More

    ಮೂಲಸೌಲಭ್ಯ ಕಲ್ಪಿಸದಿದ್ದರೆ ಹೋರಾಟದ ಎಚ್ಚರಿಕೆ

    ದಾವಣಗೆರೆ : ಮಹಾನಗರ ಪಾಲಿಕೆಯ 1ನೇ ವಾರ್ಡಿನಲ್ಲಿ ಮೂಲಸೌಲಭ್ಯ ಕೊರತೆಯಿಂದ ನಾಗರಿಕರು ತೊಂದರೆ ಅನುಭವಿಸುತ್ತಿದ್ದು ಅಗತ್ಯ ಕ್ರಮ ತೆಗೆದುಕೊಳ್ಳದಿದ್ದರೆ ಆ. 29 ರಂದು ಮೇಯರ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಆದಿಜಾಂಬವ ಸಂಘದ ನಗರ ಘಟಕದ ಅಧ್ಯಕ್ಷ ಟಿ. ರಮೇಶ್ ಹೇಳಿದರು.
    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಾಂಧಿನಗರ ಮತ್ತಿತರ ಬಡಾವಣೆಗಳಲ್ಲಿ ಚರಂಡಿ, ಒಳ ಚರಂಡಿಗಳು ತುಂಬಿ ತುಳುಕುತ್ತಿವೆ. ಯಾವುದೇ ಕಾಮಗಾರಿ ನಡೆಸದೇ ನಿರ್ಲಕ್ಷಿಸಲಾಗಿದೆ ಎಂದು ತಿಳಿಸಿದರು.
    ಕಾಂಗ್ರೆಸ್ ಸದಸ್ಯರ ವಾರ್ಡ್ ಎಂಬ ಕಾರಣಕ್ಕೆ ಉದಾಸೀನ ಮಾಡಲಾಗುತ್ತಿದೆ. ಮೇಯರ್ ನಮ್ಮ ವಾರ್ಡಿಗೆ ಒಮ್ಮೆಯೂ ಭೇಟಿ ನೀಡಿಲ್ಲ. ಇವರು ಕೇವಲ ಬಿಜೆಪಿ ಸದಸ್ಯರಿರುವ ವಾರ್ಡುಗಳಿಗೆ ಮಹಾಪೌರರೋ ಅಥವಾ 45 ವಾರ್ಡುಗಳಿಗೂ ಸಂಬಂಧಪಟ್ಟವರೋ ಎಂಬುದು ತಿಳಿಯುತ್ತಿಲ್ಲ ಎಂದು ದೂರಿದರು.
    ಈ ವಾರ್ಡಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಈಗ ಮಳೆಗಾಲವಾದ್ದರಿಂದ ಚರಂಡಿಗಳು ದುರ್ವಾಸನೆ ಬೀರುತ್ತಿವೆ. ಮ್ಯಾನ್‌ಹೋಲ್‌ಗಳು ಕಟ್ಟಿಕೊಂಡಿವೆ, ಇದರಿಂದ ಸ್ಥಳೀಯ ನಿವಾಸಿಗಳ ಆರೋಗ್ಯ ಕೆಡುತ್ತಿದೆ ಎಂದು ಹೇಳಿದರು.
    ಗಾಂಧಿನಗರ 2, 3, 5ನೇ ಕ್ರಾಸ್‌ಗಳಲ್ಲಿ ಚರಂಡಿ ಕೆಲಸಗಳಾಗಬೇಕು. 5 ಮತ್ತು 6ನೇ ಕ್ರಾಸ್ ಮಧ್ಯದ ಕನ್ಸರ್‌ವೆನ್ಸಿಯಲ್ಲಿ ಒಳಚರಂಡಿ ಹಾಗೂ ಸಿಸಿ ಪೇವಿಂಗ್ ಮಾಡಬೇಕು. ಗಾಂಧಿನಗರದ ರುದ್ರಭೂಮಿ ರಸ್ತೆಯ ಹುಲುಗಾಂಬಿಕಾ ದೇವಸ್ಥಾನದ ಹತ್ತಿರವಿರುವ ವಾಚನಾಲಯದ ದುರಸ್ತಿಯಾಗಬೇಕು ಎಂದು ಒತ್ತಾಯಿಸಿದರು.
    ಸಂಘದ ಮುಖಂಡರಾದ ಡಿ. ಮಲ್ಲಿಕಾರ್ಜುನ, ನಿಂಗರಾಜ, ರವಿ, ಬಸವರಾಜ, ಸಂತೋಷ್, ಪವನ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts