More

    ಲಡಾಖ್‌ನಲ್ಲೀಗ ಫೈಟರ್‌ಜೆಟ್‌ಗಳ ಹಾರಾಟದ ಅಬ್ಬರ

    ನವದೆಹಲಿ/ಶ್ರೀನಗರ: ಚೀನಾದೊಂದಿಗಿನ ಘರ್ಷಣೆ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ತ್ವೇಷಮಯ ಪರಿಸ್ಥಿತಿ ನೆಲೆಸಿರುವ ಲಡಾಖ್ ಮತ್ತು ಲೇಹ್‌ನ ಆಗಸದಲ್ಲಿ ಇಂದು ಫೈಟರ್‌ಜೆಟ್‌ಗಳು, ಹೆಲಿಕಾಪ್ಟರ್‌ಗಳ ಸದ್ದು ನಿರಂತರವಾಗಿ ಕೇಳಿಬಂದು ಸ್ಥಳೀಯರಲ್ಲಿ ಆತಂಕವನ್ನು ಉಂಟು ಮಾಡಿತು.

    ಇತ್ತೀಚೆಗಷ್ಟೆ ಭಾರತೀಯ ಸೇನೆಗೆ ಸೇರ್ಪಡೆಯಾಗಿರುವ ಅಪಾಚೆ ಹೆಲಿಕಾಪ್ಟರ್‌ಗಳೂ ಇದರಲ್ಲಿ ಕಾಣಿಸಿಕೊಂಡವು. ಸುಖೋಯ್, ಮಿರಾಜ್, ಜಾಗ್ವಾರ್ ಯುದ್ಧ ವಿಮಾನಗಳೂ ಸೇರಿದಂತೆ ತನ್ನ ಮುಂಚೂಣಿ ಯುದ್ಧ ಪರಿಕರಗಳನ್ನು ಭಾರತೀಯ ವಾಯುಪಡೆ ಇಂದು ಗಡಿಯಲ್ಲಿ ಇನ್ನಷ್ಟು ಮುಂದೆ ತೆಗೆದುಕೊಂಡು ಹೋಯಿತು. ಅತಿ ಕಡಿಮೆ ಅವಧಿಯಲ್ಲಿ ಸೂಚನೆ ಬಂದರೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಅನುವಾಗುವಂತಹ ಸ್ಥಳಗಳಲ್ಲಿ ಅವುಗಳನ್ನೆಲ್ಲ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಭೂಸೇನೆಯ ತುಕಡಿಗಳು ಕಾರ್ಯ ನಿರ್ವಹಿಸುತ್ತಿರುವ ಪ್ರದೇಶಗಳಿಗೆ ಸಮೀಪದಲ್ಲೇ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಇನ್ನೊಂದೆಡೆ, ಗಡಿಯ ಆಚೆ ಕಡೆ ಚೀನಾ ವಾಯುಪಡೆ ಯಾವ ರೀತಿಯ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬ ಬಗ್ಗೆ ಭಾರತೀಯ ವಾಯುಪಡೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಅದರೆ ಚೀನಾ ಕೂಡ ಟಿಬೆಟ್‌ನಲ್ಲಿರುವ ತನ್ನ ವಾಯುನೆಲೆಯಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ತ್ವರಿತ ಗತಿಯಲ್ಲಿ ಹೊಂದಿಸಿಕೊಳ್ಳುತ್ತಿದೆ. ಇದು ಚೀನಾದಿಂದ ಅತಿ ಹೆಚ್ಚು ಅತಿಕ್ರಮಣ ನಡೆದಿರುವ ಪ್ಯಾಂಗಾಂಗ್ ಸರೋವರದ ಬಳಿಯೇ ಇದೆ ಎಂದು ಉಪಗ್ರಹ ಚಿತ್ರಗಳನ್ನು ಆಧರಿಸಿ ಕೆಲವು ವಾರ್ತಾಸಂಸ್ಥೆಗಳು ವರದಿ ಮಾಡಿವೆ.

    ಟಿಬೆಟ್‌ನಲ್ಲಿರುವ ವಾಯುನೆಲೆಗಳಲ್ಲದೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಸ್ಕರ್ಡು ವಾಯುನೆಲೆಯಲ್ಲಿಯೂ ಚೀನಾ ತನ್ನ ಫೈಟರ್ ಜೆಟ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ನಿಲ್ಲಿಸುವ ಸಾಧ್ಯತೆ ಇದೆ. ಇದನ್ನೂ ಭಾರತೀಯ ವಾಯುಪಡೆ ನಿಕಟವಾಗಿ ಗಮನಿಸುತ್ತಿದೆ. ಈವರೆಗೆ ಆ ಪ್ರದೇಶದಲ್ಲಿ ಚೀನಾ ವಿಮಾನಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

    ಚೀನಾದ ವಾಯುನೆಲೆಗಳು ಅತಿ ಎತ್ತರದಲ್ಲಿದ್ದು, ಅದರಿಂದ ಕಾರ್ಯಾಚರಣೆಗೆ ತೊಂದರೆಯಾಗುತ್ತದೆ. ವಿಮಾನಗಳು ಒಂದೇ ಸಲಕ್ಕೆ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಒಯ್ಯಲು ಸಾಧ್ಯವಾಗುವುದಿಲ್ಲ. ಆದರೆ ಭಾರತಕ್ಕೆ ಈ ಸಮಸ್ಯೆ ಇಲ್ಲ. ಜಮ್ಮು ಕಾಶ್ಮೀರದ ವಾಯುನೆಲೆಗಳು ಮಾತ್ರವಲ್ಲದೆ, ಬರೇಲಿ, ಆದಂಪುರ ಮುಂತಾದ ಸಮತಟ್ಟು ಪ್ರದೇಶದ ವಾಯುನೆಲೆಗಳಿಂದಲೂ ಭಾರತೀಯ ವಾಯುಪಡೆ ಸುಲಭವಾಗಿ ಕಾರ್ಯಾಚರಣೆ ನಡೆಸುತ್ತದೆ.

    ಚೀನಿಯರು ನಮ್ಮ ಭೂಭಾಗವನ್ನು ಅತಿಕ್ರಮಿಸಿಲ್ಲ: ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts