More

    ಶಾಲಾ ಮಕ್ಕಳಿಗೆ ಮೊಳಕೆ ಕಟ್ಟಿದ ಸಿರಿಧಾನ್ಯ ನೀಡಿ

    ಮುಂದಿನ ತಿಂಗಳಿನಿಂದ ಶಾಲಾ ಮಕ್ಕಳಿಗೆ ಹಾಲಿನ ಜತೆ ರಾಗಿ ಮಾಲ್ಟ್ ನೀಡಲಾಗುವುದು ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿರುವುದು ಸ್ವಾಗತಾರ್ಹ ಹಾಗೂ ಔಚಿತ್ಯಪೂರ್ಣವಾಗಿದೆ.

    ಮಕ್ಕಳಲ್ಲಿ ಅಪೌಷ್ಟಿಕತೆ ತಗ್ಗಿಸಲು ರಾಗಿ ಮಾಲ್ಟ್ ನೀಡುವ ರಾಜ್ಯ ಸರಕಾರದ ನಿರ್ಧಾರವೇನೋ ಸೂಕ್ತವಾದುದು. ಆದರೆ, ಇದರ ಜತೆಜತೆಗೇ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮೊಳಕೆ ಕಟ್ಟಿದ ಸಿರಿಧಾನ್ಯ ವಿತರಿಸಿದರೆ ಬಹಳ ಉಪಯುಕ್ತವಾಗುತ್ತದೆ. ಇದರಿಂದ ಸಿರಿಧಾನ್ಯ ಬೆಳೆದ ರೈತರಿಗೂ ಆರ್ಥಿಕವಾಗಿ ಉತ್ತೇಜನ-ಪೋ›ತ್ಸಾಹ ನೀಡಿದಂತಾಗುತ್ತದೆ.

    ಶಾಲಾ ಮಕ್ಕಳ ಹಾಜರಾತಿ ಹೆಚ್ಚಿಸಲು ಸರಕಾರ ಅನೇಕ ಉಪಯುಕ್ತ ಗುಣಾತ್ಮಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೂ ಸರಕಾರಿ ಶಾಲೆಗಳ ಬಗ್ಗೆ ಬಹುತೇಕ ಪಾಲಕರಲ್ಲಿ ಇನ್ನೂ ಕೀಳಂದಾಜು ಹೋಗದೇ ಇರುವುದು ವಿಷಾದನೀಯ. ಸರಕಾರಿ ಶಾಲೆಗಳ ಬಗ್ಗೆ ಜನರಲ್ಲಿ ಒಳ್ಳೆಯ ಭಾವನೆ ಮೂಡುವಂತೆ ಸುಧಾರಣಾ ಕ್ರಮಗಳನ್ನು ಸರಕಾರ ಕೈಗೊಳ್ಳಲಿ.

    | ಜಯವೀರ ಎ.ಕೆ. ಖೇಮಲಾಪುರ, ತಾ. ರಾಯಬಾಗ

    ಪಾಲಿಕೆಯ ಸಹಕಾರದೊಂದಿಗೆ ಬೆಂಗಳೂರು ಹಬ್ಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts