More

    ಸೇವಾ ಮನೋಭಾವನೆ ಬೆಳೆಸುವ ಎನ್ನೆಸ್ಸೆಸ್

    ದಾವಣಗೆರೆ : ವ್ಯಕ್ತಿತ್ವ ವಿಕಸನ, ರಾಷ್ಟ್ರಪ್ರೇಮ ಹಾಗೂ ಸೇವಾ ಮನೋಭಾವ ಬೆಳೆಸುವ ಒಂದು ದೊಡ್ಡ  ಸಂಘಟನೆಯೇ ರಾಷ್ಟ್ರೀಯ ಸೇವಾ ಯೋಜನೆ ಎಂದು ಎಆರ್‌ಎಂ ಕಾಲೇಜು ಪ್ರಾಚಾರ್ಯ ಪ್ರೊ.ಎಂ.ಬಿ.ಅಣ್ಣಪ್ಪ ಹೇಳಿದರು.
     ನಗರದ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
     ಗಾಂಧೀಜಿಯವರ ಜನ್ಮ ಶತಮಾನೋತ್ಸವ ಅಂಗವಾಗಿ 1969ರ ಸೆಪ್ಟೆಂಬರ್ 24 ರಂದು ರಾಷ್ಟ್ರೀಯ ಸೇವಾ ಯೋಜನೆಗೆ ಚಾಲನೆ ನೀಡಲಾಯಿತು. ಕೌಶಲ್ಯ ಹೊರತೆಗೆಯುವುದೇ ಇದರ ಪ್ರಮುಖ ಉದ್ದೇಶ ಎಂದು ತಿಳಿಸಿದರು.
     ಕಾಲೇಜಿನ ಪ್ರಾಚಾರ್ಯೆ ಪ್ರೊ.ಜಿ.ಸಿ.ನೀಲಾಂಬಿಕಾ ಅಧ್ಯಕ್ಷತೆ ವಹಿಸಿದ್ದರು. ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ.ಎ.ಬಿ.ವಿಜಯಕುಮಾರ್, ಡಾ.ಎಂ.ಮಂಜಪ್ಪ, ಪ್ರೊ.ಟಿ.ಆರ್.ರಂಗಸ್ವಾಮಿ, ಪ್ರೊ.ಜೆ.ತಾರಾರಾಣಿ, ಎಸ್.ಪರಮೇಶಿ, ಡಾ. ಕಾವ್ಯ, ಸುರೇಖಾ ಇದ್ದರು.
     ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ಆರ್.ರಾಘವೇಂದ್ರ ಸ್ವಾಗತಿಸಿದರು. ಆಶಾ ನಿರೂಪಿಸಿದರು, ಡಾ.ಪ್ರವೀಣ್ ಕುಮಾರ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts