More

    ತುಮರಿಕೊಪ್ಪದಲ್ಲಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ: ಒಂದು ಕ್ವಿಂಟಾಲ್ ಜೋಳದ ಚೀಲ ಹೊತ್ತು ದೀರ್ಘದಂಡ ನಮಸ್ಕಾರ

    ಹನುಮಸಾಗರ: ತುಮರಿಕೊಪ್ಪ ಗ್ರಾಮದಲ್ಲಿ ಭಾನುವಾರ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ ವಿಜೃಂಭಣೆಯಿಂದ ಜರುಗಿತು. ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಹೋಮ-ಹವನ, ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಮಂಗಳಾರತಿ, ನೈವೇದ್ಯ ಇತರ ಧಾರ್ಮಿಕ ಕಾರ್ಯಗಳು ಜರುಗಿದವು. ಶ್ರೀಸ್ವಾಮಿ ಮೂರ್ತಿಗೆ ಹೂವು ಮತ್ತು ವೀಳ್ಯದೆಲೆಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

    ಸಂಜೆ ಕಳಸ ಮತ್ತು ಸಕಲ ವಾದ್ಯಗಳೊಂದಿಗೆ ಗ್ರಾಮದ ಮನೆ ಮನೆಗೆ ತೆರಳಿ ಗಂಡಾರತಿ (ಗಂಡು ಮಕ್ಕಳು ಹೊರುವ ಆರತಿ) ಹೊರಡಿಸಲಾಯಿತು. ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಯುವಕರು ಸುತಗಾಯಿ ಒಡೆಯುವ ಮೂಲಕ ಕಾರ್ತಿಕೋತ್ಸವ ಆಚರಿಸಿದರು. ರಂಗಪ್ಪ ನಾಯ್ಕರ್, ಶರಣಪ್ಪ (ಕಲ್ಯಾಣಿ) ಪೂಜಾರ, ಯಮನೂರಪ್ಪ ಲಂಡೂರಿ, ಒಂದು ಕ್ವಿಂಟಾಲ್ ಜೋಳದ ಚೀಲ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ದೀರ್ಘದಂಡ ನಮಸ್ಕಾರ ಹಾಕಿ ಬಲಪ್ರದರ್ಶಿಸಿದರು.

    ಗ್ರಾಮದ ಜಹಗೀರ ಸುಮಂತ ಆರ್. ಕುಲಕರ್ಣಿ, ದೇವಸ್ಥಾನದ ಅರ್ಚಕ ಶಿವನಗೌಡ ಗೌಡ್ರ, ಗ್ರಾಪಂ ಅಧ್ಯಕ್ಷ ಹನುಮಂತ ಮೂಗನೂರು, ಸದಸ್ಯರಾದ ಮಹಾಂತೇಶ ಪೂಜಾರ, ರೇಖಾ ಲಂಡೂರಿ, ಆನಂದವ್ವ ಮಾದರ, ಮುಖಂಡರಾದ ಕೃಷ್ಣಪ್ಪ ಗುಡೂರು, ದ್ಯಾಮಣ್ಣ ಲಂಡೂರಿ, ಬಸಪ್ಪ ನಸಗುನ್ನಿ, ಫಕೀರಪ್ಪ ಮೂಗನೂರು, ಹೇಮಪ್ಪ ಪೂಜಾರ, ರಂಗಪ್ಪ ಪೂಜಾರ, ಲೋಕಪ್ಪ ಅಡವಿಬಾವಿ, ಷಣ್ಮುಖಪ್ಪ ಇಟಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts