More

    ಬಸವ ತತ್ವದಿಂದ ಮನ ಪರಿವರ್ತನೆ

    ದಾವಣಗೆರೆ : ಬಸವತತ್ವ ಹಾಗೂ ಶರಣರ ಚರಿತ್ರೆಗಳು ಮಾನವನ ಮನಸ್ಸನ್ನು ಪರಿವರ್ತನೆಗೊಳಿಸಿ ಜ್ಞಾನಿಯನ್ನಾಗಿಸುತ್ತವೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
     ನಗರದ ದೊಡ್ಡಪೇಟೆಯ ವಿರಕ್ತಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 113ನೇ ವರ್ಷದ ಶ್ರಾವಣಮಾಸ ಕಾರ್ಯಕ್ರಮದ ನಿತ್ಯ ಕಲ್ಯಾಣ ಸಮಾರೋಪ ಹಾಗೂ ಶರಣ ಚರಿತಾಮೃತ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಮಾನವನ ಅರಿವಿಗೆ ಇಂದು ಮರೆವು ಬಂದಿದೆ. ವರ್ತನೆ, ಗುಣ, ಸ್ವಭಾವಗಳು ಬದಲಾಗಿದ್ದು ಅವುಗಳನ್ನು ಮತ್ತೆ ಪರಿವರ್ತನೆ ಮಾಡಬೇಕಿದ್ದು ಇದಕ್ಕಾಗಿ ಶರಣರ ಪ್ರವಚನ ಕೇಳಬೇಕು ಎಂದು ತಿಳಿಸಿದರು.
     ಶರಣರ ಅನುಭಾವವು ಭಕ್ತಿಗೆ ಹಾಗೂ ಮುಕ್ತಿಗೆ ಆಧಾರ. ಅನುಭಾವವಿಲ್ಲದ ಭಕ್ತಿ ಬತ್ತಿದ ಕೆರೆಯಂತೆ. ಅನುಭಾವದಿಂದ ಅಂತರಂಗ ಶುದ್ಧಿಯಾಗುತ್ತದೆ. ಅಂತರಂಗ-ಬಹಿರಂಗ ಎರಡರಲ್ಲೂ ಒಂದಾದವರು ಜಗತ್ತಿಗೆ ಬೆಳಕಾಗುತ್ತಾರೆ. ಅವರೇ ಬಸವಾದಿ ಶರಣರು ಎಂದು ಹೇಳಿದರು.
      ಪ್ರಪಂಚದಲ್ಲಿ ಎಲ್ಲದಕ್ಕಿಂತ ವೇಗವಾಗಿ ಬದಲಾಗುವುದು ನಮ್ಮ ಮನಸ್ಸು ಮತ್ತು ಕೆಟ್ಟ ಆಲೋಚನೆಗಳು. ಇದಕ್ಕೆ ಕಡಿವಾಣ ಹಾಕಿದಾಗ ಬದುಕು ಸುಂದರವಾಗುತ್ತದೆ. ಶರಣರ ನೆನೆದು ಭವವನ್ನು ಗೆಲ್ಲಬೇಕು ಹಾಗೂ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.
     ಪ್ರವಚನಕಾರ ಡಾ.ಎನ್.ಬಿ.ನಾಗರಹಳ್ಳಿ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಸಮಾಜ ಸೇವಕ ಡಾ.ಸಿ.ಆರ್.ನಸೀರ್ ಅಹಮದ್ ವಿರಕ್ತಮಠ ಸಮಿತಿ ಸದಸ್ಯ ಚಿಗಟೇರಿ ಜಯದೇವ, ಲುಂಬಿನಿ ಕಾಲೇಜಿನ ಗಂಗಾಧರ ಇದ್ದರು. 10 ನೇ ತರಗತಿಯಲ್ಲಿ ಶೇ.94 ಅಂಕ ಗಳಿಸಿದ ವಿರಕ್ತಮಠ ಶಾಲೆಯ ವಿದ್ಯಾರ್ಥಿನಿ ಶ್ರೀಗೌರಿ ಅವರನ್ನು ಪುರಸ್ಕರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts