More

    ಜೀವಿತ ಅವಧಿ ಕುಗ್ಗಿಸಲಿರುವ ಮಾದಕ ವಸ್ತುಗಳ ಸೇವನೆ

    ಪಿರಿಯಾಪಟ್ಟಣ: ಮಾದಕ ವಸ್ತುಗಳ ಸೇವನೆ ಜೀವಿತ ಅವಧಿಯನ್ನೇ ಕುಗ್ಗಿಸಲಿದೆ ಎಂದು ಮೈಸೂರಿನ ಕ್ಲಿಯರ್ ಮೆಡಿ ರೇಡಿಯೆಂಟ್ ಆಸ್ಪತ್ರೆ ವೈದ್ಯೆ ಡಾ.ಅನಿತಾ ಶೇಷಾದ್ರಿ ತಿಳಿಸಿದರು.

    ಲಯನ್ಸ್ ಸೇವಾ ಸಂಸ್ಥೆ ಮತ್ತು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಬುಧವಾರ ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಆಯೋಜಿಸಿದ್ದ ಮಾದಕ ವ್ಯಸನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವ ಜನರಲ್ಲಿ ಕುತೂಹಲಕ್ಕಾಗಿ ಆರಂಭಗೊಳ್ಳುವ ಮಾದಕ ವಸ್ತು ಸೇವನೆ ನಂತರದ ದಿನಗಳಲ್ಲಿ ವ್ಯಸನವಾಗಿ ಮಾರ್ಪಟ್ಟು ದೊಡ್ಡ ಅನಾಹುತವನ್ನು ಸೃಷ್ಟಿಸಲಿದೆ ಎಂದರು.

    ಪೊಲೀಸ್ ಇನ್ಸ್‌ಪೆಕ್ಟರ್ ಕೆ.ವಿ.ಶ್ರೀಧರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನರು ಮಾದಕ ವಸ್ತುಗಳಿಗೆ ಹೆಚ್ಚು ಆಕರ್ಷಿತರಾಗುತ್ತಿರುವುದು ಆತಂಕಕಾರಿಯಾದ ವಿಷಯ ಎಂದರು.

    ಕಾರ್ಯಕ್ರಮದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಭಾರ ಪ್ರಾಂಶುಪಾಲ ಸೋಮಶೇಖರ್, ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಕೆ.ಮಂಜುನಾಥ್ ಸಿಂಗ್ ಮಾತನಾಡಿದರು. ಲಯನ್ ಸಂಸ್ಥೆ ಸದಸ್ಯರಾದ ಕೆ.ಎ.ಮಹದೇವಪ್ಪ, ಗಿರೀಶ್, ಲವ ಕುಮಾರ್, ವಿನೋದ್, ಪಿ.ಕೆ.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts