More

    ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಸಂಪನ್ನ

    ಹೊಳೆನರಸಿಪುರ : ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಜಾತ್ರಾ ಬ್ರಹ್ಮ ರಥೋತ್ಸವ ಭಕ್ತರ ಹರ್ಷೋದ್ಗಾರದೊಂದಿಗೆ ಭಾನುವಾರ ವಿಜೃಂಭಣೆಯಿಂದ ಜರುಗಿತು. ಹೊಳೆನರಸೀಪುರ ಪಟ್ಟಣದ ಪುರದೈವ ಲಕ್ಷ್ಮೀ ನರಸಿಂಹ ಸ್ವಾಮಿಯ ರಥೋತ್ಸವಕ್ಕೆ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಭಕ್ತಿ ಭಾವ ಮೆರೆದರು.
    ಬೆಳಗ್ಗೆ 7:45 ರಿಂದ 8 :15ರೊಳಗೆ ಸಲ್ಲುವ ಮೇಷ ಲಗ್ನದಲ್ಲಿ ಮಹಾ ರಥಕ್ಕೆ ಸಕಲ ಪೂಜೆ ಸಲ್ಲಿಸಿದ ನಂತರ 9:30ರ ವೇಳೆಗೆ ತಾಲೂಕು ಆಡಳಿತದಿಂದ ರಥೋತ್ಸವಕ್ಕೆ ವಿಧ್ಯಕ್ತ ಚಾಲನೆ ಕೊಡಲಾಯಿತು. ಬ್ರಹ್ಮ ಮಹಾರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ಸಾವಿರಾರು ಭಕ್ತರು ಗೋವಿಂದನ ನಾಮಸ್ಮರಣೆ ಮಾಡುತ್ತಾ, ಜೈಕಾರ ಹಾಕುತ್ತಾ ರಥವನ್ನು ಎಳೆಯುವ ಮೂಲಕ ಭಕ್ತಿ ಪರಕಾಷ್ಠೆ ಮೆರೆದರು. ಲಕ್ಷ್ಮೀ ನರಸಿಂಹ ಸ್ವಾಮಿಯ ಮಹಾರಥ ಸಾಗುತ್ತಿರುವುದನ್ನು ಕಣ್ತುಂಬಿ ಕೊಂಡ ಭಕ್ತ ಸಮೂಹ ರಥಕ್ಕೆ ಹಣ್ಣು- ಜವನವನ್ನು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.
    ಪಟ್ಟಣದ ತಾಲೂಕಿನ ಜನತೆ ಜಾತ್ರೆಯಲ್ಲಿ ಭಾಗವಹಿಸಿ ಸಂಭ್ರಮ ಪಟ್ಟರು. ಚಿತ್ತಾಕರ್ಷಕ ವಸ್ತ್ರಾಲಂಕಾರ, ವಿವಿಧ ಪುಷ್ಪಾಲಂಕಾರದಿಂದ ಶೃಂಗಾರಗೊಂಡಿದ್ದ ವಸಿಷ್ಠ ಬ್ರಹ್ಮ ರಥ ಪ್ರಮುಖ ಆಕರ್ಷಣೆಯಾಗಿತ್ತು. ಓಕುಳಿ: ಇದೇ ಸಂದರ್ಭ ಯುವ ಸಮೂಹ ಬಣ್ಣದೋಕುಳಿ ಆಚರಿಸಿ ಸಂಭ್ರಮ ಪಟ್ಟರು. ಶನಿವಾರ ರಾತ್ರಿಯಿಂದ ಭಾನುವಾರದವರೆಗೆ ಭಕ್ತರು ಸರದಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ತಾಲೂಕು ಆಡಳಿತದಿಂದ ಭತರಿಗೆ ಪ್ರಸಾದ ವಿನಿಯೋಗ ನಡೆಯಿತು. ಶಾಸಕ ಎಚ್.ಡಿ. ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭವಾನಿ ರೇವಣ್ಣ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಹಸೀಲ್ದಾರ್ ಪಿಸಿ ಪ್ರವೀಣ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ತಾಲೂಕು ಪಂಚಾಯಿತಿ ಇಒ ಕುಸುಮಾಧರ, ಶಿರಸ್ತೇದಾರ್ ರೂಪೇಶ್ ಕುಮಾರ್ ಇತರರು ಜಾತ್ರಾ ಮಹೋತ್ಸವ ಸುಗಮವಾಗಿ ನೆರವೇರಲು ನೆರವಾದರು. ಡಿವೈಎಸ್ಪಿ ಅಶೋಕ್, ಸಿಪಿಐ ಸುರೇಶ್ ಕುಮಾರ್, ಪಿಎಸ್‌ಐ ಅಜಯ್ ಹಾಗೂ ಸಿಬ್ಬಂದಿ ಬಿಗಿ ಬಂದೋಬಸ್ತ್ ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts