More

    ವಾಣಿಜ್ಯ ಬೆಳೆಗಳ ಬಗ್ಗೆ ಗಮನವಿರಲಿ ; ತಾಪಂ ಇಒ ಡಿ.ಮೋಹನ್ ಸಲಹೆ


    ಗಂಗಾವತಿ: ಜಮೀನಿನ ಲವತ್ತತೆಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಬೇಕು. ಆರ್ಥಿಕ ಅಭಿವೃದ್ಧಿಗೆ ವಾಣಿಜ್ಯ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ ತಾಪಂ ಇಒ ಡಿ.ಮೋಹನ್ ಹೇಳಿದರು.

    ನಗರದ ತಾಪಂ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ರೇಷ್ಮೆ ಬೆಳೆಗಾರರಿಗೆ ಬೆಡ್ ಕ್ಲೀನಿಂಗ್ ನೆಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹಧನ ಸೌಲಭ್ಯವಿದೆ. ರೇಷ್ಮೆ ಬೆಳೆಗೆ ಸಲಕರಣೆಗಳ ಉಚಿತ ಪೂರೈಕೆ ಜತೆಗೆ ಸಹಾಯಧನದ ಸೌಲಭ್ಯವೂ ಇದೆ. ರೇಷ್ಮೆ ಬೆಳೆಗೆ ಉತ್ತಮ ಬೆಲೆಯಿದ್ದು, ಇಲಾಖೆಯಿಂದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 50 ಸಾವಿರ ರೂ.ವೆಚ್ಚದಲ್ಲಿ ಲಾನುಭವಿಗಳಿಗೆ ಬೆಡ್ ಕ್ಲೀನಿಂಗ್ ನೆಟ್ ವಿತರಿಸಲಾಗುವುದು ಎಂದರು.

    ತಾಲೂಕು ರೇಷ್ಮೆ ಅಧಿಕಾರಿ ಧರೆಪ್ಪ ಎಲ್.ಹೊನ್ನಮುಡೆ ಮಾತನಾಡಿ, 24 ಲಾನುಭವಿಗಳಿಗೆ ನೆಟ್‌ಗಳನ್ನು ವಿತರಿಸಲಾಗಿದೆ. ಕನಕಗಿರಿ ಮತ್ತು ಗಂಗಾವತಿ ತಾಲೂಕಿನ ರೈತರು ರೇಷ್ಮೆ ಬೆಳೆಗೆ ಆದ್ಯತೆ ನೀಡಿದ್ದಾರೆ ಎಂದರು. ರೈತರಾದ ವೆಂಕೋಬ ಕರಡಿ, ಮುತ್ತಣ್ಣ ವಿಠಲಾಪುರ, ಎಚ್.ಎಸ್.ಕುಲಕರ್ಣಿ, ಕನಕಪ್ಪ ತಿಪ್ಪನಾಳ ಮತ್ತು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts