More

    ಕನ್ನಡ ನುಡಿ ಶ್ರೀಮಂತ ಭಾಷೆ

    ದೇವರಹಿಪ್ಪರಗಿ: ಚುಟುಕು, ಜಾನಪದ, ಶರಣ, ವಚನ ಸೇರಿದಂತೆ ಹಲವು ಸಾಹಿತ್ಯಗಳಿಂದ ಕೂಡಿದ ಕನ್ನಡ ನುಡಿ ಶ್ರೀಮಂತ ಭಾಷೆಯಾಗಿದೆ ಎಂದು ಗದ್ದಿಗೆಮಠದ ಮಡಿವಾಳೇಶ್ವರ ಸ್ವಾಮೀಜಿ ಹೇಳಿದರು.
    ಪಟ್ಟಣದ ಕಲ್ಮೇಶ್ವರ ಸಭಾಭವನದಲ್ಲಿ ಭಾನುವಾರ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದೇವರಹಿಪ್ಪರಗಿ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಕನ್ನಡದ ಪ್ರಾಚೀನತೆ ಹಾಗೂ ಸಾಹಿತ್ಯ ಬೆಳೆದು ಬಂದ ಬಗೆ ವಿಸ್ತಾರ ಹಾಗೂ ವಿವಿಧ ಪ್ರಕಾರಗಳನ್ನು ನೋಡಿದಾಗ ಕನ್ನಡದ ಮಹತ್ವ ಎಂತಹುದು ಎಂದು ಅರಿವಾಗುತ್ತದೆ. ಇಂಥ ನುಡಿಯ ಕುರಿತು ಕನ್ನಡಿಗರಾದ ನಾವೆಲ್ಲಾ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
    ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಂಡೆಪ್ಪ ತೇಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಚುಟುಕು ಸಾಹಿತ್ಯ ಪರಿಷತ್ ಘಟಕಗಳಿಗೆ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುವುದು. ಸಾಹಿತ್ಯಾಸಕ್ತರು ಈ ಕಾರ್ಯಗಳಿಗೆ ಕೈಜೋಡಿಸಬೇಕು ಎಂದರು.

    ಚುಟುಕು ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಬಿ.ಸಿ. ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಸಾಲಳ್ಳಿ, ಉಪನ್ಯಾಸಕ ಎ.ಎಚ್. ನಾವಿ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್. ಬಸವರಡ್ಡಿ ಮಾತನಾಡಿದರು. ನಂತರ ನೂತನ ಪದಾಧಿಕಾರಿಗಳ ಪದಗ್ರಹಣ ಅಂಗವಾಗಿ ಪ್ರಮಾಣಪತ್ರ ವಿತರಿಸಲಾಯಿತು.

    ಸಮಾರಂಭದಲ್ಲಿ ಗೌರವಾಧ್ಯಕ್ಷ ಮುರುಗಯ್ಯ ಹಿರೇಮಠ, ಉಪಾಧ್ಯಕ್ಷ ಸಂಗಪ್ಪ ತಡವಲ, ಸಂಘಟನಾ ಕಾರ್ಯದರ್ಶಿ ಎಸ್.ಎಸ್. ಸಾತಿಹಾಳ, ಬಾಬುಗೌಡ ಪಾಟೀಲ, ವಿ.ಕೆ. ಪಾಟೀಲ, ಪಂಡಿತ ಅವಜಿ, ಪಂಡಿತ ಯಂಪೋರೆ, ರಮೇಶ ಕಲಕೇರಿ, ಜಗದೀಶ ಮಣೂರ, ಶ್ರೀಶೈಲ ಕಬ್ಬಿನ, ಸಂಗನಗೌಡ ಪಾಟೀಲ, ಷಣ್ಮುಖಪ್ಪ ಅಂಬಲಿ, ಚಂದ್ರಶೇಖರ ಕಿರಣಗಿ, ಇಮಾಮ್‌ಸಾಬ್ ಶಾಬಾದಿ, ಗುರನಗೌಡ ಬಿರಾದಾರ, ಶಂಕರಗೌಡ ಬಿರಾದಾರ, ಸಿದ್ದು ಮೇಲಿನಮನಿ, ಸಿ.ಕೆ. ಕುದರಿ, ಜೆ.ಆರ್. ಬಿರಾದಾರ, ನಾನಾಗೌಡ ಪಾಟೀಲ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts