More

    ಹಬ್ಬದಂತೆ ನಡೆದ ಮೊತ್ತಹಳ್ಳಿ ಸರ್ಕಾರಿ ಶಾಲೆ ವಾರ್ಷಿಕೋತ್ಸವ

    ಮಂಡ್ಯ: ತಾಲೂಕಿನ ಮೊತ್ತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಬ್ಬದಂತೆ ಅದ್ದೂರಿಯಾಗಿ ನಡೆಯಿತು.
    ಸಮಾರಂಭ ಹಾಗೂ ಊಟದ ಕೊಠಡಿ ಉದ್ಘಾಟಿಸಿದ ಬಿಇಒ ಚಂದ್ರಕಾಂತಾ ಮಾತನಾಡಿ, ಶಾಲೆಯಲ್ಲಿ 1 ರಿಂದ 5ನೇ ತರಗತಿಯವರೆಗೆ ಮಾತ್ರ ಇದೆ. ಅದನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಉನ್ನತೀಕರಿಸುವಂತೆ ಪ್ರಸ್ತಾವನೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
    ಶಿಕ್ಷಣ ಇಲಾಖೆ ಅಧಿಕಾರಿ ಲಕ್ಷ್ಮೀ ಮಾತನಾಡಿ, ಶಾಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿರುವುದರಿಂದ ಸುತ್ತಮುತ್ತಲ ಗ್ರಾಮಗಳ ಮಕ್ಕಳೂ ಈ ಶಾಲೆಯಲ್ಲಿ ದಾಖಲಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
    ಎಸ್‌ಡಿಎಂಎಸಿ ಅಧ್ಯಕ್ಷ ಲಿಂಗರಾಜು(ತೇಜು), ಗ್ರಾಪಂ ಅಧ್ಯಕ್ಷೆ ನಿರ್ಮಲಾ, ಪಿಡಿಒ ಜಯಪ್ಪ, ಗ್ರಾಪಂ ಸದಸ್ಯರಾದ ಕೆಂಪೇಗೌಡ, ಭಾಗ್ಯ ಚಾಮೇಗೌಡ, ರಾಣಿ ಪ್ರಕಾಶ್, ಮುಖ್ಯಶಿಕ್ಷಕಿ ಲಕ್ಷ್ಮೀ, ಶಿಕ್ಷಕಿ ಮಂಗಲಾ ಇತರರಿದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts