More

    ನ್ಯಾಯ ಸಿಗುವವರೆಗೂ ನಿಲ್ಲಲ್ಲ ಹೋರಾಟ

    ದಾವಣಗೆರೆ : ರೈತ ಬೆಳೆದ ಫಸಲಿಗೆ ಉತ್ತಮ ಬೆಲೆ ನಿಗದಿಪಡಿಸುವ ಜತೆಗೆ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ನಲ್ಲೂರು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಹಮ್ಮಿಕೊಂಡ ಪಾದಯಾತ್ರೆ ಮಂಗಳವಾರ ತ್ಯಾವಣಿಗೆ ಗ್ರಾಮ ತಲುಪಿ, ಅಲ್ಲಿನ ಗ್ರಾಪಂ ಎದುರು ಸಾರ್ವಜನಿಕರ ಸಭೆ ನಡೆಸಲಾಯಿತು.
     ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯಿದೆ ಜಾರಿ ಮಾಡುವಂತೆ ಒತ್ತಾಯಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರಚನೆ ಮಾಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.
     ಒಂದೆಡೆ ರಾಜ್ಯ ಸರ್ಕಾರ ಉಚಿತ ಅಕ್ಕಿ ನೀಡಿದರೆ ಮತ್ತೊಂದೆಡೆ ಕೇಂದ್ರ ಸರ್ಕಾರ ಭಾರತ್ ರೈಸ್ ಹೆಸರಿನಲ್ಲಿ 29 ರೂ.ಗೆ ಅಕ್ಕಿ ಬಿಡುಗಡೆ ಮಾಡಿ, ಭತ್ತ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ ಎಂದರು.
     ರೈತ ಮುಖಂಡ ಕುಕ್ಕವಾಡ ಮಂಜುನಾಥ್ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಸಾಮಾನ್ಯರು ಮತ್ತು ರೈತರ ಪರವಾಗಿ ಕಾಯಿದೆ ಜಾರಿಗೊಳಿಸದೆ ಬಂಡವಾಳಶಾಹಿಗಳ ಪರ ಕಾನೂನು ಜಾರಿ ಮಾಡುತ್ತಿದೆ ಎಂದು ಆರೋಪಿಸಿದರು.
     ಜಿಪಂ ಮಾಜಿ ಸದಸ್ಯ ಪಿ.ಸಿ. ಗೋವಿಂದಸ್ವಾಮಿ ಮಾತನಾಡಿ, ತ್ಯಾವಣಿಗೆ ಗ್ರಾಮವು ತಾಲೂಕು ಕೇಂದ್ರವಾಗುವ ಎಲ್ಲ ಅರ್ಹತೆ ಹೊಂದಿದ್ದು, ಸಂಬಂಧಿಸಿದ ಅಧಿಕಾರಿಗಳು ತಾಲೂಕು ಕೇಂದ್ರ ಮಾಡಬೇಕೆಂದು ಒತ್ತಾಯಿಸಿದರು.
     ಅಸ್ತಪನಹಳ್ಳಿ ಗಂಡುಗಲಿ, ಗ್ರಾಪಂ ಅಧ್ಯಕ್ಷ ಕರಿಬಸಪ್ಪ, ಮುಖಂಡರಾದ ಶರಣಮ್ಮ, ಕೋಗಲೂರು ಕುಮಾರ, ಉಪ್ಪನಾಯಕಹಳ್ಳಿ ಉಮೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts