More

    ಸುಳ್ಳುಗಳಿಂದಲೇ ಜನರ ವಂಚಿಸುತ್ತಿರುವ ಬಿಜೆಪಿ: ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಪುಟ್ಟಸಿದ್ದೇಗೌಡ ಆರೋಪ

    ಮೈಸೂರು: ಅಭಿವೃದ್ಧಿಯನ್ನೇ ಮಾಡದೆ ಕೇವಲ ಸುಳ್ಳು ಆಶ್ವಾಸನೆ ನೋಡುವ ಮೂಲಕ ಬಿಜೆಪಿ ಮತದಾರರನ್ನು ವಂಚಿಸುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ಅಧ್ಯಕ್ಷ ಪುಟ್ಟಸಿದ್ದೇಗೌಡ ದೂರಿದರು.
    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಮೈಸೂರು- ಕೊಡಗು, ಚಾಮರಾಜನಗರ ಭಾಗದ ಕಾರ್ಮಿಕ ವಿಭಾಗದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
    ಮತದಾರರಿಗೆ ವಂಚಿಸುವ ಕೆಲಸವನ್ನು ಬಿಜೆಪಿ ನಿರಂತರವಾಗಿ ಮಾಡುತ್ತಲ್ಲೇ ಬಂದಿದೆ. ಸುಳ್ಳು ಆಶ್ವಾಸನೆ ಕೊಟ್ಟು, ಅಭಿವೃದ್ಧಿ ಮಾಡದೆ ಸುಳ್ಳುಗಳನ್ನೇ ಹೇಳುತ್ತಿದ್ದರೆ ಅದು ದೇಶದ್ರೋಹವಲ್ಲದೆ ಮತ್ತೇನು ಎಂದು ಪ್ರಶ್ನಿಸಿದ ಅವರು, ದೇಶದ ಸಾಲದ ಬಡ್ಡಿಗಾಗಿಯೇ ಆದಾಯದ ಶೇ.48ರಷ್ಟು ಹಣ ಭರಿಸಬೇಕಾದ ಸ್ಥಿತಿ ಎದುರಾಗಿದೆ. 18 ಸಾವಿರಕ್ಕೂ ಹೆಚ್ಚಿನ ಕಾರ್ಖಾನೆ ಬಿಜೆಪಿ ಅವಧಿಯಲ್ಲಿ ಮುಚ್ಚಿವೆ. ನಿರುದ್ಯೋಗ, ಬಡತನ ಹೆಚ್ಚಾಗಿದೆ ಎಂದು ಆರೋಪಿಸಿದರು.
    ಮಹಿಳೆಯರಿಗೆ 2 ಸಾವಿರ ರೂ. ಕೊಡುವ ಜತೆಗೆ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಜನರಿಗೆ ಅನುಕೂಲ ಮಾಡಿಕೊಡುವುದಲ್ಲದೆ ರೈತರು, ಕಾರ್ಮಿಕ, ಯುವಕರ ಪರ ಯೋಜನೆಗಳನ್ನು ರೂಪಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಹೇಳಿದರು.
    ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಬೂತ್ ಮಟ್ಟದಲ್ಲಿ ಕಾರ್ಮಿಕ ವಿಭಾಗದ ಕಾರ್ಡ್‌ಗಳನ್ನು ಹಂಚಿ ಇಲಾಖೆಯಲ್ಲಿನ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ದೇಶದಲ್ಲಿ ಕಾಂಗ್ರೆಸ್ ನೀಡಿರುವ 25 ಗ್ಯಾರಂಟಿ ಹಾಗೂ 7 ನ್ಯಾಯಯುತ ಭರವಸೆಯ ಪ್ರಣಾಳಿಕೆಯನ್ನು ಜನರಿಗೆ ತಲುಪಿಸುವ ಕೆಲಸವನ್ನು ನೀವೆಲ್ಲರೂ ಮಾಡಿ. ಇದು ದೇಶದ ಚುನಾವಣೆಯಲ್ಲ. ಬದಲಿಗೆ ವಿಶ್ವವೇ ತಿರುಗಿ ನೋಡುತ್ತಿರುವ ಚುನಾವಣೆಯಾಗಿದ್ದು, ಇದರಲ್ಲಿ ಗೆಲ್ಲುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಿ ಎಂದು ಹೇಳಿದರು.
    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ನರೇಂದ್ರ ಮಾತನಾಡಿ, ಗ್ಯಾರಂಟಿ ಜತೆಗೆ ಅನೇಕ ಜನಪರ ಯೋಜನೆಗಳ ಅನುಷ್ಠಾನಕ್ಕೆ ಕಾಂಗ್ರೆಸ್ ಮುಂದಾಗಿದ್ದು, ಇದನ್ನು ಜನರಿಗೆ ಕಾರ್ಯಕರ್ತರು ಮನವರಿಕೆ ಮಾಡಿಕೊಡಬೇಕು ಎಂದು ಕೋರಿದರು.
    ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹರಿಣಿಗೌಡ, ಕಾಮಾಕ್ಷಿಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್, ಕಾರ್ಮಿಕ ವಿಭಾಗದ ಮೈಸೂರು ಜಿಲ್ಲಾಧ್ಯಕ್ಷ ಮಂಜು ಕೋಟೆ, ವಿಭಾಗದ ಅಧ್ಯಕ್ಷ ಷಿಪ್ಟಾನ್, ಚಾಮರಾಜನಗರ ಜಿಲ್ಲಾಧ್ಯಕ್ಷ ಮಹೇಶ್, ಕೊಡುಗು ಜಿಲ್ಲಾಧ್ಯಕ್ಷ ದಿನೇಶ್ ಶೆಟ್ಟಿ, ಕಾನೂನು ವಿಭಾಗದ ಸಲಹೆಗಾರ ಧನಂಜಯ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts