More

    ‘ರಾಹುಲ್ ಗಾಂಧಿ ವಲಸೆ ಕಾರ್ಮಿಕರ ಮಕ್ಕಳನ್ನು ಎತ್ತಿಕೊಂಡು, ಅವರೊಂದಿಗೆ ನಡೆದಿದ್ದರೆ ಚೆನ್ನಾಗಿತ್ತು…’

    ನವದೆಹಲಿ: 20 ಲಕ್ಷ ಕೋಟಿ ರೂಪಾಯಿ ಕೊವಿಡ್​-19 ನಿರ್ವಹಣಾ ವಿಶೇಷ ಆರ್ಥಿಕ ಪ್ಯಾಕೇಜ್​ನ ಐದನೇ ಹಾಗೂ ಕೊನೇ ಚರಣದಲ್ಲಿ ಯಾವ್ಯಾವ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಘೋಷಣೆ ಮಾಡಿದರು.

    ಇಂದು ಆರೋಗ್ಯ, ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ನರೇಗಾ, ನಗರಾಭಿವೃದ್ಧಿ ಹಾಗೂ ರಾಜ್ಯ ಸರ್ಕಾರದ ಸಂಪನ್ಮೂಲಗಳಿಗೆ ವಿಶೇಷ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.

    ಈ ಮಧ್ಯೆ ನಿರ್ಮಲಾ ಸೀತಾರಾಮನ್​ ಅವರು ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನವದೆಹಲಿಯ ಸುಖದೇವ್​ ವಿಹಾರ್​ ಮೇಲ್ಸೇತುವೆ ಮೇಲೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ವಲಸೆ ಕಾರ್ಮಿಕರ ಬಳಿ ತೆರಳಿದ್ದ ರಾಹುಲ್ ಗಾಂಧಿ, ಅವರನ್ನೂ ಕೂರಿಸಿ, ತಾವೂ ಅವರ ಬಳಿಯೇ ಕುಳಿತುಕೊಂಡು ಮಾತುಕತೆ ನಡೆಸಿದ್ದರು. ಸಮಸ್ಯೆಯನ್ನೂ ಆಲಿಸಿದ್ದರು. ಇದೀಗ ನಿರ್ಮಲಾ ಸೀತಾರಾಮನ್​ ಅವರು ರಾಹುಲ್ ಗಾಂಧಿಯವರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದೆಲ್ಲ ದೊಡ್ಡ ನಾಟಕ ಎಂದು ವ್ಯಂಗ್ಯವಾಡಿದ್ದಾರೆ.

    ಇದನ್ನೂ ಓದಿ: ನಿಯಂತ್ರಣಕ್ಕೆ ಬಾರದ ಕರೊನಾ: ಮೇ 31ರವರೆಗೆ ಲಾಕ್​ಡೌನ್​ ವಿಸ್ತರಣೆಗೆ ನಿರ್ಧಾರ

    ರಾಹುಲ್​ ಗಾಂಧಿಯವರು ಹೋಗಿ ವಲಸೆ ಕಾರ್ಮಿಕರ ಸಮಸ್ಯೆ ಆಲಿಸಿದ್ದು, ಅವರೊಂದಿಗೆ ಫ್ಲೈ ಓವರ್​ ಮೇಲೆ ಮಾತುಕತೆಗೆ ಇಳಿದಿದ್ದು ದೊಡ್ಡ ನಾಟಕ. ಕಾಂಗ್ರೆಸ್​ಗೆ ವಲಸೆ ಕಾರ್ಮಿಕರ ಬಗ್ಗೆ ಅಷ್ಟೆಲ್ಲ ಕಾಳಜಿ ಇರುವುದಾದರೆ, ಅವರಿಗೆ ಊರಿಗೆ ಹೋಗುವ ಸೂಕ್ತ ವ್ಯವಸ್ಥೆಗೆ ಮುಂದಾಗಬಹುದಲ್ಲ? ಕಾಂಗ್ರೆಸ್ ಆಡಳಿತ ಇರುವ ರಾಜ್ಯ ಸರ್ಕಾರಗಳು ನಮ್ಮ ಬಳಿ ಹೆಚ್ಚಿನ ರೈಲು ವ್ಯವಸ್ಥೆ ಮಾಡುವಂತೆ ಮನವಿ ಮಾಡಬಹುದಲ್ಲ? ಕಾಂಗ್ರೆಸ್​ನವರು ನಮ್ಮನ್ನು ಡ್ರಾಮೆಬಾಜ್​ (ನಾಟಕ ಮಾಡುವವರು) ಎಂದು ಕರೆಯುತ್ತಾರೆ. ಆದರೆ ನಿನ್ನೆ ರಾಹುಲ್ ಗಾಂಧಿ ಮಾಡಿದ್ದೇನು? ನಿನ್ನೆ ಕಾಲ್ನಡಿಗೆಯಲ್ಲಿ ತಮ್ಮ ಊರಿಗೆ ಹೊರಟಿದ್ದವರ ಬಳಿ ಹೋಗಿ ಕುಳಿತು ಮಾತನಾಡಿದ್ದಾರೆ. ಕಷ್ಟ ಆಲಿಸುವಂತೆ ರಸ್ತೆಯಲ್ಲಿ ಪೋಸ್​ ಕೊಟ್ಟಿದ್ದಾರೆ. ನಿಜ ಹೇಳಬೇಕು ಅಂದರೆ ಇವರು ಡ್ರಾಮೆಬಾಜಿ. ರಾಹುಲ್ ಗಾಂಧಿ ಹೀಗೆ ವಲಸೆ ಕಾರ್ಮಿಕರ ಪಕ್ಕ ಹೋಗಿ ಕುಳಿತು ಮಾತನಾಡುವ ಬದಲು, ಅವರೊಂದಿಗೆ ನಡೆಯಬಹುದಿತ್ತು. ಕಾರ್ಮಿಕರ ಮಕ್ಕಳನ್ನು, ಸೂಟ್​ಕೇಸ್​ಗಳನ್ನು ಎತ್ತಿಕೊಂಡು ಸಾಗಬಹುದಿತ್ತು ಎಂದು ಕುಟುಕಿದ್ದಾರೆ.

    ಇದನ್ನೂ ಓದಿ: ರಾಹುಲ್​ ಗಾಂಧಿ ಮಾತನಾಡಿಸಿದ್ದಕ್ಕೆ ವಲಸೆ ಕಾರ್ಮಿಕರ ಬಂಧನ?

    ಆದರೆ ನಾನು ಪ್ರತಿಪಕ್ಷಗಳಿಗೆ ಹೇಳುವುದಿಷ್ಟೇ, ವಲಸೆ ಕಾರ್ಮಿಕರಿಗೆ ಎದುರಾಗಿರುವ ಸಂಕಷ್ಟ ನಿವಾರಣೆಗೆ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಎಲ್ಲ ರಾಜ್ಯಗಳಲ್ಲೂ ಕಾರ್ಮಿಕರು ಕಷ್ಟ ಪಡುತ್ತಿದ್ದಾರೆ. ಅದೆಲ್ಲವನ್ನೂ ಸರಿಪಡಿಸಬೇಕು. ವಲಸಿಗರೊಂದಿಗೆ ನಾವು ಜವಾಬ್ದಾರಿಯುತವಾಗಿ, ಸೂಕ್ಷ್ಮವಾಗಿ ಮಾತನಾಡಬೇಕು. ಅದು ಬಿಟ್ಟು ಯಾರೂ ಇಂತಹ ನಾಟಕ ಮಾಡಬಾರದು ಎಂದು ನಾನು ಸೋನಿಯಾ ಗಾಂಧಿ ಜೀ ಅವರ ಎದುರು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಇಂದಿನ ಸುದ್ದಿಗೋಷ್ಠಿಯ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದರು. (ಏಜೆನ್ಸೀಸ್​)

    ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಸುದ್ದಿಗೋಷ್ಠಿ: ರಾಜ್ಯಗಳ ಸಾಲ ಪಡೆಯುವ ಮಿತಿ ಶೇ. 60ಕ್ಕೆ ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts