More

    VIDEO| ಕೇರಳ ವಿಧಾನಸಭೆಯಲ್ಲಿ ಭಾರೀ ಕೋಲಾಹಲ: ರಾಜ್ಯಪಾಲರನ್ನು ತಡೆದು ಗೋ ಬ್ಯಾಕ್ ಘೋಷಣೆ ಕೂಗಿದ ಶಾಸಕರು

    ತಿರುವನಂತಪುರಂ: ಕಾಂಗ್ರೆಸ್​ ನೇತೃತ್ವದ ಪ್ರತಿಪಕ್ಷದ ಶಾಸಕರು ಬುಧವಾರ ಬೆಳಗ್ಗೆ ಕೇರಳ ರಾಜ್ಯ ವಿಧಾನಸಭೆಗೆ ಆಗಮಿಸಿದ ರಾಜ್ಯಪಾಲ ಆರೀಫ್​ ಮೊಹಮ್ಮದ್​ ಖಾನ್ ವಿರುದ್ಧ​ ಘೋಷಣೆಗೆ ಕೂಗಿ ಭಾಷಣಕ್ಕೆ ಅಡ್ಡಿಪಡಿಸಿದರು.​

    ಸಿಎಂ ಪಿಣರಾಯಿ ವಿಜಯನ್​ ಜತೆಗೂಡಿ ವಿಧಾನಸಭೆಗೆ ಆಗಮಿಸಿದ ರಾಜ್ಯಪಾಲ ಮೊಹಮ್ಮದ್​ ಖಾನ್​ರನ್ನು ಶಾಸಕರು ತಡೆದರು. ಅಲ್ಲದೆ, ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಗೋ ಬ್ಯಾಕ್ ಘೋಷಣೆ ಕೂಗಿದರು. ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ, ನಾವು ಭಾರತೀಯರು ಸಿಎಎ ಅನ್ನು ವಿರೋಧಿಸುತ್ತೇವೆ ಎಂದು ವೇದಿಕೆಗೆ ತೆರಳಬೇಕಾದ ರಾಜ್ಯಪಾಲರಿಗೆ ಅವಕಾಶ ನೀಡದೆ ಪ್ರತಿಭಟಿಸಿದರು. ​

    ಇದೆಲ್ಲವನ್ನು ರಾಜ್ಯಪಾಲರು ತಾಳ್ಮೆಯಿಂದಲೇ ನಗುಮುಖದಿಂದಲೇ ನೋಡುತ್ತಾ ನಿಂತಿದ್ದರು. ಬಳಿಕ ಸಿಎಂ ವಿಜಯನ್, ಬೆಂಗಾವಲು ಪಡೆಗೆ ಸನ್ನೆ ಮಾಡಿ ದಾರಿ ಮಾಡಿಕೊಡುವಂತೆ ಹೇಳಿದರು.​ ಬಳಿಕ ಸಿಬ್ಬಂದಿ ಮಾನವ ಸರಪಳಿ ನಿರ್ಮಿಸಿ ರಾಜ್ಯಪಾಲನ್ನು ವೇದಿಕೆಯತ್ತ ಕರೆದೊಯ್ದರು. ಬಳಿಕ ರಾಷ್ಟ್ರೀಯ ಗೀತೆ ಹಾಡಲಾಯಿತು. ಮುಗಿದ ಬಳಿಕ ಬೆನ್ನಲ್ಲೇ ಶಾಸಕರು ಸದನದ ಬಾವಿಗೆ ಇಳಿದು ಘೋಷಣೆ ಕೂಗಲು ಆರಂಭಿಸಿದರು.

    ಬಳಿಕ ರಾಜ್ಯಪಾಲರ ನೀತಿ ಭಾಷಣವನ್ನು ಬಹಿಷ್ಕರಿಸಿದ ಶಾಸಕರು ವಿಧಾನಸಭೆಯನ್ನು ಬಿಟ್ಟು ಹೊರ ಭಾಗದಲ್ಲಿ ಧರಣಿ ನಡೆಸಲು ತೆರಳಿದರು. ಇತ್ತ ತಮ್ಮ ಭಾಷಣದಲ್ಲಿ ಸಿಎಎ ವಿಮರ್ಶೆಯನ್ನು ಒಳಗೊಂಡ ಪ್ಯಾರಾಗ್ರಾಫ್​ ಅನ್ನು ರಾಜ್ಯಪಾಲರು ಓದಿದರು. ಸಿಎಎ ವಿಚಾರದಲ್ಲಿ ನನ್ನದು ವಿಭಿನ್ನ ನಿಲುವು ಇದ್ದರೂ ಸಿಎಂ ವಿಜಯನ್​ ಮನವಿಯಂತೆ ಪ್ಯಾರಾಗ್ರಾಫ್​ ಓದುತ್ತಿದ್ದೇನೆ ಎಂದು ತಿಳಿಸಿದರು.

    ಇತ್ತ ಬಿಜೆಪಿ ನಾಯಕ ಜಯ ಸೂರ್ಯನ್​ ಪ್ರತಿಪಕ್ಷಗಳ ಪ್ರತಿಭಟನೆಯನ್ನು ರಾಷ್ಟ್ರ ವಿರೋಧಿ ಮತ್ತು ಸಂವಿಧಾನ ವಿರೋಧಿ ಎಂದು ಟೀಕಿಸಿದರು. ಆದರೂ ರಾಜ್ಯಪಾಲರು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

    ವಿಧಾನಸಭೆಯಲ್ಲಿ ಸಿಎಎ ವಿರುದ್ಧ ನಿರ್ಣಯ ಹೊರಡಿಸಿದ ಮೊದಲ ರಾಜ್ಯ ಎಂಬ ಹೆಸರನ್ನು ಕೇರಳ ಪಡೆದುಕೊಂಡಿದೆ. ಅಲ್ಲದೆ, ಸಿಎಎ ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಅರ್ಜಿಯನ್ನು ಸಹ ಸಲ್ಲಿಸಿದೆ. ಕೇರಳ ಸರ್ಕಾರದ ಈ ಎರಡು ನಡೆಯನ್ನು ರಾಜ್ಯಪಾಲರಾದ ಆರೀಫ್​ ಮೊಹಮ್ಮದ್​ ಖಾನ್ ಟೀಕಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts