More

    ಉದ್ಯೋಗಸ್ಥರು ನಿರುದ್ಯೋಗಿಗಳಿಗೆ ಸಹಕರಿಸಲಿ

    ಸೊರಬ: ಬದಲಾದ ಕಾಲಘಟ್ಟದಲ್ಲಿ ಉದ್ಯೋಗ ಹಿಡಿದು ಜೀವನ ಮಾಡುವ ಅನಿವಾರ್ಯತೆ ಎದುರಾಗಿದ್ದು ಉದ್ಯೋಗ ಪಡೆದವರು ನಿರುದ್ಯೋಗಿ ಹಾಗೂ ಗ್ರಾಮೀಣರ ಸಂಕಷ್ಟಗಳಿಗೆ ನೆರವಾದಾಗ ಮಾತ್ರ ಸಮಾಜದ ಋಣ ತೀರಿಸಿದ ತೃಪ್ತಿ ಸಿಗಲಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

    ತಾಳಗುಪ್ಪ ಹೋಬಳಿಯ ಮಂಡಗಳಲೆ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಿ.ಕೆರಿಯಪ್ಪ ಎಂ.ವಡ್ನಾಲ್ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ ಹಾಗೂ ಟ್ರಸ್ಟ್ ಅಡಿ ನಿರ್ವಿುಸಿದ ಮಂಡಗಳಲೆ ಬಸ್ ತುಂಗುದಾಣ ಉದ್ಘಾಟಿಸಿ ಮಾತನಾಡಿ, ಮಂಡಗಳಲೆ ಗ್ರಾಮದ ದಿ.ಕೆರಿಯಪ್ಪ ವಡ್ನಾಲ್ ಕುಟುಂಬ ಸ್ವಂತ ಹಣದಲ್ಲಿ ಮಂಡಗಳಲೆ ಬಸ್ ತಂಗುದಾಣ ನಿರ್ವಿುಸಿರುವುದು ಮಾದರಿ ಎಂದು ಶ್ಲಾಘಿಸಿದರು.

    ಇಂದು ಜನಸಂಖ್ಯೆ ಏರುತ್ತಿದ್ದು ಅದಕ್ಕೆ ಅನುಗುಣವಾಗಿ ಭೂಮಿ ದೊರೆಯಲು ಸಾಧ್ಯವಿಲ್ಲ. ಹೀಗಾಗಿ ಭೂಮಿ ಹೊಂದುವ ಕನಸಿನ ಬದಲಿಗೆ ಯುವಕರು ಉದ್ಯೋಗ ಹೊಂದಬೇಕು. ಅದು ಸಾಧ್ಯವಿಲ್ಲದಿರುವಾಗ ಸ್ವ ಉದ್ಯೋಗ ನಡೆಸಿ ಬದುಕು ಕಟ್ಟಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

    ಕಾಂಗ್ರೆಸ್ ಮá-ಖಂಡ ಬಿ.ಆರ್ ಜಯಂತ್ ಮಾತನಾಡಿ, ಕಷ್ಟದ ಅನುಭವಗಳು ಬದುಕನ್ನು ಪರಿಪಕ್ವಗೊಳಿಸುತ್ತವೆ. ತಾಲೂಕಿನಲ್ಲಿ ನಿಜವಾದ ಹೋರಾಟಗಾರರು ಈಡಿಗ ಸಮಾಜದವರಾಗಿದ್ದು ಅವರ ಹಠ, ಹೋರಾಟ, ಬದ್ಧತೆ, ಕೆಚ್ಚೆದೆ ಮೆಚ್ಚುವಂಥದ್ದು. ಕಾಗೋಡು ತಿಮ್ಮಪ್ಪ ಅವರ ಕೆಲಸ-ಕಾರ್ಯ, ಹೋರಾಟ, ಚಿಂತನೆಗಳು ಮುಂದಿನ ತಲೆಮಾರಿಗೆ ಮಾದರಿ ಎಂದರು.

    ಲಕ್ಷ್ಮಮ್ಮ ದೊಡ್ಡೇರಿ ಅಧ್ಯಕ್ಷತೆ ವಹಿಸಿದ್ದರು. ಕುಮುಟಾ ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಸುರೇಶ್ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಸದಸ್ಯ ರಾಜಶೇಖರ ಗಾಳಿಪುರ, ಸಾಗರ ಎಪಿಎಂಸಿ ಸದಸ್ಯ ಎಂ.ಹುಚ್ಚಪ್ಪ ಮಂಡಗಳಲೆ, ಸಾಗರ ತಾಪಂ ಉಪಾಧ್ಯಕ್ಷ ಅಶೋಕ್ ಬರದವಳ್ಳಿ, ರವಿ ಕುಗ್ವೆ, ಉಮೇಶ್, ಜಗದೀಶ್, ಹರೀಶ್ ಗೌಡ, ಪ್ರಶಾಂತ್ ಮೇಸ್ತ್ರಿ, ಮಹೇಶ್ ಗೌಳಿ, ರಮೇಶ್, ಶ್ರೀಕಾಂತ್, ಸೋಮಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts