೆ ಮಾಡಿಕೊಂಡು ಖಚಿತ ಪಡಿಸಿಕೊಳ್ಳಿ ಎಂದು ಅಧಿಕಾರಿಗಳು ಉತ್ತರ ನೀಡಿದ್ದಾರೆ. ಇದು ಮದ್ಯ ಸವಾರರ ನಿಶೆ ಇಳಿಯುವಂತೆ ಮಾಡಿದೆ.

  ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೆಚ್ಚಿನ ಸವಾರರು ಲಾಂಗ್ ಡ್ರೈವ್ ಹೆಸರಿನಲ್ಲಿ ಸಂಚರಿಸುವುದು ವಾಡಿಕೆ. ಹೀಗಾಗಿಯೇ ಕಾದು ಕುಳಿತ್ತಿದ್ದ ಪೊಲೀಸರಿಗೆ ಭರ್ಜರಿ ಭೇಟೆ ಲಭಿಸಿದಂತ್ತಾಗಿದೆ. ಇನ್ನೊಂದೆಡೆ ಸಾಕಷ್ಟು ಅಪಘಾತಗಳಿಗೂ ಪೊಲೀಸರು ಕಡಿವಾಣ ಹಾಕಿರುವುದು ವಿಶೇಷ.

  ಕೇಕ್ ಕತ್ತರಿಸಿ ಸ್ವಾಗತ: ಜಿಲ್ಲೆಯಾದ್ಯಂತ ಹೊಸ ವರ್ಷವನ್ನು ಸಂಭ್ರಮ-ಸಡಗರದಿಂದ ಸ್ವಾಗತಿಸ ಲಾಯಿತು. 2019ರ ಡಿ.31ರ ಮಂಗಳವಾರ ತಡರಾತ್ರಿವರೆಗೆ ನಿಶ್ಯಬ್ದವಾಗಿದ್ದ ರಾಮನಗರದಲ್ಲಿ ಮಧ್ಯರಾತ್ರಿ 12ಕ್ಕೆ ಹೊಸ ವರ್ಷ 2020 ಬರುತ್ತಿದ್ದಂತೆ ಎಲ್ಲೆಡೆ ಹರ್ಷೋದ್ಘಾರ, ಸಂಭ್ರಮ ಮನೆ ಮಾಡಿತ್ತು. ಸಿಡಿಮದ್ದುಗಳ ಸದ್ದು ಮುಗಿಲು ಮುಟ್ಟಿತ್ತು.

  ಮನೆಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಜನರು ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷ ಸ್ವಾಗತಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಯುವತಿಯರು ಮನೆ ಮುಂದೆ ಬಣ್ಣದ ರಂಗೋಲಿ ಬಿಡಿಸುವ ಮೂಲಕ ನೂತನ ವರ್ಷ ಸ್ವಾಗತಿಸಿದರು.

  ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ನೂತನ ವರ್ಷದ ಮೊದಲ ದಿನ ಬುಧವಾರ ರಾಮನಗರದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಎಂ.ಜಿ ರಸ್ತೆಯ ಬಲಮುರಿ ಗಣಪತಿ ದೇವಾಲಯ, ಚಾಮುಂಡೇಶ್ವರಿ ದೇವಾಲಯ, ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯ, ಆಂಜನೇಯ ಸ್ವಾಮಿ, ಚನ್ನಪಟ್ಟಣದ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ, ಮಂಚನಾಯ್ಕನಹಳ್ಳಿ ಸಮೀಪದ ಕೋತಿ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಹೊಸ ವರ್ಷದ ಅಂಗವಾಗಿ ವಿಶೇಷ ಪೂಜೆ ಮಾಡಲಾಯಿತು. ಅಪಾರ ಸಂಖ್ಯೆಯ ಜನರು ದೇವಸ್ಥಾನಗಳಿಗೆ ತೆರಳಿ ದೇವರಲ್ಲಿ ಪ್ರಾರ್ಥಿಸಿ, ಪ್ರಸಾದ ವಿನಿಯೋಗದಲ್ಲಿ ಪಾಲ್ಗೊಂಡರು. ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಹೊಸ ವರ್ಷದ ಮೊದಲ ದಿನ ವಿದ್ಯಾರ್ಥಿಗಳು ಹೊಸ ಬಟ್ಟೆ ತೊಟ್ಟು ತರಗತಿಗೆ ಹಾಜರಾಗಿದ್ದರು. ಸ್ನೇಹಿತರೆಲ್ಲ ಸೇರಿ ಕಾಲೇಜು ಆವರಣದಲ್ಲೇ ಕೇಕ್ ಕತ್ತರಿಸಿ ಸಂಭ್ರಮ ಪಟ್ಟರು.

  ಹೊಸ ವರ್ಷಾಚರಣೆ ನೆಪದಲ್ಲಿ ಕುಡಿದು ವಾಹನ ಚಲಾವಣೆ ಮಾಡದಂತೆ ಸೂಚನೆ ನೀಡಲಾಗಿತ್ತು. ಇದರ ಹೊರತಾಗಿಯೂ ಮಂಗಳವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ 50ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಲಯದಲ್ಲಿ ದಂಡ ಪಾವತಿಸಿದ ಬಳಿಕ ರಶೀದಿ ತೋರಿಸಿದರೆ ವಾಹನ ಬಿಡುಗಡೆ ಮಾಡಲಾಗುವುದು.
  ಅನೂಪ್ ಎ.ಶೆಟ್ಟಿ ಜಿಲ್ಲಾ ಪೊಲೀಸ್ ವರಿಷಾಧಿಕಾರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts