More

    ಸ್ವಚ್ಛತಾ ಸೇನಾನಿಗಳಿಗೆ ಬೇಕು ಜ್ಯೋತಿ ಸಂಜೀವಿನಿ

    ಹಿರಿಯೂರು: ಕೋವಿಡ್-19 ಈ ಸಂದರ್ಭದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಹಾಗೂ ಪೌರ ಸೇವಾ ನೌಕರರು ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈ ಮೂರು ಇಲಾಖೆ ನೌಕರರಿಗೆ ವೈದ್ಯಕೀಯ ಸೇವೆ ಒದಗಿಸುವ ವೇಳೆ ರಾಜ್ಯ ಸರ್ಕಾರ ತಾರತಮ್ಯ ಮಾಡಿದೆ ಎಂದು ರಾಜ್ಯ ನಿವೃತ್ತ ಪೌರ ಸೇವಾ ನೌಕರ ಸಂಘದ ಅಧ್ಯಕ್ಷ ಎಲ್.ನಾರಾಯಣಾಚಾರ್ ದೂರಿದ್ದಾರೆ.

    ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ಆರೋಗ್ಯ, ಪೊಲೀಸ್ ಇಲಾಖೆಗೆ ಜ್ಯೋತಿ ಸಂಜೀವಿನಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ನಗರಸಭೆ, ಪಪಂ, ಪುರಸಭೆ ಸಿಬ್ಬಂದಿಗೆ ಈ ವ್ಯವಸ್ಥೆ ಕಲ್ಪಿಸದಿರುವುದು ಸರಿಯಲ್ಲ.

    ನಗರ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಣೆ, ಪ್ರಮುಖ ಬೀದಿ ಹಾಗೂ ಚರಂಡಿಗಳ ಸ್ವಚ್ಛತೆ, ಮಲಗುಂಡಿಗಳ ನಿರ್ವಹಣೆ ಸೇರಿ ವಿವಿಧ ರೀತಿ ಆರೋಗ್ಯಕ್ಕೆ ಹಾನಿಕಾರವಾಗಿರುವ ಕೆಲಸ ನಿರ್ವಹಿಸುವ ವರ್ಗಕ್ಕೆ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಮೊದಲ ಆದ್ಯತೆ ಆಗಬೇಕು ಎಂದಿದ್ದಾರೆ.

    ಈಗಾಗಲೆ ಈ ನೌಕರ ವರ್ಗಕ್ಕೆ ಆರೋಗ್ಯ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಚಿಕಿತ್ಸೆ ಪಡೆದು ಅದರ ವೆಚ್ಚ ಭರಿಸಿದ ನಂತರ ಬಿಲ್‌ಗಳನ್ನು ಹಾಜರುಪಡಿಸಿದರೆ ಶೇ.60ರಷ್ಟು ಹಣ ವಾಪಾಸ್ಸು ನೀಡಲಾಗುತ್ತಿದೆ. ಅನೇಕರು ಚಿಕಿತ್ಸೆಗೆ ಹಣವಿಲ್ಲದೆ ಮೃತಪಟ್ಟ ಉದಾಹರಣೆಗಳು ಇವೆ.

    ಬಹುತೇಕರು ಬಿಲ್‌ಗಳನ್ನು ಕಳೆದುಕೊಂಡು ಚಿಕಿತ್ಸೆಗೆ ಭರಿಸಿದ ಹಣ ವಾಪಸ್ಸು ಪಡೆಯಲು ಸಾಧ್ಯವಾಗದಂತಹ ಸಂದರ್ಭಗಳು ಹೆಚ್ಚು ಇವೆ. ಆದ್ದರಿಂದ ಆರೋಗ್ಯ, ಪೊಲೀಸ್ ಇಲಾಖೆಗೆ ಕಲ್ಪಿಸಿರುವಂತೆ ಜ್ಯೋತಿ ಸಂಜೀವಿನಿ ಆರೋಗ್ಯ ಸೌಲಭ್ಯ ಪೌರಸೇವಾ ನೌಕರರಿಗೂ ಕಲ್ಪಿಸಬೇಕು.

    ಇದರಿಂದ ಹೈಟೆಕ್ ಆಸ್ಪತ್ರೆಯಲ್ಲಿ ತಕ್ಷಣಕ್ಕೆ ಹಣ ರಹಿತವಾಗಿ ಚಿಕಿತ್ಸೆ ಪಡೆಯಲು ಸ್ವಚ್ಛತಾ ಸೇನಾನಿಗಳಿಗೆ ಸಹಕಾರಿ ಆಗಲಿದೆ. ಆದ್ದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ನಿಟ್ಟಿನಲ್ಲಿ ಮಾನವೀಯತೆ ನೆಲೆಗಟ್ಟಿನಲ್ಲಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts