More

  ಹೋರಾಟದ ಮಾರ್ಗ ಹಾಕಿಕೊಟ್ಟ ಮಹಾನ್ ದಾರ್ಶನಿಕ ಡಾ.ಬಿ.ಆರ್.ಅಂಬೇಡ್ಕರ್ – ಪ್ರಭಾರ ಪ್ರಾಚಾರ್ಯ ಬಿ.ವಿ.ಚಿಕ್ಕರಡ್ಡೆಪ್ಪ ಅಭಿಮತ

  ಯಲಬುರ್ಗಾ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ ಬದುಕು ಬರಹ ಕುರಿತು ಯುವಜನರು ನಿರಂತರವಾಗಿ ಅಭ್ಯಾಸಿಸಬೇಕು ಎಂದು ಪ್ರಭಾರ ಪ್ರಾಚಾರ್ಯ ಬಿ.ವಿ.ಚಿಕ್ಕರಡ್ಡೆಪ್ಪ ಹೇಳಿದರು.

  ಸಮೀಪದ ಮಂಗಳೂರು ಗ್ರಾಮದ ಸಪಪೂ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೇವೂರಿನ ಎಸ್‌ಕೆಎಸ್ ವಿದ್ಯಾಭಿವೃದ್ಧಿ ಸಂಸ್ಥೆಯಿಂದ ಗುರುವಾರ ಹಮ್ಮಿಕೊಂಡಿದ್ದ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್‌ರವರ ಬದುಕು-ಬರಹ ಹಾಗೂ ಓದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅಂಬೇಡ್ಕರ್ ಅವರು ತಳ ಸಮುದಾಯದವರಿಗೆ ಹೋರಾಟದ ಮಾರ್ಗ ಹಾಕಿಕೊಟ್ಟ ಮಹಾನ್ ದಾರ್ಶನಿಕರಾಗಿದ್ದಾರೆ. ಜೀವನದಲ್ಲಿ ಕಠಿಣ ಪರಿಸ್ಥಿತಿ ಎದುರಾದರೂ ಜೀವನೋತ್ಸಾಹ ಕಳೆದುಕೊಳ್ಳಬಾರದು. ಎದುರಿಸುವ ಸಮರ್ಥ ಚಾಣಾಕ್ಷತನ ಬೆಳೆಸಿಕೊಳ್ಳಬೇಕು ಎಂದರು. ಎಸ್‌ಕೆಎಸ್ ವಿದ್ಯಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ದ್ಯಾಮಣ್ಣ ಗೊಂದಿ ಪ್ರಾಸ್ತಾವಿಕ ಮಾತನಾಡಿದರು.

  ಸಿಡಿಸಿ ಸದಸ್ಯರಾದ ಮಂಜುನಾಥ ಬಂಡಿ, ಪ್ರಕಾಶ ಬಡಿಗೇರ್, ಉಪನ್ಯಾಸಕರಾದ ಬಸವರಾಜ ತಳವಾರ್, ಗುರುರಾಜ, ಸುರೇಶ, ಶಾಂತಿನಿಕೇತನ ಕಾರ್ಯದರ್ಶಿ ರವೀಂದ್ರ ತೋಟದ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts