More

    ಉದ್ಘಾಟನೆಯಾದ 2 ವರ್ಷಗಳಲ್ಲೇ ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ದೇಗುಲ ಕಾರಿಡಾರ್​​​​ ಎಷ್ಟೆಲ್ಲಾ ಬದಲಾಗಿದೆ?

    ವಾರಣಾಸಿ: ಕಾಶಿ ವಿಶ್ವನಾಥ ಧಾಮದಲ್ಲಿ ಇಂದು ಎರಡನೇ ಸಂಸ್ಥಾಪನಾ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಬಾಬಾ ವಿಶ್ವನಾಥ್ ಅವರ ಜಲಾಭಿಷೇಕ, ವಿಧಿವಿಧಾನದಂತೆ ಪೂಜೆ ಹವನ ನೆರವೇರಿತು. ಅಪಾರ ಸಂಖ್ಯೆಯ ಭಕ್ತರು ಬಾಬಾರವರ ಬಾಗಿಲಿಗೆ ತಲೆಬಾಗಿ ನಮಿಸಿದರು.
    ಡಿಸೆಂಬರ್ 13ಕ್ಕೆ ಕಾಶಿ ವಿಶ್ವನಾಥ ಧಾಮ ಉದ್ಘಾಟನೆಯಾಗಿ ಎರಡು ವರ್ಷಗಳು ಪೂರ್ಣಗೊಂಡಿವೆ. ಸಂಸ್ಥಾಪನಾ ದಿನದ ಹಿಂದಿನಿಂದಲೇ ಕಾಶಿ ವಿಶ್ವನಾಥ ಧಾಮವನ್ನು ಅಲಂಕರಿಸಲು ಸಿದ್ಧತೆ ನಡೆದಿತ್ತು. 

    ಕಾಶಿ ವಿಶ್ವನಾಥ ಧಾಮ ಸ್ಥಾಪನೆಯಾಗಿ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಕಾಶಿ ವಿಶ್ವನಾಥ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ವಿಧಿವಿಧಾನದಂತೆ ಜಲಾಭಿಷೇಕ, ಪೂಜೆ ಹವನ ನೆರವೇರಿಸಿದರು.
    ಇಂದು ಎರಡನೇ ಸಂಸ್ಥಾಪನಾ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 2021 ರ ಡಿಸೆಂಬರ್ 13 ರಂದು ಹೊಸ ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು.

    ಉದ್ಘಾಟನೆಯಾದ 2 ವರ್ಷಗಳಲ್ಲೇ ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ದೇಗುಲ ಕಾರಿಡಾರ್​​​​ ಎಷ್ಟೆಲ್ಲಾ ಬದಲಾಗಿದೆ?

    ದೇವಾಲಯದ ಆಡಳಿತದ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ 13 ಕೋಟಿಗೂ ಹೆಚ್ಚು ಭಕ್ತರು ಬಾಬಾ ವಿಶ್ವನಾಥನ ದರ್ಶನ ಪಡೆದಿದ್ದಾರೆ. ಕಾಶಿ ವಿಶ್ವನಾಥ ದೇಗುಲದಲ್ಲಿ ಭಕ್ತರಿಗೆ ಮೊದಲಿಗಿಂತ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ. ಧಾರ್ಮಿಕ ಪ್ರವಾಸೋದ್ಯಮದ ದೃಷ್ಟಿಯಿಂದ ಕಾಶಿ ವಿಶ್ವನಾಥ ಧಾಮವು ದೇಶದ ಪ್ರಮುಖ ಸ್ಥಳವಾಗಿದೆ. ಎರಡನೇ ಸಂಸ್ಥಾಪನಾ ದಿನದಂದು ಬಾಬಾ ಕಾಶಿ ವಿಶ್ವನಾಥ್ ಅವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಕಾಶಿ ವಿಶ್ವನಾಥ ಧಾಮ ಸಂಕೀರ್ಣದ ಹೊರಭಾಗದಲ್ಲಿಯೂ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.

    ಇದುವರೆಗೆ ಏನೆಲ್ಲಾ ಅಭಿವೃದ್ಧಿಯಾಗಿದೆ?
    * ಅಂದಿನಿಂದ 13 ಕೋಟಿಗೂ ಹೆಚ್ಚು ಭಕ್ತರು ವಿಶ್ವನಾಥ ಧಾಮಕ್ಕೆ ಭೇಟಿ ನೀಡಿದ್ದಾರೆ. 2019 ರಲ್ಲಿ ಕೇವಲ 69 ಲಕ್ಷ ಭಕ್ತರು ಭೇಟಿ ನೀಡಿದ್ದರು ಎನ್ನಲಾಗಿದೆ. 
    * ಶೇ.34ಕ್ಕಿಂತಲೂ ಹೆಚ್ಚು ಉದ್ಯೋಗಾವಕಾಶಗಳನ್ನು ಪ್ರವಾಸೋದ್ಯಮ ವಲಯದಲ್ಲಿ ಮಾತ್ರ ಸೃಷ್ಟಿಸಲಾಗಿದೆ.
    * ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಜನರ ಗಳಿಕೆಯು 65% ರಷ್ಟು ವೃದ್ಧಿಯಾಗಿದೆ.
    * ದೇವಸ್ಥಾನದ ವಿಸ್ತೀರ್ಣವು ಹಿಂದೆ 3000 ಚದರ ಅಡಿಯಿತ್ತು. ಪ್ರಸ್ತುತ 5 ಲಕ್ಷ ಚದರ ಅಡಿಗಳಷ್ಟು ಹೆಚ್ಚಾಗಿದೆ.
    * 40 ಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳನ್ನು ಮರುಶೋಧಿಸಲಾಗಿದೆ ಮತ್ತು ಪುನಃಸ್ಥಾಪಿಸಲಾಗಿದೆ.

    ಭಾರತದಲ್ಲಿ ಚಾಕೊಲೇಟ್‌ಗೆ ಹೆಚ್ಚಿದ ಬೇಡಿಕೆ…ಅಬ್ಬೋ, ಇವುಗಳ ಬೆಲೆ ಕಾರ್ಮಿಕರ ಒಂದು ತಿಂಗಳ ಸಂಬಳವಾಗಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts