More

    ಕೇಂದ್ರ ಸರ್ಕಾರವನ್ನು ನಿರ್ದಯ ಸರ್ಕಾರವೆಂದು ಕರೆದ ಪಿ.ಚಿದಂಬರಂ; ಪ್ರಧಾನಿ ಮೋದಿ ಮತ್ತು ನಿರ್ಮಲಾ ಸೀತಾರಾಮನ್​ಗೆ ಎರಡು ಪ್ರಶ್ನೆಗಳು…

    ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲಾಕ್​ಡೌನ್​ನಿಂದಾಗಿ ಕಷ್ಟಪಡುತ್ತಿರುವ ಬಡವರು, ನಿರ್ಗತಿಕರ ಜೀವನಕ್ಕೆ ಆಸರೆಯಾಗದ ನಿರ್ದಯ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಸರಣಿ ಟ್ವೀಟ್​ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಗೆ ಎರಡು ಪ್ರಶ್ನೆ ಕೇಳಿದ್ದಾರೆ.

    ಲಾಕ್​ಡೌನ್​​ನಿಂದ ಹೊಟ್ಟೆಗಿಲ್ಲದೆ ಪರದಾಡುತ್ತಿರುವವರ ಹಸಿವನ್ನು ಕೇಂದ್ರ ಸರ್ಕಾರ ಏಕೆ ನೀಗಿಸುತ್ತಿಲ್ಲ ಮತ್ತು ಬಡ ಕುಟುಂಬಗಳಿಗೇಕೆ ಹಣ ವರ್ಗಾವಣೆ ಮಾಡುತ್ತಿಲ್ಲ? ಎಂದು ಕೇಳಿರುವ ಚಿದಂಬರಂ, ಕೇಂದ್ರ ಸರ್ಕಾರದ ಫುಡ್​ ಕಾರ್ಪೋರೇಶನ್​ ಆಫ್​ ಇಂಡಿಯಾದಿಂದ 77 ಮಿಲಿಯನ್​ ಟನ್​ ಧಾನ್ಯಗಳಲ್ಲಿ ಒಂದು ಚಿಕ್ಕ ಪ್ರಮಾಣವನ್ನೂ ಬಡ ಕುಟುಂಬಗಳಿಗೆ ಉಚಿತವಾಗಿ ನೀಡಲು ಮೀಸಲಿಡಲಾಗುತ್ತಿಲ್ಲವೇ? ಹೀಗಾದರೆ ಅವರು ತಮ್ಮನ್ನು ತಾವು ಪೋಷಿಸಿಕೊಳ್ಳುವುದು ಹೇಗೆ ಎಂದು ಎರಡನೇ ಪ್ರಶ್ನೆಯನ್ನು ಕೇಳಿದ್ದಾರೆ.

    ಇವೆರಡೂ ಆರ್ಥಿಕತೆ ಮತ್ತು ನೈತಿಕತೆಗೆ ಸಂಬಂಧಪಟ್ಟ ಪ್ರಶ್ನೆಗಳು. ಇದಕ್ಕೆ ಉತ್ತರಿಸಲು ವಿಫಲರಾಗಿರುವ ನರೇಂದ್ರ ಮೋದಿ ಮತ್ತು ನಿರ್ಮಲಾ ಸೀತಾರಾಮನ್​ ಅವರನ್ನುಇಡೀ ದೇಶದ ಜನರು ಅಸಹಾಯಕತೆಯಿಂದ ನೋಡದೆ ಬೇರೆ ದಾರಿ ಇಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

    ಎಷ್ಟೋ ಜನರ ಬಳಿ ಇದ್ದ ಹಣ ಖಾಲಿ ಆಗಿದೆ. ಗಳಿಸಲು ಕೆಲಸವಿಲ್ಲ. ಹಾಗಾಗಿ ಉಚಿತ ಆಹಾರ ಸಿಗುವಲ್ಲಿ ಕ್ಯೂ ನಿಲ್ಲುವವರ ಸಂಖ್ಯೆ ಹೆಚ್ಚಾಗಿದೆ. ಒಂದು ನಿರ್ದಯ, ಕ್ರೂರ ಸರ್ಕಾರ ಮಾತ್ರ ಅದನ್ನು ಸುಮ್ಮನೆ ನೋಡುತ್ತದೆ ಹೊರತು ಇನ್ನೇನೂ ಮಾಡುವುದಿಲ್ಲ ಎಂದು ಹರಿಹಾಯ್ದಿದ್ದಾರೆ.

    ಇನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೂಡ ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಬರೀ ಲಾಕ್​ಡೌನ್​ ಸಾಕಾಗುವುದಿಲ್ಲ. ಕೊವಿಡ್​ ಟೆಸ್ಟಿಂಗ್​ ಪ್ರಮಾಣ ಹೆಚ್ಚಾಗಬೇಕು ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts