More

    48 ಗಂಟೆಗಳಲ್ಲಿ ಸುಲಿಗೆಕೋರರು ಅಂದರ್, 1.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ

    ಗದಗ: ನಗರದ ಬೆಟಗೇರಿ ಬಡಾವಣೆ ಠಾಣೆ ವ್ಯಾಪ್ತಿಯ ಎಪಿಎಂಸಿ ದನದ ಮಾರ್ಕೆಟ್‌ನಲ್ಲಿ ಫೆ. 18ರಂದು ಆಟೋ ಚಾಲಕನನ್ನು ಹೆದರಿಸಿ, ಜೀವ ಬೆದರಿಕೆ ಹಾಕಿ 1.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿಕೊಂಡು ಹೋದ ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
    ಪ್ರಕರಣ ದಾಖಲಾದ 48 ಗಂಟೆಯೊಳಗಾಗಿ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ಆರೋಪಿಗಳಾದ ಸ್ಥಳೀಯ ಸಿದ್ಧಾರ್ಥ ನಗರದ ನಿವಾಸಿಗಳಾದ ಕಿಶೋರ ಯಲ್ಲಪ್ಪ ಕಟ್ಟಿಮನಿ(25), ಶಿವಕುಮಾರ ನಾಗಪ್ಪ ಗುಡಿಮನಿ(20) ಹಾಗೂ ಪ್ರತಾಪ್ ಧರ್ಮಣ್ಣ ಹೊಸಮನಿ(32) ಅವರನ್ನು ಆಭರಣ ಸಮೇತ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
    ಘಟನೆ ವಿವರ:
    ಹಾತಲಗೇರಿ ಗ್ರಾಮದ ನಿವಾಸಿ ಬಸವರಾಜ ಜಂಬಣ್ಣ ಹಡಗಲಿ ಎಂಬುವವರು ಫೆ. 18ರಂದು ಸಂಜೆ 6ಕ್ಕೆ ಗದಗ ಹಳೆ ಬಸ್ ನಿಲ್ದಾಣದಿಂದ ನಗರದಲ್ಲಿನ ಶಿಕ್ಷಕರ ಬಡಾವಣೆಯಲ್ಲಿರುವ ತಮ್ಮ ನಿವಾಸಕ್ಕೆ ಆಟೋದಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಮೂರು ಜನ ಆರೋಪಿಗಳು ಡ್ರಾಪ್ ಕೇಳುವ ನೆಪದಲ್ಲಿ ಆಟೋ ಹತ್ತಿ ಎಪಿಎಂಸಿ ದನದ ಮಾರ್ಕೆಟ್ ಬಳಿ ಆಟೋ ನಿಲ್ಲಿಸಿ, ಅಡ್ಡಗಟ್ಟಿ ಹೆದರಿಸಿ, ಜೀವ ಬೆದರಿಕೆ ಹಾಕಿದ್ದಲ್ಲದೇ ಚಾಲಕನು ತನ್ನ ಮೈಮೇಲೆ ಹಾಕಿಕೊಂಡಿದ್ದ 15 ಗ್ರಾಂ ತೂಕದ 60 ಸಾವಿರ ಮೌಲ್ಯದ ಒಂದು ಬಂಗಾರದ ಬ್ರಾಸ್ಲೇಟ್, 15 ಗ್ರಾಂ ತೂಕದ 60ಸಾವಿರ ರೂ. ಮೌಲ್ಯದ ಒಂದು ಬಂಗಾರದ ಚೈನ್ ಹಾಗೂ 5 ಗ್ರಾಂ ತೂಕದ 200 ಸಾವಿರ ಮೌಲ್ಯದ ಒಂದು ಬಂಗಾರದ ಉಂಗುರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು.
    ಫೆ. 18ರಂದು ಸುಲಿಗೆಯಾಗಿದ್ದರೂ ಆಟೋ ಚಾಲಕನು ಭಯದಿಂದ ಪ್ರಕರಣ ದಾಖಲಿಸಿರಲಿಲ್ಲ. ಫೆ. 26ರಂದು ನಗರದ ಬೆಟಗೇರಿ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಎಸ್‌ಪಿ ಎಂ.ಬಿ. ಸಂಕದ ಹಾಗೂ ಡಿವೈಎಸ್‌ಪಿ ಜೆ.ಎಚ್. ಇನಾಮದಾರ ಮಾರ್ಗದರ್ಶನದಲ್ಲಿ ಸಿಪಿಐ ಧೀರಜ್ ಬಿ. ಹಾಗೂ ಪಿಎಸ್‌ಐ ವಿಜಯಕಮಾರ ತಳವಾರ ನೇತೃತ್ವದ ತಂಡವು ಪ್ರಕರಣ ದಾಖಲಾದ 48 ಗಂಟೆಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts