More

    VIDEO: ಲಾಕ್​ಡೌನ್​ ಮೀರಿ ಈಸ್ಟರ್​ ಸಂಡೇ ಪ್ರಾರ್ಥನೆಗೆ ಚರ್ಚ್​ಗೆ ಬರಲು ಅವಕಾಶ ನೀಡದ ಪಾದ್ರಿ; ಬದಲಿಗೆ ಭಕ್ತರ ಫೋಟೋ ತರಿಸಿಕೊಂಡ್ರು…

    ಬರ್ಲಿನ್​: ನೊವೆಲ್​ ಕರೊನಾ ವೈರಸ್​ ಭೀತಿಯಿಂದಾಗಿ ಹೊರಗೆಲ್ಲೂ ಹೋಗಲಾಗುತ್ತಿಲ್ಲ. ಗುಡಿ, ಚರ್ಚ್​ಗಳೆಲ್ಲ ಬಂದ್​ ಆಗಿವೆ. ಸದ್ಯ ಮನೆಯಲ್ಲೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ, ಪ್ರತಿದಿನದ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.

    ಜರ್ಮನಿಯ ಹಲವು ಚರ್ಚ್​ಗಳಲ್ಲಿ ಜನರು ಆನ್​ಲೈನ್​ ಮೂಲಕ ಈಸ್ಟರ್​ ಭಾನುವಾರದ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಸಣ್ಣ ಪಟ್ಟಣವೊಂದರ ಪಾದ್ರಿ ಮತ್ತೊಂದು ಒಳ್ಳೆಯ ಉಪಾಯ ಕಂಡುಕೊಂಡಿದ್ದಾರೆ.

    ಜರ್ಮನಿಯ ಪ್ಯಾರಿಶ್​ ಚರ್ಚ್​ ಆಫ್​ ಅವರ್​ ಲೇಡಿ ಚರ್ಚ್​ನ ಪಾದ್ರಿ ಜೋಕಿಮ್ ಗೀಸ್ಲರ್ ತಮ್ಮ ಚರ್ಚ್​ಗೆ ಪ್ರತಿದಿನ ಭೇಟಿ ನೀಡುವವರ ಬಳಿ ಪ್ರಿಂಟ್ ಫೋಟೋವನ್ನು ಕಳಿಸಲು ಹೇಳಿದ್ದರು. ಅವರೆಲ್ಲ ತಮ್ಮ ಡಿಜಿಟಲ್​ ಫೋಟೋವನ್ನು ಕಳಿಸಿಕೊಟ್ಟಿದ್ದರು. ಈಸ್ಟರ್ ಭಾನುವಾರದ ದಿನ ಆ ಫೋಟೋಗಳನ್ನೆಲ್ಲ ಚರ್ಚ್​ನ ಬೋಧನಾ ಸ್ಥಳದಲ್ಲಿರುವ ಟೇಬಲ್​ಗಳ ಅಂಟಿಸಿ, ಪ್ರಾರ್ಥನೆ ಸಲ್ಲಿಸಲಾಗಿದೆ.
    ಅಲ್ಲಿಗೆ ಚರ್ಚ್​​ಗೆ ಕಾಯಂ ಬಂದು ಪ್ರಾರ್ಥನೆ ಸಲ್ಲಿಸುವವರು ಈಸ್ಟರ್​ ಸಂಡೆ ಪ್ರೇಯರ್​ನಲ್ಲಿ ಪಾಲ್ಗೊಂಡಂತಾಗಿದೆ. ಅದರ ವಿಡಿಯೋ ಕೂಡ ಎಲ್ಲೆಡೆ ವೈರಲ್​ ಆಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts