More

    ಕಾಡು ಪ್ರಾಣಿಗಳಿಂದ ಫಸಲು ನಾಶ

    ಸೋಮವಾರಪೇಟೆ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಭತ್ತ ಹಣ್ಣಾಗುತ್ತಿದ್ದು ಕಾಡು ಪ್ರಾಣಿಗಳು ಫಸಲು ಹಾನಿಗೊಳಿಸುತ್ತಿರುವುದರಿಂದ ಕೃಷಿಕರು ಕಂಗಾಲಾಗಿದ್ದಾರೆ.

    ಕೂತಿ ಗ್ರಾಮದಲ್ಲಿ ಪ್ರತಿವರ್ಷ ಕಾಡಾನೆ, ಕಾಡುಕೋಣ, ಕಾಡುಹಂದಿಗಳ ಹಾವಳಿ ನಿರಂತರವಾಗಿದೆ. ಈಗ ನವಿಲು ಫಸಲು ಹಾನಿಗೊಳಿಸುತ್ತಿವೆ ಎಂದು ರೈತರು ದೂರಿದ್ದಾರೆ.

    ಕೂತಿ ಗ್ರಾಮದ ಕೆ.ಕೆ.ನಾಗರತ್ನಾ ಹಾಗೂ ಮಂಜುಳಾ ಅವರ ಭತ್ತದ ಗದ್ದೆಗೆ ಶನಿವಾರ ರಾತ್ರಿ ಕಾಡು ಹಂದಿಗಳು ಮತ್ತು ಕಾಡೆಮ್ಮೆಗಳು ನುಗ್ಗಿ ಕಟಾವಿಗೆ ಬಂದಿದ್ದ ಭತ್ತದ ಫಸಲನ್ನು ತಿಂದು ತುಳಿದು ನಷ್ಟಪಡಿಸಿರುವುದರಿಂದ ಸಾವಿರಾರು ರೂ.ನಷ್ಟವಾಗಿದೆ. ಈ ಬಗ್ಗೆ ಕಂದಾಯ, ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts