More

    ಮುಖ್ಯಮಂತ್ರಿ ವೇಗಕ್ಕೆ ಸ್ಪಂದಿಸದ ಮಂತ್ರಿಗಳನ್ನು ಕೈಬಿಡಿ

    ಚಿತ್ರದುರ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ವಯಸ್ಸಿಗೆ ಮೀರಿದ ಉತ್ಸಾಹದಿಂದ ಕೆಲಸ ಮಾಡುತ್ತಿದ್ದು ಅವರ ವೇಗಕ್ಕೆ ಸ್ಪಂದಿಸಿದ ಸಚಿವರನ್ನು ಕೈ ಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡುವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮನವಿ ಮಾಡಿದ್ದಾರೆ.

    ಆಂತರಿಕ ಪ್ರಜಾಪ್ರಭುತ್ವದಡಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೇನೆ. ನಮ್ಮ ಸರ್ಕಾರದಲ್ಲಿ ಪ್ರತಿ ಬಾರಿ ಕೆಲವರೇ ಮಂತ್ರಿಗಳಾಗುತ್ತಿದ್ದಾರೆ. ಚಿತ್ರದುರ್ಗಕ್ಕೆ ಹೊರಗಿನವರೇ ಉಸ್ತುವಾರಿಗಳಾಗುತ್ತಿದ್ದಾರೆ ಎಂದು ಸುದ್ದಿಗೊಷ್ಠಿಯಲ್ಲಿ ಶುಕ್ರವಾರ ಅಸಮಾಧಾನ ಹೊರ ಹಾಕಿದರು.

    ತಾಲೂಕುಗಳನ್ನು ಸುತ್ತಿರುವುದಿಲ್ಲ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಅರಿವಿರುವುದಿಲ್ಲ. ರಾಷ್ಟ್ರೀಯ ಹಬ್ಬದ ದಿನಗಳಂದು ಧ್ವಜಾರೋಹಣ ಮಾಡಿದರೆ ಸಾಲದು. ಕೆಡಿಪಿ ಸೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತಂತೆ ಶಾಸಕರ ಜತೆ ಜಿಲ್ಲಾ ಉಸ್ತುವಾರಿ ಸಚಿವರು ಚರ್ಚೆ ನಡೆಸಿಲ್ಲ ಎಂದು ಶ್ರೀರಾಮುಲು ಅವರ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

    ರಾಜ್ಯದ 10-12 ಹಿರಿಯ ಶಾಸಕರ ಪೈಕಿ ನಾನೂ ಒಬ್ಬ.ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕು. ಪಕ್ಷದ ಚೌಕಟ್ಟಿನಲ್ಲೇ ಮಂತ್ರಿ ಮಾಡಿ ಎಂದು ಕೇಳುತ್ತಿದ್ದೇನೆ ಹೊರತು ಇದು ಭಿನ್ನಮತವಲ್ಲ. ಪಕ್ಷದ ವರ್ಚಸ್ಸಿಗೆ ಎಳ್ಳಷ್ಟು ಧಕ್ಕೆ ಬರದಂತೆ ಹಕ್ಕು ಪ್ರತಿಪಾದಿಸುತ್ತಿದ್ದೇನೆ ಎಂದರು.

    ಕರೊನಾದ ಸಮಯದಲ್ಲಿ ಸಂಪುಟ ವಿಸ್ತರಣೆಯ ನಂಬಿಕೆ ಇಲ್ಲ. ಕಾಂಗ್ರೆಸ್ಸಿನಿಂದ ಬಂದಿರುವವರನ್ನು ಮಂತ್ರಿ ಮಾಡಿರುವುದು ಸ್ವಾಗತಾರ್ಹ. ಬೆಂಗಳೂರು ಸಭೆ ಮಾಹಿತಿ ಇರಲಿಲ್ಲ. ಸಭೆ ನಡೆದಿದ್ದನ್ನು ಭಿನ್ನಮತವೆಂದು ಕರೆಯಲಾಗದೆಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts