More

    ಸರ್ವರ ದೇಹದಲ್ಲೂ ಸೂರ್ಯನ ಅಂಶ

    ಭರಮಸಾಗರ: ಇಲ್ಲಿನ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಆವರಣದಲ್ಲಿ ಇತ್ತೀಚೆಗೆ ಸಾಮೂಹಿಕ ಸೂರ್ಯನಮಸ್ಕಾರ ನಡೆಯಿತು.

    ಸೂರ್ಯೋಪಾಸನೆ, ಸಾಮೂಹಿಕ ಪ್ರಾರ್ಥನೆ ಹಾಗೂ ವೈದ್ಯಕೀಯ ತಪಾಸಣೆ ಉಚಿತ ಶಿಬಿರ ಮೂಲಕ ರಥಸಪ್ತಮಿಯನ್ನು ವಿಶೇಷವಾಗಿ ಆಚರಿಸಲಾಯಿತು.

    ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದಾವಣಗೆರೆ ಪ್ರಭಾರ ಷಣ್ಮುಖ, ಮಾಘಮಾಸದ ಸಪ್ತಮಿ ದಿವಸ ಸೂರ್ಯನಿಗೆ ನಮಿಸುವ ಸಲುವಾಗಿ ಸೂರ್ಯ ನಮಸ್ಕಾರ ಮಾಡಬೇಕು. ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿ ಸೂರ್ಯನ ಅಂಶವಿದೆ. ಅದನ್ನು ಜಾಗೃತಗೊಳಿಸಿದರೆ ಇಡಿ ದೇಹ ಸದೃಢವಾಗಿರುತ್ತದೆ ಎಂದು ತಿಳಿಸಿದರು.

    ಬೆಳಗ್ಗೆ 5ಕ್ಕೆ ಆರಂಭವಾದ ರಥಸಪ್ತಮಿ ಕಾರ್ಯಕ್ರಮದಲ್ಲಿ ಹಠ ಯೋಗ, ಸೌರ ವಿಜ್ಞಾನ ಹಾಗೂ ಅಧ್ಯಾತ್ಮ ಕುರಿತ ಚರ್ಚೆ, ಧ್ಯಾನ, 108 ಸೂರ್ಯ ನಮಸ್ಕಾರ, ಸೂರ್ಯನಿಗೆ ಅರ್ಘ್ಯ ಸಲ್ಲಿಕೆ ಕಾರ್ಯಗಳು ನಡೆದವು.

    ಯೋಗಗುರು ತಿಪ್ಪೇಸ್ವಾಮಿ, ಸೂರ್ಯ ನಮಸ್ಕಾರ ಸಹಿತ ಯೋಗಾಭ್ಯಾಸ ಮಾಡಿಸಿದರು.

    ನಂತರ ಚಿತ್ರದುರ್ಗ ಅಮೃತ ಆಯುರ್ವೇದ ಮೆಡಿಕಲ್ ಕಾಲೇಜು ವತಿಯಿಂದ ಆರೋಗ್ಯ ತಪಾಸಣೆ ಉಚಿತ ಶಿಬಿರ ನಡೆಯಿತು. ಯೋಗ ಸಮಿತಿ ಅಧ್ಯಕ್ಷ ಮುನಿಸ್ವಾಮಿ, ಭಾರತ ಸ್ವಾಭಿಮಾನ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಡಾ.ಪ್ರಶಾಂತ್, ಡಾ.ಶಾರದಾ, ಡಾ.ವೀರೇಶ್ ಮುಗದೂರು, ಶಿಕ್ಷಕಿ ಪುಷ್ಪಾ ಮತ್ತಿತರರಿದ್ದರು.

    ಸ್ಥಳೀಯ ಓಂಕಾರ ಯೋಗ ಚಿಕಿತ್ಸಾ ಕೇಂದ್ರ, ಪತಂಜಲಿ ಯೋಗ ಸಮಿತಿ, ವಿಶ್ವಹಿಂದು ಪರಿಷತ್, ಭಜರಂಗದಳ, ಡಿವಿಎಸ್ ಪಿಯು ಕಾಲೇಜು, ಚಿತ್ರದುರ್ಗದ ಅಮೃತ ಆಯುರ್ವೇದ ಮೆಡಿಕಲ್ ಕಾಲೇಜು ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts