More

    ಶಿಕ್ಷಣ ನೀಡಿದರೆ ಮೌಢ್ಯದಿಂದ ಹೊರಬರಲು ಸಾಧ್ಯ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿಕೆ

    ಗಂಗಾವತಿ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಸಮುದಾಯ ಮೌಢ್ಯದಿಂದ ಹೊರಬರಲು ಸಾಧ್ಯ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.

    ಗೌಳಿ ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತ ಅಧ್ಯಯನ ನಿಮಿತ್ತ ನಗರದ ಲಕ್ಷ್ಮೀ ಕ್ಯಾಂಪ್ ಗೌಳಿ ನಗರಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದರು. ಅಲೆಮಾರಿ ವಿಭಾಗದಲ್ಲಿ ಸೇರಿಸುವಂತೆ ಸಮುದಾಯ ಮನವಿ ಮಾಡಿದ್ದು, ಸೌಲಭ್ಯ ಪಡೆಯುವ ಮುನ್ನ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಬೇಕು. ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿರುವ ಮೌಢ್ಯವನ್ನು ದೂರ ಮಾಡಬೇಕು. ಕುಟುಂಬದ ಎಲ್ಲರೂ ಕುಲಕಸುಬು ಆಯ್ಕೆ ಮಾಡಿಕೊಳ್ಳಬೇಡಿ, ಓದಿಗೂ ಮಹತ್ವ ನೀಡಿದರೆ ಎಲ್ಲವನ್ನೂ ಪಡೆಯಲು ಸಾಧ್ಯ. ಸಮುದಾಯದ ಕುಲಕಸುಬಿಗಾಗಿ ಸರ್ಕಾರದ ಜಾಗ ಇರುವ ಬಗ್ಗೆ ಮಾಹಿತಿ ನೀಡಿದರೆ, ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು. ಮೀಸಲು ಸೌಲಭ್ಯಕ್ಕೆ ಸಂಬಂಧಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು. ಗೌಳಿನಗರದ ಕೆಲ ಏರಿಯಾಗಳಿಗೆ ಭೇಟಿ ನೀಡಿ ಜನರ ಸಂಪ್ರದಾಯ, ಉದ್ಯೋಗ, ಕುಟುಂಬ ನಿರ್ವಹಣೆ ಮತ್ತು ಶೈಕ್ಷಣಿಕ ಪ್ರಮಾಣದ ಬಗ್ಗೆ ಮಾಹಿತಿ ಪಡೆದರು.

    ಆಯೋಗದ ಸದಸ್ಯರಾದ ಶಾರದಾ ನಾಯ್ಕ, ಹಿಂದುಳಿದ ವರ್ಗಗಳ ಇಲಾಖೆ ಡಿಡಿ ಗಂಗಾಧರ ದೊಡ್ಮನಿ, ನಗರಸಭೆ ವಿಪಕ್ಷ ನಾಯಕ ನವೀನ್ ಮಾಲಿಪಾಟೀಲ್, ಮುಖಂಡರಾದ ರಮೇಶ ಗೌಳಿ, ಸುಬ್ರಮಣ್ಯ, ನರಸಪ್ಪ ಗೌಳಿ, ಈಶ್ವರಪ್ಪ ಇತರರಿದ್ದರು.

    ಮನವಿಗಳ ಮಹಾಪೂರ: ವೆಂಕಟಗಿರಿ ಶ್ರೀ ವೆಂಕಟರಮಣ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆಗೆ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ, ಬೇಡ ಜಂಗಮ ಸಮಾಜ, ಹಡಪದ ಅಪ್ಪಣ್ಣ ಸಮಾಜದ ಸದಸ್ಯರು ಮೀಸಲು ವರ್ಗಕ್ಕೆ ಸೇರಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಗೌಳಿ, ನೊಳಂಬ, ವೀರಶೈವ ಲಿಂಗಾಯತ, ಪಂಚಮಸಾಲಿ, ಆದಿಬಣಜಿಗ, ಕುಡುವಕ್ಕಲಿಗ ಸೇರಿ ಇತರ ಸಮುದಾಯದ ಸ್ಥಿತಿಗತಿ ಬಗ್ಗೆ ಜನರಿಂದ ಮಾಹಿತಿ ಸಂಗ್ರಹಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts