More

    ರೈತ ವಿರೋಧಿ ತಿದ್ದುಪಡಿ ಕೈಬಿಡಲು ಒತ್ತಾಯ

    ದಾವಣಗೆರೆ: ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆ, ಬೀಜ ಕಾಯ್ದೆಗಳ ತಿದ್ದುಪಡಿ ಕೈ ಬಿಡಲು ಆಗ್ರಹಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಅಡಿ ವಿವಿಧ ಸಂಘಟನೆಗಳು ಆವರಗೊಳ್ಳ, ಕಕ್ಕರಗೊಳ್ಳ, ಕಡ್ಲೇಬಾಳ್, ತೋಳಹುಣಸೆ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದವು.

    ವಿವಿಧ ಸಂಘಟನೆಗಳು ಪ್ರತಿಭಅಲ್ಲಿನ ಪಿಡಿಒ ಮೂಲಕ ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಮನವಿಪತ್ರ ರವಾನಿಸಿದರು.

    ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಎಚ್.ಜಿ.ಉಮೇಶ್ ತೋಳಹುಣಸೆಯಲ್ಲಿ ಮಾತನಾಡಿ, ಈಗಿನ ಕೃಷಿ ಮಾರುಕಟ್ಟೆ ಪದ್ಧತಿಯನ್ನು ರದ್ದುಗೊಳಿಸಿದರೆ ವರ್ತಕರು ಬಹುರಾಷ್ಟ್ರೀಯ ಕಂಪನಿಯ ಮಾರುಕಟ್ಟೆಗಳಲ್ಲಿ ಗುಮಾಸ್ತರಾಗಿ, ರೈತರು ಜೀತದಾಳುಗಳಾಗಿ ಕೆಲಸ ಮಾಡುವ ದಿನಗಳು ದೂರವಿಲ್ಲ ಎಂದು ಆತಂಕ ವ್ಯಕ್ತ ಪಡಿಸಿದರು.

    ಬಿಕೆಎಂಯು ಜಿಲ್ಲಾ ಸಂಚಾಲಕ ಐರಣಿ ಚಂದ್ರು, ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಇ.ಶ್ರೀನಿವಾಸ, ರೈತ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಭಗತ್‌ಸಿಂಹ, ತೋಳಹುಣಸೆಯ ಜಯಪ್ಪ, ಶೇಖರ್, ಮಂಜಪ್ಪ ಗೌಡ್ರು, ಕೆ.ಎಂ.ನಾಗರಾಜ್, ಆವರಗೆರೆ ಬಾನಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts