More

    ತಡವಲಗಾದಲ್ಲಿ ಮೇವು ವಿತರಣಾ ಕೇಂದ್ರ ಆರಂಭ

    ಇಂಡಿ: ತಾಲೂಕಿನ ತಡವಲಗಾ ಗ್ರಾಮದಲ್ಲಿ ಜಾನುವಾರುಗಳಿಗೆ ಮೇವು ವಿತರಣಾ ಕೇಂದ್ರ ತೆರೆಯಲಾಗಿದೆ ಎಂದು ತಹಸೀಲ್ದಾರ್​ ಮಂಜುಳಾ ನಾಯಕ ಹೇಳಿದರು.

    ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಮೇವು ವಿತರಣಾ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಎತ್ತು, ಎಮ್ಮೆಗಳಿದ್ದರೆ ಪ್ರತಿದಿನ ತಲಾ ಒಂದಕ್ಕೆ 6 ಕೆಜಿಯಂತೆ ಮೂರು ದಿನಗಳಿಗಾಗಿ ಪ್ರತಿ ಕೆಜಿಗೆ 2 ರೂ. ದರದಲ್ಲಿ ಮೇವು ನೀಡಲಾಗುವುದು. ಅದರಂತೆ ಕುರಿ, ಮೇಕೆಯಂತಹ ಜಾನುವಾರುಗಳಿಗೆ ಪ್ರತಿ ದಿನಕ್ಕೆ 500 ಗ್ರಾಂದಂತೆ ಮೂರು ದಿವಸಕ್ಕೆ ಸಾಕಾಗುವಷ್ಟು ಮೇವು ವಿತರಿಸಲಾಗುವದು ಎಂದರು.

    ಹಿರಿಯ ಪಶು ವೈದ್ಯಾಧಿಕಾರಿ ಬಿ.ಎಚ್​. ಕನ್ನೂರ ಮಾತನಾಡಿ, ರೈತರು ಸಮೀಪದ ಚಿಕಿತ್ಸಾಲಯಕ್ಕೆ ಹೋಗಿ ತಮ್ಮ ಹತ್ತಿರ ಇರುವ ಜಾನುವಾರು ಸಂಖ್ಯೆ ಬರೆಯಿಸಿಕೊಂಡು ಬರಬೇಕು ಎಂದರು.

    ತಡವಲಗಾ ಗ್ರಾಮದ ರೆತರ ಬೇಡಿಕೆಯಂತೆ ಇಲ್ಲಿ ಮೇವು ವಿತರಣಾ ಕೇಂದ್ರ ಪ್ರಾರಂಭಿಸಿದ್ದು, ಬೇಡಿಕೆಗೆ ಅನುಗುಣವಾಗಿ ಬೇರೆ ಕಡೆಗೂ ಕೇಂದ್ರ ಪ್ರಾರಂಭಿಸಲಾಗುವುದು ಎಂದರು.

    ಡಾ. ರಾಜಕುಮಾರ ಅಡಿಕೆ, ಜೆ.ಐ. ಕರಣಿ, ಡಾ. ವಿಜಯ ಜವಳಗಿ, ಅಶೋಕ ಕಾಗರ, ರಾಮಣ್ಣ ಉಪ್ಪಾರ, ಕಂದಾಯ ಇಲಾಖೆಯ ಗೋಟ್ಯಾಳ, ಗ್ರಾಮ ಲೆಕ್ಕಾಧಿಕಾರಿ ಸಿದ್ದು ಪೂಜಾರಿ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts