More

    ಸ್ಪರ್ಧೆ ಖಚಿತ, ಪಕ್ಷ ತೊರೆಯಲ್ಲ

    ಹಿರಿಯೂರು: ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯ ರ್ಥಿಯಾಗಿ ಸ್ಪರ್ದಿಸುವೆ ಎಂದು ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಹೇಳಿದರು.

    ಬಿಜೆಪಿ ಕಚೇರಿಯಲ್ಲಿ ಗುರವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಐದು ವರ್ಷದಿಂದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದೇನೆ ಎಂದರು.

    ಕಾಂಗ್ರೆಸ್-ಜೆಡಿಎಸ್ ಭದ್ರ ಕೋಟೆ ಹಿರಿಯೂರಲ್ಲಿ ಕಮಲ ಅರಳಿಸಲಾಗಿದೆ. ಲೋಕಸಭೆ, ವಿಧಾನಸಭೆ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ. ಪಕ್ಷ ನಿಷ್ಠೆ, ಬದ್ಧತೆ ಗುರುತಿಸಿ ಅಹಿಂದ ಸಮುದಾಯದ ನನಗೆ ಟಿಕೆಟ್ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಕ್ಷ ನಿಷ್ಠೆ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಲು ತಾಲೂಕಿನಿಂದ ಕಾರ್ಯಕರ್ತರ ನಿಯೋಗ ಕರೆದೊಯ್ಯು ವಂತೆ ಸಭೆಯಲ್ಲಿ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು. ಬೇರೆಯವರಿಗೆ ಮಣೆ ಹಾಕುವುದನ್ನು ಬಿಟ್ಟು, ಹಿಂದುಳಿದ ವರ್ಗಕ್ಕೆ ಟಿಕೆಟ್ ನೀಡಿದರೆ ಗೆಲ್ಲುತ್ತೇವೆ ಎಂಬುದನ್ನು ಸಾಬೀತುಪಡಿಸುತ್ತೇವೆ ಎಂದರು.

    ಜಿಪಂ ಸದಸ್ಯೆ ರಾಜೇಶ್ವರಿ, ನಗರಸಭೆ ಸದಸ್ಯರಾದ ಮಹೇಶ್ ಪಲ್ಲವ, ಕದುರ್, ಮುಖಂಡರಾದ ಚಿರಂಜೀವಿ, ಉಗ್ರಮೂರ್ತಿ, ನಾಗರಾಜ್ ರಾವ್, ವನಿತಾ, ಶ್ರವಣಗೆರೆ ಶಿವಣ್ಣ, ವಿ.ಕೆ.ಗುಡ್ಡ ನಾಗರಾಜ್, ಕೆ.ಪಿ.ಶ್ರೀನಿವಾಸ್, ಅಸ್ಗರ್ ಅಹಮ್ಮದ್, ನಗರಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್, ಮಂಜುಳಾ, ತಾಪಂ ಸದಸ್ಯ ಜಯರಾಮಯ್ಯ, ಕರಿಯಣ್ಣ ಇತರರಿದ್ದರು.

    ಸಚಿವ ಸ್ಥಾನ ನೀಡದ ಬಗ್ಗೆ ಬೇಸರ: ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದರೆ ಮಂತ್ರಿ ಸ್ಥಾನ ನೀಡುವುದಾಗಿ ಚುನಾವಣೆ ಪೂರ್ವದಲ್ಲಿ ಬಿಎಸ್‌ವೈ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಘೋಷಿಸಿದ್ದರು. ಆದರೆ, ಈತನಕ ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡಿಲ್ಲ. ನನಗೆ ವಿಧಾನ ಪರಿಷತ್ ಸ್ಪರ್ಧೆಗೆ ಅವಕಾಶ ನೀಡುವುದಾಗಿ ಮಾತು ಕೊಟ್ಟಿದ್ದು ಈಗ ಅನ್ಯ ಪಕ್ಷದಿಂದ ಬಂದವರಿಗೆ ಮಣೆ ಹಾಕುವ ಮಾತು ಕೇಳಿಬರುತ್ತಿದೆ ಎಂದು ಡಿ.ಟಿ.ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.

    ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಅಹಿಂದ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡುವಂತೆ ಸಚಿವ ಈಶ್ವರಪ್ಪ ಧ್ವನಿ ಎತ್ತಿದ್ದಾರೆ. ಪಕ್ಷ ಯಾವ ರೀತಿಯಾಗಿ ಸಾಮಾಜಿಕ ನ್ಯಾಯ ಪಾಲಿಸುತ್ತದೆ ಕಾದು ನೋಡುತ್ತೇವೆ ಎಂದು ಡಿ.ಟಿ.ಶ್ರೀನಿವಾಸ್‌ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts