More

    ಪಂಜಾಬ್ ಮಾದರಿ ಕಾಯ್ದೆ ಜಾರಿಗೆ ತನ್ನಿ

    ಸೊರಬ: ರೈತರ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದು ಹಾಗೂ ಖರೀದಿ ಮಾಡುವುದನ್ನು ಕಾನೂನು ಪ್ರಕಾರ ಅಪರಾಧ ಎನ್ನುವ ಕಾಯ್ದೆಯನ್ನು ಪಂಜಾಬ್ ಸರ್ಕಾರ ತಂದಿದ್ದು ರಾಜ್ಯದಲ್ಲಿಯೂ ಇಂತಹ ಕಾನೂನು ಅನುಷ್ಠಾನಗೊಳಿಸಬೇಕು ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥ ಗೌಡ ಒತ್ತಾಯಿಸಿದರು.

    ರಾಜ್ಯ ಹಾಗೂ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರೈತರಿಂದ ಬೆಳೆ ಕೈತಪ್ಪಿದ ಮೇಲೆ ಸರ್ಕಾರ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರ ತೆರೆಯಲು ಮುಂದಾಗುವುದು ನಾಚಿಕೆಗೇಡಿನ ಸಂಗತಿ. ಸರ್ಕಾರಗಳು ರೈತ ವರ್ಗವನ್ನು ನಿರಂತರವಾಗಿ ತುಳಿಯುತ್ತಲೇ ಬಂದಿವೆ. ಇನ್ನಾದರೂ ದಲ್ಲಾಳಿಗಳು ಕನಿಷ್ಠ ದರಕ್ಕೆ ರೈತರ ಬೆಳೆ ಖರೀದಿ ಮಾಡುವುದನ್ನು ತಡೆಗಟ್ಟಲು ರಾಜ್ಯದಲ್ಲಿ ಪಂಜಾಬ್ ಮಾದರಿ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

    ರೈತ ಮುಖಂಡ ಉಮೇಶ್ ಪಾಟೀಲ್ ಮಾತನಾಡಿ, ರೈತರು ತಮ್ಮ ಬೆಳೆಯನ್ನು ರಸ್ತೆ ಪಕ್ಕದಲ್ಲಿ ಮಾರಾಟ ಮಾಡಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬಿಡುತ್ತಿಲ್ಲ. ಸಂತೆ ಮಾರುಕಟ್ಟೆಯಲ್ಲಿ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಇಲ್ಲ. ಜನರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಸಾಧ್ಯವಾಗದ ಸ್ಥಳೀಯ ಆಡಳಿತ ಕರೊನಾದಂತಹ ಸಂದರ್ಭದಲ್ಲೂ ರೈತರಿಗೆ ಬೀದಿ ಬದಿ ವ್ಯಾಪಾರ ಮಾಡಲು ಬಿಡುತ್ತಿಲ್ಲ ಎಂದು ದೂರಿದರು.

    ನಂತರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ತಾಲೂಕು ರೈತ ಸಂಘದ ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಮಂಜಪ್ಪ ಆರೇಕೊಪ್ಪ, ಶಿವಪುತ್ರಪ್ಪ ತತ್ತೂರು, ಸೈಯದ್ ಶಫಿವುಲ್ಲಾ, ಈಶ್ವರಪ್ಪ ಚಿಮಣೂರು, ನಾಗರಾಜ್, ಬಸವರಾಜ ಗೌಡ ಹೆಗ್ಗೋಡು, ನಿರ್ಮಲಾ, ವೀರನಗೌಡ, ಸುನೀತಾ, ಹನುಮಂತಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts