More

    ಕನ್ನಡ ಭಾಷಾಭಿಮಾನ ಎಲ್ಲರಲ್ಲೂ ಇರಲಿ

    ಹಿರಿಯೂರು: ನಾಡಿನ ಸಂಸ್ಕೃತಿ ಪ್ರತಿಯೊಬ್ಬ ಮಾನವನ ಸಂಬಂಧ ಬೆಸೆಯುತ್ತದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಹೇಳಿದರು.

    ನಗರದ ನಿವೃತ್ತ ನೌಕರರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಿಗೆ ಕನ್ನಡ ಧ್ವಜ ನೀಡಿ ಮಾತನಾಡಿ, ನಾಡಿನ ಇತಿಹಾಸ, ಭವ್ಯ ಪರಂಪರೆ ತಿಳಿದು ಬದ್ಧತೆಯ ಬದುಕು ರೂಪಿಸಿಕೊಳ್ಳುವುದು ಕನ್ನಡಿಗರ ಧ್ಯೇಯವಾಗಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಚಂದ್ರಯ್ಯ ಮಾತನಾಡಿ, ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಮತ್ತು ಸಾಂಸ್ಕೃತಿಕ ತಿಳಿವಳಿಕೆಯನ್ನು ಅರ್ಥಮಾಡಿಕೊಳ್ಳಬೇಕು. ಸರ್ ಎಂ.ವಿಶ್ವೇಶ್ವರಯ್ಯನವರು ವಿವಿ ಸಾಗರ ಮತ್ತು ಗಾಯತ್ರಿ ಜಲಾಶಯ ನಿರ್ಮಿಸಿ ಜಿಲ್ಲೆಯ ರೈತರ ಬದುಕಿಗೆ ದಾರಿದೀಪವಾಗಿದ್ದು, ಅವರ ಸೇವೆಯನ್ನು ಎಲ್ಲರೂ ಸ್ಮರಿಸಬೇಕು ಎಂದು ತಿಳಿಸಿದರು.

    ಕಸಾಪ ತಾಲೂಕಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹರ್ತಿಕೋಟೆ ಮಹಾಸ್ವಾಮಿ ಮಾತನಾಡಿ, ನಾಡಿನ ನೆಲ, ಜಲ, ಸಂಸ್ಕೃತಿ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮ ನಡೆಸುವ ಮೂಲಕ ನಾಡಿನ ಸಂಸ್ಕೃತಿ ಬಿಂಬಿಸುವ ಕೆಲಸವಾಗಬೇಕಿದೆ ಎಂದರು.

    ನಿಕಟ ಪೂರ್ವ ಗೌರವ ಕಾರ್ಯದರ್ಶಿ ಪಿ.ಎಸ್.ಸಾದತ್ ಉಲ್ಲಾ, ಗೌರವ ಕೋಶಾಧ್ಯಕ್ಷ ಎಂ.ಎಸ್.ರಾಘವೇಂದ್ರ, ಗೌರವ ಕಾರ್ಯದರ್ಶಿಗಳಾದ ಅಸ್ಗರ್ ಅಹಮ್ಮದ್, ಜೆ.ನಿಜಲಿಂಗಪ್ಪ, ಯರದಕಟ್ಟೆ ತಿಪ್ಪೇಸ್ವಾಮಿ, ಕಸಬಾ ಹೋಬಳಿ ಅಧ್ಯಕ್ಷ ಟಿ.ದಿವಾಕರ್, ಪದಾಧಿಕಾರಿಗಳಾದ ಸಕ್ಕರ ರಂಗಸ್ವಾಮಿ, ಹೊರಕೇರಪ್ಪ, ಪ್ರಹ್ಲಾದ್, ಗಡಾರಿ ಕೃಷ್ಣಪ್ಪ, ಕಾಂತರಾಜ್, ದಿವುಶಂಕರ್, ಮುದ್ದುಲಿಂಗಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts