More

    ಕಾಸರಗೋಡು ಜಿಲ್ಲೆಯಲ್ಲಿ ಡಿಜಿಟಲ್ ಬ್ಯಾಂಕಿಂಗ್ ಪೂರ್ಣ

    ಕಾಸರಗೋಡು: ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬನಿಗೂ ಕನಿಷ್ಠ ಒಂದಾದರೂ ಡಿಜಿಟಲ್ ವಹಿವಾಟು ಸೌಲಭ್ಯ ಒದಗಿಸುವುದರೊಂದಿಗೆ ಕಾಸರಗೋಡು ಜಿಲ್ಲೆ ಸಂಪೂರ್ಣ ಡಿಜಿಟಲ್ ಬ್ಯಾಂಕಿಂಗ್ ಸಾಧನೆ ಮಾಡಿದೆ.

    ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯ ಅಂಗವಾಗಿ ಕೇರಳ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿಯ ಆದೇಶದ ಆಧಾರದ ಮೇಲೆ ರಾಜ್ಯದ ಎಲ್ಲ ಬ್ಯಾಂಕ್‌ಗಳು ಡಿಜಿಟಲ್ ಬ್ಯಾಂಕಿಂಗ್ ಜಾರಿಗೆ ತರುತ್ತಿವೆ. ಇದರ ಅಂಗವಾಗಿ ಎರಡನೇ ಹಂತದಲ್ಲಿ ಜಿಲ್ಲೆ ಮೊದಲ ಸಾಧನೆ ಮಾಡಿದೆ.

    ಈ ಮೂಲಕ ರಾಜ್ಯದಲ್ಲಿ ಸಂಪೂರ್ಣ ಡಿಜಿಟಲ್ ಬ್ಯಾಂಕಿಂಗ್ ತಲುಪಿದ ಮೂರನೇ ಜಿಲ್ಲೆಯಾಗಿ ಕಾಸರಗೋಡು ಗುರುತಿಸಲ್ಪಟ್ಟಿದೆ. ಮೊದಲ ಹಂತದಲ್ಲಿ ಕೊಟ್ಟಾಯಂ ಮತ್ತು ತ್ರಿಶೂರ್ ಸಂಪೂರ್ಣ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಇದರ ಆಧಾರದ ಮೇಲೆ ಪ್ರತಿ ಜಿಲ್ಲೆಯಲ್ಲೂ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಎರಡನೇ ಹಂತದಲ್ಲಿ ಘೋಷಣೆಯಾದ ಮೊದಲ ಜಿಲ್ಲೆ ಕಾಸರಗೋಡು ಆಗಿದೆ.

    ಜಿಲ್ಲೆಯಲ್ಲಿ 11 ಸಾರ್ವಜನಿಕ ವಲಯದ ಬ್ಯಾಂಕ್‌ಗಳು, 12 ಖಾಸಗಿ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಕೇರಳ ಬ್ಯಾಂಕ್, ಸಣ್ಣ ಹಣಕಾಸು ಬ್ಯಾಂಕ್ ಮತ್ತು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇರಿದಂತೆ 26 ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವೆಲ್ಲವೂ 276 ಶಾಖೆಗಳನ್ನು ಹೊಂದಿವೆ. ಈ ಬ್ಯಾಂಕ್‌ಗಳಲ್ಲಿನ 18.62 ಲಕ್ಷ ಖಾತೆಗಳಿಗೆ ಕನಿಷ್ಠ ಒಂದು ಡಿಜಿಟಲ್ ಸೌಲಭ್ಯ ಒದಗಿಸುವ ಮೂಲಕ ಜಿಲ್ಲೆಯಲ್ಲಿ ಸಂಪೂರ್ಣ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಾಗಿದೆ.

    ಯುಪಿಐ ವಹಿವಾಟು, ಡೆಬಿಟ್ ಯಾ ರೂಪೇ ಕಾರ್ಡ್ ವಿತರಣೆ, ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಎಇಪಿಎಸ್ ಮತ್ತು ಪಿಓಎಸ್ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಲಾಗಿದೆ.ಸಂಪೂರ್ಣ ಡಿಜಿಟಲೀಕರಣಕ್ಕಾಗಿ ಜೂನ್‌ನಲ್ಲಿ ಪ್ರಾರಂಭವಾದ ಕಾರ್ಯವಿಧಾನಗಳು ಎರಡೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts