More

    ಬಿಜೆಪಿ ಎಸ್ಪಿ ಮೊರ್ಚಾ ಸಮಾವೇಶ

    ಇಂಡಿ: ಪ್ರಥಮ ಬಾರಿಗೆ ಬಿಜೆಪಿ ಎಸ್ಪಿ ಮೋರ್ಚಾ ಬೃಹತ್ ಸಮಾವೇಶ ಮಾ. 4ರಂದು ಪಟ್ಟಣದಲ್ಲಿ ಹಮ್ಮಿಕೊಂಡಿದ್ದು ರಾಜ್ಯ ಜಿಲ್ಲಾ ಹಾಗೂ ವಿವಿಧ ಮೋರ್ಚಾ ಪದಾಧಿಕಾರಿಗಳು, ಮುಖಂಡರು ಆಗಮಿಸಲಿದ್ದಾರೆ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಮನವಿ ಮಾಡಿದರು.

    ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 4ರಂದು ಸಂಜೆ 5 ಗಂಟೆಗೆ ಪಟ್ಟಣದ ಸಿಂದಗಿ ರಸ್ತೆಯ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಅವರ ಮನೆ ಪಕ್ಕದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

    ಜಿಲ್ಲೆಯ ಎಲ್ಲಾ ಮತಕ್ಷೇತ್ರದಲ್ಲೂ ವಿವಿಧ ಮೋರ್ಚಾಗಳಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಒಟ್ಟು ಏಳು ಮೋರ್ಚಾಗಳಿದ್ದು ನಾಗಠಾಣ ಮತಕ್ಷೇತ್ರದಲ್ಲಿ ಮಹಿಳಾ ಮೋರ್ಚಾ, ಬಬಲೇಶ್ವರ ಎಸ್ಸಿ ಮೋರ್ಚಾ, ಬಸವನಬಾಗೇವಾಡಿ ರೈತ ಮೋರ್ಚಾ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

    ಸಮಾವೇಶಕ್ಕೆ ತಳವಾರ ಸಮುದಾಯ ಬಲ ನೀಡಲಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ತಳವಾರ ಸಮುದಾಯವನ್ನು ಪ.ಪಂ. ಗೆ ಸೇರ್ಪಡೆಗೊಳಿಸಿ ಜಾತಿ ಪ್ರಮಾಣ ಪತ್ರ ವಿತರಣೆಯಾಗುತ್ತಿದೆ. ಹಾಗಾಗಿ ಆ ಸಮುದಾಯ ಜಿಲ್ಲೆಯ ಎಲ್ಲಾ ತಾಲೂಕಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

    ಸಂಸದ ರಮೇಶ ಜಿಗಜಿಣಗಿ ಜಿಲ್ಲೆಯ ಅಭಿವದ್ಧಿಗೆ ಲಕ್ಷ ಲಕ್ಷ ಕೋಟಿ ರೂಪಾಯಿ ಅನುದಾನ ತೆಗೆದುಕೊಂಡು ಬಂದು ಅಭಿವದ್ಧಿ ಪಡಿಸಿದ್ದಾರೆ. ಚತುಷ್ಪತ ರಸ್ತೆ, ದ್ವೀಪಥ ರಸ್ತೆ, ರೈಲುಹಳಿ ಡಬ್ಬಲಿಂಗ್, ವಿದ್ಯುತ್ ಚಾಲಿತ ರೈಲು ಇನ್ನೂ ಅನೇಕ ಅಭಿವದ್ಧಿ ಕಾರ್ಯಕ್ರಮಗಳು ಮಾಡಿದ್ದಾರೆ ಎಂದು ಹೇಳಿದರು.

    ಬಿಜೆಪಿನ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಬಸವನ ಬಾಗೇವಾಡಿ ಮತಕ್ಷೇತ್ರದ ಗೊಳಸಂಗಿ ಗ್ರಾಮದಲ್ಲಿ ರೈತ ಮೋರ್ಚಾ ಸಮಾವೇಶ ಮಾರ್ಚ್ 5 ರಂದು ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಬಿ.ವೈ. ವಿಜಯೇಂದ್ರ, ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ, ಕೇಂದ್ರ ಹಾಗೂ ರಾಜ್ಯದ ಪ್ರಮುಖರು ಭಾಗವಹಿಸಲಿದ್ದಾರೆ. ಇಂಡಿ ತಾಲೂಕಿನಿಂದಲೂ ಅತೀ ಹೆಚ್ಚಿನ ಕಾರ್ಯಕರ್ತರು ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿಮಾಡಿಕೊಂಡರು.

    ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ, ಹಾಲು ಪ್ರಕೋಷ್ಟದ ಸಂಚಾಲಕ ಹಣಮಂತರಾಯಗೌಡ ಪಾಟೀಲ, ಬಾಪುರಾಯ ಲೋಣಿ, ರಾಜು ಕಾಡೆ, ರಾಘವೇಂದ್ರ ಕಾಪಸೆ, ರಜನಿಕಾಂತ್ ಕಲ್ಲೂರ, ಎಸ್ಟಿ ಮೋರ್ಚಾ ತಾಲ್ಲೂಕು ಅಧ್ಯಕ್ಷ ರವಿ ನಾಯ್ಕಡಿ, ಅದಷಪ್ಪ ವಾಲಿ, ರಾಜಶೇಖರ ಯರಗಲ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts