More

    ಪೊಲೀಸ ಇಲಾಖೆಯ ಕಣ್ಗಾವಲು ವ್ಯವಸ್ಥೆಗೆ ಸಚಿವ ಎಚ್.ಕೆ.ಪಾಟೀಲ ಚಾಲನೆ

    ಗದಗ: ರಾಜ್ಯದಲ್ಲಿಯೇ ಗದಗ ಜಿಲ್ಲೆಯಲ್ಲಿ ಕಣ್ಗಾವಲು ವ್ಯವಸ್ಥೆಯನ್ನು ಮೊಟ್ಟಮೊದಲ ಬಾರಿಗೆ ಜಾರಿಗೊಳಿಸಿ ಜನರನ್ನು ಮತ್ತು ಜನರ ಆಸ್ತಿಯನ್ನು ರಕ್ಷಿಸುವಲ್ಲಿ ಪೊಲೀಸ ಇಲಾಖೆ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ಹೇಳಿದರು.

    ನಗರದ ಶಹರ ಪೆÇಲೀಸ್ ಠಾಣೆ ಆವರಣದಲ್ಲಿ ಗುರುವಾರ ಕೀಲಿ ಹಾಕಿದ ಮನೆಗಳ ಕಣ್ಗಾವಲು ವ್ಯವಸ್ಥೆ ಹಾಗೂ ಪೆÇಲೀಸ್ ಜಾಗೃತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮನೆಗಳ್ಳತನ ತಡೆಯುವುದಕ್ಕೆ ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಕಣ್ಗಾವಲು ವ್ಯವಸ್ಥೆ ಆರಂಭಿಸಿ ಜನರ ಆಸ್ತಿಯನ್ನು ಸಂರಕ್ಷಿಸಿ ಕಳ್ಳತನ ಮಾಡುವರಿಗೆ ತಕ್ಕ ಶಾಸ್ತಿ ಮಾಡುವ ಯೋಜನೆ ಜಾರಿಗೊಳಿಸಲಾಗಿದೆ ಎಂದರು.  

    ಪೆÇಲೀಸ್ ಇಲಾಖೆ ಅತ್ಯಂತ ಕಾಳಜಿ ವಹಿಸಿ ಗಂಭೀರವಾಗಿ ಕಾರ್ಯ ಪ್ರವೃತ್ತರಾಗಿದ್ದು ಈಗಾಗಲೇ ಯೋಜನೆಗೆ ಬೇಕಾದ ಅಗತ್ಯ ಉಪಕರಣಗಳನ್ನು ಒದಗಿಸಲು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.  ಜಿಲ್ಲಾ ಪೊಲೀಸ ಇಲಾಖೆಯಿಂದ ಈಗಾಗಲೇ ಥರ್ಡ ಐ ಯೋಜನೆ ಜಾರಿಗೊಳಿಸುವ ಮೂಲಕ ಜನಸಾಮಾನ್ಯರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ಜಾಗೃತಿ ಮೂಡಿಸಿ ಅನುಷ್ಟಾನಗೊಳಿಸಲಾಗುತ್ತಿದೆ.  ಥರ್ಡ ಐ ಜಾರಿಯಿಂದ ಕಾನೂನು ಸುವ್ಯವಸ್ಥೆ ಸರಿಯಾದ ಕ್ರಮದಲ್ಲಿ ಸಾಗುತ್ತಿದ್ದು  ಪ್ರಕರಣಗಳನ್ನು ಕಂಡು ಹಿಡಿಯಲು ಥರ್ಡ ಐ ಸಹಕಾರಿಯಾಗಿದೆ ಎಂದರು.  ನಗರದ  ಜನನಿಬಿಡ ಹೊಸ ಬಡಾವಣೆಗಳಲ್ಲಿ ಮನೆಗಳಗಳತನ ಪ್ರಕರಣಗಳ ತಡೆಗೆ ಈ ಕಣ್ಗಾವಲು ವ್ಯವಸ್ಥೆ ಅತ್ಯಂತ ಸಹಕಾರಿಯಾಗಿದೆ. ಜನಸಮಾನ್ಯರ ಮನೆ ಹಾಗೂ ಆಸ್ತಿ ರಕ್ಷಣೆ ಮಾಡುವ ಕಾರ್ಯದಲ್ಲಿ ಪೊಲೀಸ ಇಲಾಖೆ ಈ ಕಣ್ಗಾವಲು ವ್ಯವಸ್ಥೆ ಮೂಲಕವೂ ಮಾಡಬಹುದಾಗಿದೆ. ಇದಕ್ಕಾಗಿ ಪೊಲೀಸ ಇಲಾಖೆಗೆ ಅಭಿನಂದಿಸುತ್ತೇನೆ ಎಂದರು.  

    ಪೊಲೀಸ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಸೌಜನ್ಯದಿಂದ ಕಾರ್ಯನಿರ್ವಹಿಸುವ ಮೂಲಕ ಆದರ್ಶ ಸಮಾಜ ನಿರ್ಮಾಣಕ್ಕೆ ಮುಂದಾಗಲಿ. ಪೊಲೀಸ ಇಲಾಖೆಯಲ್ಲಿನ ತಾಂತ್ರಿಕ ಆಧುನೀಕರಣಕ್ಕೆ ಅಗತ್ಯವಿರುವ ಸಂಪೂರ್ಣ ಬೆಂಬಲವನ್ನು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.  

    ಸಮಾಜದಲ್ಲಿ ಶಾಂತಿ, ಸುರಕ್ಷತೆ, ಸಮಾಧಾನ ತರಲು ಪೊಲೀಸ ಇಲಾಖೆ ಅಧಿಕಾರಿಗಳು ಜನಸ್ನೇಹಿ ಕಾರ್ಯಗಳ ಮೂಲಕ ಸಾಧ್ಯಮಾಡಬಹುದಾಗಿದೆ. ಪೊಲೀಸರೂ ಸಹ ಸಮಾಜಸೇವಕರು. ನೀವು ಮಾಡುವ ಒಳ್ಳೆಯ ಕಾರ್ಯ ಸರ್ಕಾರಕ್ಕೆ ಕೀರ್ತಿ ತರಲಿದೆ. ಸಂಸ್ಕøತಿ ಸೇವೆ ಶಿಸ್ತಿಗೆ  ಗದಗ ಜಿಲ್ಲೆ ಪೊಲೀಸ ಇಲಾಖೆ ಹಸರು ವಾಸಿಯಾಗಿದೆ   ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಹೇಳಿದರು.

    ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ ಅವರು ಮಾತನಾಡಿ ಜಿಲ್ಲೆಯಲ್ಲಿ ಅಪರಾಧಗಳನ್ನು ತಡೆಗಟ್ಟಲು ಕಣ್ಗಾವಲು ವ್ಯವಸ್ಥೆಯಿಂದ ಬೀಗಹಾಕಿದ ಮನೆಗಳ ನಿಗಾವಹಿಸಲು ಉಪಯುಕ್ತವಾಗಿದೆ ಎಂದರು. ಸಹಾಯವಾಣಿ  9480021100 ಸಂಖ್ಯೆಗೆ  help    ಎಂದು ವಾಟ್ಸಪ್ ಮಾಡಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

    ಪೆÇಲೀಸ್ ಜಾಗೃತಿ ವಾಹನ ಮೂಲಕ ಮನೆ ಕಳ್ಳತನ,ಸರ ಕಳ್ಳತನ, ವಾಹನ ಕಳವು, ಮಾದಕ ವಸ್ತುಗಳ ದುರ್ಬಳಕೆ, ಸಂಚಾರಿ ನಿಯಮದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ   ಮೂಡಿಸಲಾಗುತ್ತಿದೆ ಎಂದರು.

    ಜನಸ್ನೇಹಿ ಪೊಲೀಸ ವ್ಯವಸ್ಥೆಗೆ ಗದಗ ಜಿಲ್ಲಾ ಪೊಲೀಸ ಇಲಾಖೆ ಸದಾ ಸಿದ್ಧವಾಗಿದೆ. ಸೈಬರ್ ಅಪರಾಧಗಳು ನಡೆದಲ್ಲಿ ಸಹಾಯವಾಣಿ ಸಂಖ್ಯೆ  1930 ತುರ್ತು ಸಂದರ್ಭದಲ್ಲಿ ತುರ್ತು ಸಹಾಯವಾಣಿ 112 ಗೆ ಸಾರ್ವಜನಿಕರು ಕರೆ ಮಾಡಿ ಸಹಾಯ ಪಡೆಯುವಂತೆ ತಿಳಿಸಿದರು.

    ಈ ಸಂದರ್ಭದಲ್ಲಿ  ಹೆಚ್ಚುವರಿ ಪೊಲೀಸ ಅಧೀಕ್ಷಕ ಎಂ.ಬಿ. ಸಂಕದ ಸೇರಿದಂತೆ ಪೊಲೀಸ ಇಲಾಖೆಯ ಹಿರಿಯ ಅಧಿಕಾರಿಗಳು, ಗಣ್ಯರಾದ ಡಾ.ನಾಗನೂರ, ಪ್ರಭು ಬುರಬುರೆ, ಎಸ್.ಎನ್.ಬಳ್ಳಾರಿ, ಅಶೋಕ ಮಂದಾಲಿ, ಭಾಷಾ ಮಲ್ಲಸಮುದ್ರ, ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts