More

    ಅಕ್ಷರ ಜಾತ್ರೆಗೆ ಎಲ್ಲರ ಸಹಕಾರ ಅಗತ್ಯ: ಕಸಾಪ ಗೌರವ ಸಲಹೆಗಾರ ಅಬ್ದುಲ್‌ಕರೀಂ ವಂಟೆಳಿ ಹೇಳಿಕೆ

    ಹನುಮಸಾಗರ: ಜಿಲ್ಲೆಯ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಎಲ್ಲರೂ ಕಾರ್ಯಪ್ರವೃತ್ತರಾಗಲಿ ಎಂದು ಕಸಾಪ ಗೌರವ ಸಲಹೆಗಾರ ಅಬ್ದುಲ್‌ಕರೀಂ ವಂಟೆಳಿ ಹೇಳಿದರು.
    ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಮಾ.5 ಮತ್ತು 6 ರಂದು ಸಮ್ಮೇಳನ ನಡೆಯಲಿದೆ. ಅಚ್ಚುಕಟ್ಟಾಗಿ ಸಮ್ಮೇಳನ ಜರುಗಲು ಸಮಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಭಾನುವಾರ ಬೆಳಗ್ಗೆ ರಾಷ್ಟ್ರಧ್ವಜಾರೋಹಣ, ಪರಿಷತ್ತು ಧ್ವಜಾರೋಹಣ, ಕನ್ನಡ ಧ್ವಜಾರೋಹಣ, ಸಮ್ಮೇಳನದ ದ್ವಾರಗಳ ಉದ್ಘಾಟನೆ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ಇರಲಿದೆ. ಕನ್ನಡಕಟ್ಟೆಯಿಂದ ಆರಂಭವಾಗುವ ಮೆರವಣಿಗೆ ಹಳೆ ಬಸ್‌ನಿಲ್ದಾಣ, ಗ್ರಾಮ ದೇವತೆ ದೇವಸ್ಥಾನ, ಬೀರಲಿಂಗೇಶ್ವರ ದೇವಸ್ಥಾನ ರಾಘವೇಂದ್ರಸ್ವಾಮಿ ಮಠ, ಕರಿಸಿದ್ದೇಶ್ವರ ಮಠ, ಗಾಂಧಿ ಸರ್ಕಲ್ ಮಾರ್ಗವಾಗಿ ಮಹಾವೇದಿಕೆಯಲ್ಲಿ ಸಮಾಪ್ತಿಯಾಗಲಿದೆ. ಕುಂಭ, ಭಜನೆ, ಡೊಳ್ಳು, ಕರಡಿ ಮಜಲು, ಕಣಿ ಹಲಗೆ ವಾದ್ಯ, ಲಮಾಣಿ ನೃತ್ಯ ಸೇರಿ ವಿವಿಧ ವಾಧ್ಯ ವೈಭವಗಳು ಮೆರವಣಿಗೆಗೆ ಸಾಕ್ಷಿಯಾಗಲಿವೆ. ನಂತರ ಸಭಾ ಕಾರ್ಯಕ್ರಮ ಹಾಗೂ ಗೋಷ್ಠಿಗಳು ಜರುಗಲಿದ್ದು, ಸಮ್ಮೇಳನದ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು ಎಂದರು.
    ಕಸಾಪ ಅಧ್ಯಕ್ಷ ಮಂಜುನಾಥ ಗುಳೆದಗುಡ್ಡ, ಪದಾಧಿಕಾರಿಗಳಾದ ಶ್ರೀನಿವಾಸ ಜಹಗೀರದಾರ, ಲೆಂಕೆಪ್ಪ ವಾಲಿಕಾರ, ಅಮರೇಶ ತಮ್ಮನ್ನವರ, ನಂದಲಾಲ ದಲಬಂಜನ, ಅಬ್ದುಲ್‌ರಜಾಕ್ ಟೇಲರ, ಬಸವರಾಜ ದಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts