More

    ‘ಆಚಾರ್ಯ’ ಚಿತ್ರಕ್ಕೆ ಬಹುಕೋಟಿ ವೆಚ್ಚದ ದೇವಸ್ಥಾನದ ಸೆಟ್​

    ಹೈದರಾಬಾದ್​: ‘ಮೆಗಾಸ್ಟಾರ್​’ ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರದ ಚಿತ್ರೀಕರಣ ಡಿಸೆಂಬರ್​ನಿಂದಲೇ ಪ್ರಾರಂಭವಾಗಿದ್ದು, ಇದೀಗ ಭರದಿಂದ ಸಾಗುತ್ತಿದೆ. ಈ ಚಿತ್ರಕ್ಕಾಗಿ ಹೈದರಾಬಾದ್​ನ ಹೊರವಲಯದಲ್ಲಿ ಒಂದು ದೊಡ್ಡ ದೇವಸ್ಥಾನದ ಸೆಟ್​ ಹಾಕಲಾಗಿದ್ದು, ಅಲ್ಲಿ ಸದ್ಯ ಚಿತ್ರೀಕರಣ ನಡೆಯುತ್ತಿದೆ.

    ಇದನ್ನೂ ಓದಿ: ಬಿ. ಸರೋಜಾದೇವಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸ್ಯಾಂಡಲ್​ವುಡ್​ ತಾರೆಯರು

    ‘ಆಚಾರ್ಯ’ ಚಿತ್ರದ ಬಹಳಷ್ಟು ಭಾಗ ಒಂದು ಸಣ್ಣ ನಗರದಲ್ಲಿ ನಡೆಯುತ್ತದಂತೆ. ಬೃಹತ್​ ದೇವಸ್ಥಾನವಿರುವ ಈ ಪಟ್ಟಣಕ್ಕಾಗಿ ಚಿತ್ರತಂಡ ಸಾಕಷ್ಟು ಹುಡುಕಾಟ ನಡೆಸಿದ್ದು, ಕೊನೆಗೆ ಹೈದರಾಬಾದ್​ನ ಹೊರವಲಯದಲ್ಲಿ 20 ಎಕರೆ ಜಾಗದಲ್ಲಿ ಒಂದು ಬೃಹತ್​ ದೇವಸ್ಥಾನ ಸೇರಿದಂತೆ ಹಲವು ಸೆಟ್​ಗಳ ನಿರ್ಮಾಣ ಮಾಡಲಾಗಿದೆ.

    ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಹೋಗಿದ್ದ ಚಿರಂಜೀವಿ ಅವರೇ ಈ ಸೆಟ್​ ನೋಡಿ ಬೋಲ್ಡ್​ ಆಗಿದ್ದಾರೆ. ಇದು ಎಲ್ಲರಿಗೂ ಗೊತ್ತಾಗಬೇಕು ಎಂಬ ನಿಟ್ಟಿನಲ್ಲಿ ಒಂದು ವೀಡಿಯೋ ಮಾಡಿ, ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಹಾಕಿಕೊಂಡಿದ್ದಾರೆ. ಸಾಮಾನ್ಯವಾಗಿ ಸ್ಟಾರ್​ ನಟ-ನಟಿಯರು ತಮ್ಮ ಪಾತ್ರ ಅಥವಾ ಗೆಟಪ್​ಗಳ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವುದು ವಾಡಿಕೆ. ಆದರೆ, ಕಲಾ ನಿರ್ದೇಶಕರ ಕೆಲಸವನ್ನು ತುಂಬಾ ಮೆಚ್ಚಿಕೊಂಡಿರುವ ಮೆಗಾಸ್ಟಾರ್​, ಆ ಕೆಲಸದ ಬಗ್ಗೆ ಇತರರಿಗೂ ಗೊತ್ತಾಗಲಿ ಎಂಬ ಕಾರಣಕ್ಕೆ ವೀಡಿಯೋ ಮಾಡಿ ಹಾಕಿದ್ದಾರಂತೆ.

    ಈ ಕುರಿತು ಮಾತನಾಡಿರುವ ಅವರು. ‘ಆಚಾರ್ಯ ಚಿತ್ರಕ್ಕಾಗಿ ಒಂದು ಬೃಹತ್​ ದೇವಸ್ಥಾನದ ಸೆಟ್​ ಹಾಕಲಾಗಿದೆ. 20 ಎಕರೆ ಪ್ರದೇಶದಲ್ಲಿ ಈ ಸೆಟ್​ ನಿರ್ಮಾಣವಾಗಿದೆ. ಇಂಥದ್ದೊಂದು ಬೃಹತ್​ ದೇವಸ್ಥಾನದ ಕನಸು ಕಾಣುವುದರ ಜತೆಗೆ ಸೆಟ್​ ಹಾಕಿಸಿದ ಸುರೇಶ್​ ಮತ್ತು ಕೊರಟಾಲ ಶಿವ ಅವರನ್ನು ಎಷ್ಟು ಹೊಗಳಿದರೂ ಸಾಲದು’ ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ‘ಕೆಜಿಎಫ್​ ಚಾಪ್ಟರ್ 2’ ಬಿಡುಗಡೆ ದಿನಾಂಕ ಲೀಕ್ ಆಯ್ತಾ?; ಈ ದಿನದಂದು ಬರ್ತಿದ್ದಾನೆ ರಾಕಿಭಾಯ್!

    ‘ಆಚಾರ್ಯ’ ಚಿತ್ರದಲ್ಲಿ ಚಿರಂಜೀವಿ ಅವರಿಗೆ ಕಾಜಲ್​ ಅಗರ್​​ವಾಲ್​ ನಾಯಕಿಯಾಗಿ ನಟಿಸಿದ್ದು, ಮಿಕ್ಕಂತೆ ರಾಮ್​ಚರಣ್​ ತೇಜ, ಸೋನು ಸೂದ್​ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊರಟಾಲ ಶಿವ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಮೇ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಲಾಕ್​ಡೌನ್​ ನಂತರ ನಾಲ್ಕನೇ ಚಿತ್ರಕ್ಕೆ ಬಣ್ಣ ಹಚ್ಚಿದ ಅಕ್ಷಯ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts